ಮುಂಬೈ, ಅ17 (ಪಿಟಿಐ)- ಹೂಡಿಕೆದಾರರಿಗೆ ದೇಶದೊಂದಿಗೆ ಪಾಲುದಾರರಾಗಲು ಅವಕಾಶವಿದೆ ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ನ ಭಾಗವಾಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಲ್ಲಿನ ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ, ಜಿ-20 ಶೃಂಗಸಭೆಯಲ್ಲಿ ಭಾರತವು ಕಾರಿಡಾರ್ ಕುರಿತು ಒಮ್ಮತವನ್ನು ರೂಪಿಸಲು ಮುಂದಾಳತ್ವ ವಹಿಸಿದೆ ಎಂದು ಹೇಳಿದರು.
ಕೆಲವೇ ದೇಶಗಳು ಅಭಿವೃದ್ಧಿ, ಜನಸಂಖ್ಯಾಶಾಸ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯಿಂದ ಆಶೀರ್ವದಿಸಲ್ಪಟ್ಟಿವೆ ಎಂದು ಮೋದಿ ಹೇಳಿದರು ಮತ್ತು ಭಾರತದ ಬೆಳವಣಿಗೆಯ ಪ್ರಯಾಣದ ಭಾಗವಾಗಲು ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದರು.
ಇತಿಹಾಸದಲ್ಲಿ ಭಾರತದ ಕಡಲ ಸಾಮಥ್ರ್ಯವು ಪ್ರಬಲವಾಗಿದೆ ಎಂದ ಅವರು, ದೇಶ ಮತ್ತು ಪ್ರಪಂಚವು ಅದರ ಪ್ರಯೋಜನವನ್ನು ಪಡೆದುಕೊಂಡಿದೆ ಮತ್ತು ಕಳೆದ 9-10 ವರ್ಷಗಳಲ್ಲಿ ತಮ್ಮ ಸರ್ಕಾರವು ಕಡಲ ಕ್ಷೇತ್ರವನ್ನು ಬಲಪಡಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು
ಶೃಂಗಸಭೆಯ ಮೂರನೇ ಆವೃತ್ತಿಯಲ್ಲಿ 18,800 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಂದರು ಸಂಬಂ„ತ ಯೋಜನೆಗಳಿಗೆ ಪ್ರಧಾನಿ ಮೋದಿ ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‍ಗೆ ಸಹಾಯ ಮಾಡಲು ಅಭಿವೃದ್ಧಿಪಡಿಸಲಾಗುತ್ತಿರುವ ಗುಜರಾತ್‍ನ ದೀನದಯಾಳ್ ಬಂದರು ಪ್ರಾ„ಕಾರದಲ್ಲಿ ರೂ 4,539 ಕೋಟಿ ವೆಚ್ಚದ ಟ್ಯೂನ ಟೆಕ್ಕ್ರಾ ಆಲ-ವೆದರ್ ಡೀಪ್ ಡ್ರಾ-ï್ಟ ಟರ್ಮಿನಲ್‍ಗೆ ಅವರು ಶಂಕುಸ್ಥಾಪನೆಯನ್ನು ನೆರವೇರಿಸಿದರು.