Saturday, November 23, 2024
Homeರಾಜ್ಯಹೋಟಲ್‌, ಮದುವೆ, ಸಮಾರಂಭಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಕ್ರಮ : ಸಚಿವ ಮುನಿಯಪ್ಪ

ಹೋಟಲ್‌, ಮದುವೆ, ಸಮಾರಂಭಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಕ್ರಮ : ಸಚಿವ ಮುನಿಯಪ್ಪ

ಬೆಂಗಳೂರು,ಜೂ.13- ಐಶಾರಾಮಿ ಹೋಟಲ್‌ಗಳಲ್ಲಿ ಮದುವೆ ಮಂಟಪಗಳು, ಸಾರ್ವಜನಿಕ ಸಮಾರಂಭದಲ್ಲಿ ಜನರು ಆಹಾರವನ್ನು ಶೇಕಡಾ 10 ರಷ್ಟು ಪದಾರ್ಥಗಳನ್ನು ತಟ್ಟೆಯಲ್ಲೇ ಬಿಟ್ಟು ವ್ಯರ್ಥ ಮಾಡುತ್ತಿದ್ದಾರೆ. ಅದನ್ನು ತಡೆಯಲು ನಾವು ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಕರೆ ನೀಡಿದ್ದಾರೆ.

ನಗರದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ ಇನ್‌ಕ್ರೆಡಿಬಲ್‌ ಚೆ್‌‍ ಚಾಲೆಂಜ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಆಹಾರ ಪದ್ದತಿ ವಿಭಿನ್ನವಾಗಿದ್ದು, ಆರೋಗ್ಯ ಹದಗೆಡುತ್ತಿದೆ. ಪಾಲೀಶ್‌ ಮಾಡಲಾದ ಅಕ್ಕಿ ಬಳಕೆಯಿಂದ ಸಾರ್ವಜನಿಕರಲ್ಲಿ ಮಧುಮೇಹದಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಇವನ್ನು ತಡೆಯಲು ರಾಗಿಯನ್ನು ಹೆಚ್ಚಾಗಿ ಬಳಸಬೇಕು ಎಂದು ಹೇಳಿದರು.

ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನದ ಪ್ರಯೋಜನವನ್ನು ಸಾರ್ವಜನಿಕರು ಹಾಗೂ ಹೋಟೆಲ್‌ ಮಾಲಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಈಗಿನ ಜನರು ಫಾಸ್ಟ್‌ ಫುಡ್‌ ಕಡೆ ಹೆಚ್ಚಿನ ಒತ್ತು ನೀಡುವುದರಿಂದ ಬೇರೆಬೇರೆ ಸ್ವರೂಪದ ಖಾದ್ಯ ಪದಾರ್ಥಗಳು ದೊರೆಯುತ್ತಿವೆ. ಇವುಗಳಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಈ ಮೊದಲು ಜನರು ರಾಗಿ, ನವಣೆ, ಸಜ್ಜೆ, ಆಕಾರ್‌ ಮೊದಲಾದ ಧಾನ್ಯಗಳನ್ನು ಬಳಕೆ ಮಾಡುತ್ತಿದ್ದರು. ಇದರಿಂದ ಆರೋಗ್ಯ ಉತ್ತಮವಾಗಿರುತ್ತಿತ್ತು.

ಆತಿಥ್ಯ, ಸಾರಿಗೆ ಹಾಗು ಪ್ರವಾಸೋದ್ಯಮ ಕ್ಷೇತ್ರಕ್ಕೆ ಇನ್ನೊಂದು ಹೆಸರೇ ನಮ ಕರ್ನಾಟಕ. ನಮ ರಾಜ್ಯದ ಮುಕುಟ ಮಣಿಯಂತಿರುವ ಬೆಂಗಳೂರಿನಲ್ಲಿ ಐತಿಹಾಸಿಕ ಸಮೇಳನಕ್ಕೆ ಸಾಕ್ಷಿಯಾಗುತ್ತಿದೆ.

ದಕ್ಷಿಣ ಭಾರತ ಬಾಣಸಿಗರ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ ಇನ್‌ಕ್ರೆಡಿಬಲ್‌ ಚೆ್‌‍ ಚಾಲೆಂಜ್‌ ಸ್ಪರ್ಧೆ ಯುವ ಪಾಕಶಾಲೆಯ ಪ್ರತಿಭೆಗಳಿಗೆ ವೇದಿಕೆಯಾಗಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ರಮೇಶ್‌ ಚಂದ್ರ ಲಹೋಟೆ ಅಧ್ಯಕ್ಷರು ಎ್‌‍ ಕೆಸಿಸಿ, ಧಾಮೋದರ್‌, ಪಂಕಜ್‌ ಕೊರಾಠಿ, ಪಿಸಿ ರಾವ್‌ ಅಧ್ಯಕ್ಷರು ಬಿ.ಬಿ.ಎಚ್‌.ಎ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

Latest News