Friday, May 3, 2024
Homeರಾಜ್ಯಸಿಎಂ ಇಬ್ರಾಹಿಂಗೆ ಟಾಂಗ್ ಕೊಟ್ಟ ಶರವಣ

ಸಿಎಂ ಇಬ್ರಾಹಿಂಗೆ ಟಾಂಗ್ ಕೊಟ್ಟ ಶರವಣ

ಬೆಂಗಳೂರು, ಅ.17-ಸಮಾನ ಮನಸ್ಕರ ಚಿಂತನ-ಮಂಥನ ಸಭೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷರು ನಡೆಸಿದ್ದು, ಅದು ಸಮಾನ ದುಖಃಸ್ಥರ ಸಭೆ ಎಂದೆನಿಸತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂತನ- ಮಂಥನ ಸಭೆಯಲ್ಲಿ ಪಕ್ಷದ ವರಿಷ್ಠರು ಇರಬೇಕಾಗಿತ್ತು. ಇದನ್ನು ಪಕ್ಷದ ವೇದಿಕೆ ಎಂದು ಕರೆಯಬಹುದೆ ಎಂದು ಪ್ರಶ್ನಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ..ದೇವೇಗೌಡರು ಚಿಂತನ- ಮಂಥನ ಸಭೆಗೆ ಅನುಮತಿ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು. ದೇವೇಗೌಡರ ಕಣ್ಮುಂದೆ ಇರುವು ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು. ಕಷ್ಟದ ಸಮಯದಲ್ಲಿ ನಾವು ಜೊತೆಯಲ್ಲಿ ಇದ್ದೇವೆ. ಮುಂಬರುವ ಲೋಕಸಭಾ ಚುನಾವಣೆಗೆ ಏನು ಮಾಡಬೇಕು ಎಂಬ ಚರ್ಚೆಯಲ್ಲಿ ಇದ್ದೇವೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರು ನಡೆಸಿರುವ ಸಭೆ ವಿಚಾರವಾಗಿ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಪಕ್ಷದ ವರಿಷ್ಠರು ಮೈತ್ರಿಗೂ ಮುನ್ನ ಸಭೆ ಕರೆದು ಚರ್ಚಿಸಿದ್ದಾರೆ. ಮೈತ್ರಿ ಬಗ್ಗೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ. ನಾವೆಲ್ಲಾ ಒಪ್ಪಿದ ಮೇಲೆಯೇ ಅವರು ಮುಂದುವರೆದಿದ್ದು. ಒಳಗೊಂದು ಹೊರಗೊಂದು ಮಾತಾಡೋದು ಸರಿಯಲ್ಲ. ಅವರು ಕೂಡ ಹಿರಿಯರಿದ್ದಾರೆ ಎಂದು ಅವರು ಹೇಳಿದರು.

ಟ್ರಕ್‍ಗೆ ಬೆಂಕಿ, ನಾಲ್ವರ ಸಜೀವ ದಹನ

ನಿನ್ನ ನಡೆದ ಘಟನೆ ನಮಗೂ ನೋವಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಗೆ ದೇವೇಗೌಡರ ಅನುಮತಿ ಪಡೆದೇ ಹೋಗಿದ್ದರು. ಶಾಸಕಾಂಗ ಸಭೆ ಕರೆದಾಗ ಎಲ್ಲರೂ ಬಂದಿದ್ದರು. ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರೆ ಜೊತೆಗೆ ಇರುತ್ತೇವೆ ಅಂದಿದ್ದಾರೆ. ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂಬುದು ಗಾಳಿಯಲ್ಲಿ ಗುಂಡು ಅಷ್ಟೆ ಎಂದರು.

ದೇವೇಗೌಡರಿಗೆ ಇನ್ನೂ ನೋವು ಕೊಡಬೇಡಿ. ನನಗೂ ಸೇರಿ ಪಕ್ಷದ ಪ್ರಮುಖರಿಗೆ ಕರೆ ಮಾಡಿದ್ದರು.ಆದರೆ ನಾವ್ಯಾರೂ ಸಭೆಗೆ ಹೋಗಿಲ್ಲ. ನೋವಿನಿಂದ ಆ ಸಭೆ ಮಾಡಿದ್ದಾರೆ ಅಷ್ಟೆ. ಇಲ್ಲಿ ಬ್ಲಾಕ್ ಮೇಲ್ ಏನೂ ಬರೋದಿಲ್ಲ ಎಂದು ಅವರು ಹೇಳಿದರು.

ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಇಬ್ರಾಹಿಂ ದೊಡ್ಡವರು. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಕೊಟ್ಟಿರು ಹೇಳಿಕೆಯನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಯಾರ್ಯಾರನ್ನ ಕರೆಸಬೇಕು ಅನ್ನೋದು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

RELATED ARTICLES

Latest News