Friday, December 1, 2023
Homeರಾಜಕೀಯಎಟಿಎಂ ಯಂತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಎಟಿಎಂ ಯಂತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಂಗಳೂರು,ಅ.17- ಉದ್ಯಮಿಗಳು ಹಾಗೂ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಮೂರು ಎಟಿಎಂ ಯಂತ್ರಗಳನ್ನು ಹಿಡಿದುಕೊಂಡು ವಿನೂತನ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಆರ್. ಅಶೋಕ್, ಡಾ.ಸಿ.ಎನ್.ಅಶ್ವಥ್ ನಾರಾಯಣ, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಶಾಸಕ ರವಿಸುಬ್ರಹ್ಮಣ್ಯ ಸೇರಿದಂತೆ ಶಾಸಕರು ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನೆ ವೇಳೆ ಕೈಯಲ್ಲಿ ಮೂರು ಎಟಿಎಂ ಮಿಷನ್‍ಗಳನ್ನು ಹಿಡಿದುಕೊಂಡಿದ್ದ ಪ್ರತಿಭಟನಾನಿರತರು ನೋಟುಗಳನ್ನು ಹಾಕಿ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್‍ಗೆ ಕರ್ನಾಟಕ ಎಟಿಎಂ ಆಗಿದೆ ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಆರ್. ಅಶೋಕ್, ಒಂದು ಕಡೆ ಕತ್ತಲೆ ಭಾಗ್ಯ,ಇನ್ನೊಂದು ಕಡೆ ಉಚಿತ ಸ್ಕೀಂ ಎಂದು ಕೈ ಎತ್ತಿದ್ದಾರೆ. ಮಕ್ಕಳು ಕುಡಿಯುವ ಹಾಲು ಹಾಲ್ಕೋಹಾಲ್ ಎರಡರ ಹಣ ಹೆಚ್ಚಾಗಿದೆ. ಈ ಸರ್ಕಾರದ ಅವಯಲ್ಲಿ ಸಾಕಷ್ಟು ತಪ್ಪುಗಳು ನಡೆಯುತ್ತಿದೆ. ಹೀಗಾಗಿ ಈ ಸರ್ಕಾರ ತೊಲಗಬೇಕೆಂಬುದು ಜನರ ಭಾವನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರದ ಮೇಲೆ 40% ಕಮಿಷನ್ ಎಂದು ಆರೋಪ ಮಾಡಿದ್ದರು. ಸಾಕ್ಷಿ ಕೇಳಿದಾಗ ಸಾಕ್ಷಿ ಕೊಡಲಿಲ್ಲ. ತನಿಖೆ ಮಾಡಿ ಎಂದು ಹೇಳಿದ್ದೆವು. ಈಗ ಅವರದೇ ಸರ್ಕಾರದ ಅವಧಿಯಲ್ಲಿ ಸಾಕ್ಷಿ ಸಿಕ್ಕಿದೆ. ಇದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರುಗೇಟು ಕೊಟ್ಟ ಅಶೋಕ್, ಇದೇ ಪಕ್ಷದಲ್ಲಿ 40 ವರ್ಷ ಇದ್ದು ಈಗ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ. ಪಕ್ಷದ ಎಲ್ಲಾ ಸ್ಥಾನಗಳನ್ನು ಅನುಭವಿಸಿದ್ದಾರೆ. ಈಗ ಹೋಗಿ 4 ತಿಂಗಳಿಗೆ ಕಾಂಗ್ರೆಸ್ ಪಕ್ಷವನ್ನು ಇಷ್ಟು ಹೊಗಳಿದರೆ ಹೇಗೆ? ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ಹೊಟೇಲ್ ನಲ್ಲಿ ಊಟ ತಿಂಡಿಗೆ ರೇಟ್ ಲೀಸ್ಟ್ ಇರತ್ತದೆ. ಆದರೆ ಈ ಸರ್ಕಾರದಲ್ಲಿ ಚಟ್ನಿ ಸಾಂಬಾರ್‍ಗೂ ರೇಟ್ ಲೀಸ್ಟ್ ಮಾಡಿದ್ದಾರೆ. ಈ ಮಾತನ್ನು ಹಿರಿಯರೊಬ್ಬರು ನನಗೆ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೆಂಪಣ್ಣನವರು ಐಟಿ ರೈಡ್ ಆದ ಮನೆಗೆ ಹೋಗಿದ್ದರು. ಅಂಬಿಕಾಪತಿ ಯಾಕೆ ಹೋಗಿದ್ದರು ಎಂದು ಹೇಳಬೇಕು. ಮಾಧ್ಯಮದ ಮುಂದೆ ಹೇಳಿಕೆ ಕೊಡಬೇಕು ಅವರು ಒತ್ತಾಯಿಸಿದರು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅದಕ್ಕಾಗಿ ಭೇಟಿ ಮಾಡಿದರೋ, ಮಾರ್ಗದರ್ಶನ ಪಡೆಯುವುದಕ್ಕೆ ಹೋಗಿದ್ದರೋ, ಮಾರ್ಗದರ್ಶನ ಮಾಡುವುದಕ್ಕೋ? ಪ್ರಕರಣ ಮುಚ್ಚಿ ಹಾಕುವ ಯತ್ನ ಇದು ಪರದೇಕೆ ಪೀಚೆ ಏನೋ ನಡೆಯುತ್ತಿದೆ ಇದೆ, ಅದು ಬಯಲಾಗಬೇಕು. ಹೀಗಾಗಿ ಸಿಬಿಐ ಸ್ವಮೋಟೊ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಅಶ್ವಥ್ ನಾರಾಯಣ ಮಾತನಾಡಿ, ಕೆಲವು ನಾಮಾಕಾವಸ್ತೆ ಭಾಗ್ಯಗಳನ್ನು ಜನರಿಗೆ ತೋರಿಸಿದ್ದಾರೆ. ತಮಗಾಗಿ ಅತೀ ದೊಡ್ಡ ಭಾಗ್ಯ ಲೂಟಿ ಭಾಗ್ಯ ಜಾರಿ ಮಾಡಿದ್ದಾರೆ. ಸರ್ಕಾರದ ಅಧಿಕಾರಿಗಳು ಲೂಟಿ ಭಾಗ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನ 4 ದಿಕ್ಕಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಕ್ರೋಶ

ಈ ಸರ್ಕಾರದವರು ಗುತ್ತಿಗೆದಾರರಿಂದ, ಬಿಲ್ಡರ್‍ಗಳಿಂದ ಹಣ ಪಡೆದು ಸರ್ಕಾರಿ ಸೇವೆ ಕೊಡುತ್ತಿದ್ದಾರೆ. ಈ ಸರ್ಕಾರದ ಮೇಲೆ ನಾವು ಭ್ರಷ್ಟಾಚಾರದ ಆರೋಪ ಮಾಡಿದಾಗ ಸಾಕ್ಷಿ ಎಲ್ಲಿದೆ ಅಂದರು. ಈಗ ಸಾಕ್ಷಿ ಸಿಕ್ಕಿದೆ, ಆದರೆಇದು ನಮ್ಮದಲ್ಲ, ಇವರೆಲ್ಲ ಬಿಜೆಪಿ ಗುತ್ತಿಗೆದಾರರು ಎನ್ನುತ್ತಿದ್ದಾರೆ. ಆಗಲಿ ತನಿಖೆ ಮಾಡಿ ಅಂದರೂ ಮಾಡಲ್ಲ ಎನ್ನುತ್ತಿದ್ದಾರೆ. ಇದು ಯಾರ ಹಣ ಅಂತ ಸಿಎಂಗೆ ಉತ್ತರಿಸಲು ಆಗ್ತಿಲ್ಲ, ಮಾತು ಬರುತ್ತಿಲ್ಲ. ಸಿದ್ದರಾಮಯ್ಯ ಭಂಡತನ ತೋರಿಸುತ್ತಿದ್ದಾರೆ. ಪಂಚೆ ಎತ್ಕೊಂಡು ನಮ್ಮ ವಿರುದ್ಧ ಪೇಸಿಎಂ ಆರೋಪ ಮಾಡಿದ್ದರೀ ಈಗ ಎಲ್ಲಿ ಉಡುಗಿಹೋಗಿದೆ ನಿಮ್ಮ ದನಿ ಎಂದು ಪ್ರಶ್ನಿಸಿದರು.

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪಂಚರಾಜ್ಯ ಚುನಾವಣೆ, ಲೋಕಸಭಾ ಚುನಾವಣೆ ಇದೆ. ಸಮಯ ಕಡಿಮೆ ಇದೆ. ಹೀಗಾಗಿ, ಕಾಂಗ್ರೆಸ್ ಸರ್ಕಾರ ಕಲೆಕ್ಷನ್ ಬ್ಯಾಟಿಂಗ್ ಶುರುಮಾಡಿದ್ದಾರೆ. ಕಂಟ್ರ್ಯಾಕ್ಟರ್‍ಗಳಿಗೆ ಹಣ ಬಿಡುಗಡೆ ಮಾಡಿ, ಏಜೆಂಟರ್ ಬಿಟ್ಟು ಕಲೆಕ್ಷನ್ ಮಾಡುತ್ತಾರೆ ಎಂದು ಆರೋಪಿಸಿದರು.
ಮಂಚದ ಕೆಳಗೆ 42 ಕೋಟಿ ರೂ. ಮಲಗಿತ್ತು. ಐಟಿ ರೈಡ್ ಮಾಡಿ ಹಿಡಿದಿದ್ದಾರೆ. ವಾರಸುದಾರರು ಯಾರು ಎಂದು ಹೇಳುತ್ತಿಲ್ಲ. ಬಿಜೆಪಿ ಬಳಿ ಹಣವೇ ಇರಲಿಲ್ಲ, ಆದರೂ 40% ಕಮಿಷನ್ ಆರೊಪ ಮಾಡಿದರು. ನಾವು ಸುಳ್ಳು ಹೇಳಿದ್ದೀವಿ ಎಂದು ಡಿ.ಕೆ.ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ.

ಕೆಂಪಣ್ಣನವರನ್ನ ಏಜೆಂಟ್ ಮಾಡಿಕೊಂಡು ಸುಳ್ಳು ಹೇಳಿಸಿದರು. ಈಗ ಅಬಕಾರಿ ಇಲಾಖೆಯಡಿ ಬಾರ್- ರೆಸ್ಟೋರೆಂಟ್‍ನವರಿಂದ ಸುಲಿಗೆ ಆಗುತ್ತಿದೆ. ದಸರಾದಲ್ಲಿ ಕಲಾವಿದರಿಂದ ಕಮಿಷನ್ ಕೇಳಿದ್ದಾರೆ. 5 ಲಕ್ಷ ರೂ. ನಲ್ಲಿ 3 ಲಕ್ಷ ರೂ. ವಾಪಸ್ ಕೊಡಬೇಕು ಎಂದು ಕಮಿಷನ್ ಕೇಳಿದ್ದಾರೆ. ಅಂದರೆ ಇದು 60% ಸರ್ಕಾರ ಎಂದು ತಿರುಗೇಟು ಕೊಟ್ಟರು.

ತೋಟಗಾರಿಕೆ, ಕೃಷಿ ಇಲಾಖೆ ಅಕಾರಿಗಳೇ ಪತ್ರ ಬರೆದರು. ಅಕಾರಿಗಳ ವರ್ಗಾವಣೆಗೆ ದರ ಫಿಕ್ಸ್ ಆಗಿದೆ. ಕಾಂಗ್ರೆಸ್ ಖಜಾನೆಗೆ ಹಣ ಹೋಗುವುದು ಫಿಕ್ಸ್ ಆಗಿದೆ. ಪ್ಲಾನ್ ಸೆಂಕ್ಷನ್ ಗೆ ಪ್ರತಿ ಅಡಿಗೆ 100 ರೂ. ಫಿಕ್ಸ್ ಮಾಡಿ, 25% ಡಿಸ್ಕೌಂಟ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಬಿಹಾರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು

ಪಾಕಿಸ್ಥಾನದಲ್ಲಿ ಇರುವಂತ ಪರಿಸ್ಥಿತಿ ರಾಜ್ಯಕ್ಕೆ ಬರಲಿದೆ. ಈ ಸರ್ಕಾರ ಅಂತ ಸ್ಥಿತಿ ತಂದಿಟ್ಟಿದೆ. ಆರೋಪ ಮಾಡಿದವರ ಮೇಲೆ ಎಫ್‍ಐಆರ್ ಹಾಕುತ್ತಾರೆ. ಹೋರಾಟ ನಮ್ಮ ಹಕ್ಕು. ಅದನ್ನ ಕಿತ್ತುಕೊಳ್ಳಲು ಬಿಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಕೂಡಲೇ ಕೊಡಬೇಕು ಎಂದು ಆಗ್ರಹಿಸಿದರು.

RELATED ARTICLES

Latest News