ಲಕ್ನೋ, ಜೂ 16 (ಪಿಟಿಐ) ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸ್ಥಾಪಕರಲ್ಲಿ ಒಬ್ಬರಾಗಿ ಇದೀಗ ಎಸ್‌ಪಿಯಿಂದ ಸಂಸದರಾಗಿ ಚುನಾಯಿತರಾಗಿರುವ ಆರ್‌ಕೆ ಚೌಧರಿ ಅವರು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಬಹುಜನ ಚಳವಳಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಹೀಗಾಗಿಯೇ ಆ ಪಕ್ಷದ ಸೋಲಿಗೆ ಕಾರಣವಾಗಿದೆ ಎಂದಿದ್ದಾರೆ.
ಈಗ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪಿಡಿಎ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ) ಎಂಬ ಘೋಷಣೆಯೊಂದಿಗೆ ಹಿಂದುಳಿದ ಜಾತಿಗಳು ಮತ್ತು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ಸಮಾನತೆಗಾಗಿ ಒತ್ತಾಯಿಸಿ ಬಹುಜನ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ ಇದು ಅವರ ವರ್ಚಸ್ಸಿಗೆ ಕಾರಣ ಎಂದಿದ್ದಾರೆ.
ಪಿಟಿಐ ಜೊತೆಗಿನ ಸಂವಾದದಲ್ಲಿ ಅವರು, ಬಿಎಸ್‌ಪಿಯ ಕುಸಿತದ ಗ್ರಾಫ್ ಮತ್ತು ಕಾನ್ಶಿ ರಾಮ್ ಸ್ಥಾಪಿಸಿದ ಪಕ್ಷಕ್ಕೆ ಭವಿಷ್ಯವೇನು ಎಂಬುದರ ಕುರಿತು ಚರ್ಚಿಸಿದರು.ಅವರ ಪ್ರಕಾರ, ಉತ್ತರ ಪ್ರದೇಶದ ಕೋರ್ ದಲಿತ ರಾಜಕಾರಣವು ಈ ಕ್ಷಣದಲ್ಲಿ ನಾಯಕರಹಿತವಾಗಿದೆ, ಆದರೆ ಮುಂಬರುವ ದಿನಗಳಲ್ಲಿ, ಕಾನ್ಶಿ ರಾಮ್ ಅವರು ಜಾಗತಗೊಳಿಸಿದ ಬಹುಜನತ್ವದ ಜ್ವಾಲೆಯನ್ನು ಎಸ್ಪಿ ಮುಂದಕ್ಕೆ ಒಯ್ಯುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗದಿರಲು ಕಾರಣವೇನು ಎಂದು ಕೇಳಿದಾಗ, ಚೌಧರಿ ಅವರು, ಮಾಯಾವತಿ ಜಿ ನಮ ನಾಯಕಿಯಾಗಿದ್ದಾರೆ, ನಾವು ಅವರನ್ನು ಗೌರವಿಸುತ್ತೇವೆ, ಆದರೆ ಯಾರಾದರೂ ಕಾನ್ಶಿರಾಮ್ ಜಿ ಅವರ ಚಳವಳಿಯನ್ನು ಕೊನೆಗೊಳಿಸಿದ್ದರೆ, ಅದು ಬೆಹೆನ್ ಜಿ (ಮಾಯಾವತಿ) ಈಗ ಆ ಚಳವಳಿಯನ್ನು ಮುನ್ನಡೆಸುವ ಹಾದಿಯಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ನಡೆಯಲು ಆರಂಭಿಸಿದ್ದಾರೆ ಎಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ದಲಿತ ಮತಗಳಲ್ಲಿ ಗಣನೀಯ ಪಾಲು ಪಡೆದಿದೆ ಎಂದು ಪ್ರತಿಪಾದಿಸಿದ ಅವರು, ಎಸ್‌ಪಿ ಈ ಬಾರಿ ಬಹುಜನ ಸಮಾಜ ಪಕ್ಷದ ಕೋರ್ ಮತವನ್ನು ಕೇಳದೆ ಪಡೆದುಕೊಂಡಿದೆ ಎಂದರು.ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಅವರ ಕನಸನ್ನು ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಮುಂದುವರೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.