Thursday, December 7, 2023
Homeರಾಷ್ಟ್ರೀಯಬಿಹಾರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು

ಬಿಹಾರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು

ಬಕ್ಸರ್,ಅ.17- ಬಿಹಾರದ ಬಕ್ಸರ್ ಜಿಲ್ಲೆಯ ಡುಮಾರಾನ್ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಕೋಚ್ ಹಳಿತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ವಕ್ತಾರರ ಪ್ರಕಾರ, ಘಟನೆ ನಡೆದಾಗ ಗೂಡ್ಸ್ ರೈಲು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‍ನಿಂದ ಬಕ್ಸರ್ ಮೂಲಕ ಫತುಹಾಗೆ ತೆರಳುತ್ತಿತ್ತು. ಒಂದು ಕೋಚ್‍ನ ನಾಲ್ಕು ಚಕ್ರಗಳು ಹಳಿತಪ್ಪಿದ ಪರಿಣಾಮ ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದರು.

ಮಾಹಿತಿಯ ಮೇರೆಗೆ ಹಿರಿಯ ರೈಲ್ವೇ ಅಧಿಕಾರಿಗಳ ತಂಡ ಕೂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.ರೈಲ್ವೇ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದು, ಹಳಿತಪ್ಪಿದ ಕೋಚ್ ಅನ್ನು ಮತ್ತೆ ಹಳಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ.

ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿ : ತರೂರ್

ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ವರದಿಯಾದ ಎರಡನೇ ಹಳಿ ತಪ್ಪಿದ ಘಟನೆ ಇದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಕ್ಟೋಬರ್ 11 ರಂದು, ಬಕ್ಸಾರ್‍ನಲ್ಲಿ ಕಾಮಾಖ್ಯ-ಬೌಂಡ್ ನಾರ್ತ್ ಈಸ್ಟ್ ಎಕ್ಸ್‍ಪ್ರೆಸ್‍ನ 21 ಬೋಗಿಗಳು ಹಳಿತಪ್ಪಿದ ನಂತರ ನಾಲ್ವರು ಸಾವನ್ನಪ್ಪಿದರು ಮತ್ತು 42 ಮಂದಿ ಗಾಯಗೊಂಡಿದ್ದರು.

RELATED ARTICLES

Latest News