ಬಾಲಸೋರ್ ಜೂನ್ 18 -ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ ಒಡಿಶಾದ ಬಾಲಸೋರ್ ಪಟ್ಟಣದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜಿಲ್ಲಾಡಳಿತವು ಪಟ್ಟಣದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ ಮತ್ತು ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಮತ್ತು ಹೊರಗೆ ಕಾಲಿಡದಂತೆ ತಿಳಿಸಲಾಗಿದೆ.
ಕಳೆದ ಜೂನ್ 17 ರ ಮಧ್ಯರಾತ್ರಿಯಿಂದ ಜೂನ್ 18 ರ ಮಧ್ಯರಾತ್ರಿಯವರೆಗೆ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಈಗಾಗಲೇ ಬಾಲಸೋರ್ ಜಿಲ್ಲಾದಿಕಾರಿ ಶಿಶ್ ಠಾಕರೆ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಣದ ಭುಜಖಿಯಾ ಪೀರ್ ಪ್ರದೇಶದಲ್ಲಿ ಪ್ರಾಣಿಬಲಿ ರಕ್ತವನ್ನು ರಸ್ತೆಗೆ ಹಾಕಿರುವುದನ್ನು ಪ್ರತಿಭಟಿಸಿ ಜನರ ಗುಂಪು ಧರಣಿ ಕುಳಿತಿತ್ತು ಇತರ ಗುಂಪು ಅವರ ಮೇಲೆ ಕಲ್ಲು ತೂರಾಟ ನಡೆಸಿತು, ನಂತರ ಘರ್ಷಣೆ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಸಂಜಯ್ ಕುಮಾರ್ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಬಾಲಸೋರ್‌ನಲ್ಲಿ ಪೊಲೀಸರು ಧ್ವಜ ಮೆರವಣಿಗೆ ನಡೆಸಿದ್ದು . ಈವರೆಗೆ ಘಟನೆಗೆ ಸಂಭಂದಿಸಿದಂತೆ ಸುಮಾರು 30 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ತುರ್ತು ವೈದ್ಯಕೀಯ ಸಹಾಯವನ್ನು ಹೊರತುಪಡಿಸಿ ವಾಹನದಲ್ಲಿ ಪ್ರಯಾಣಿಸಬಾರದು ಎಂದು ಜನರಿಗೆ ತಿಳಿಸಲಾಗಿದೆ.
ಬಾಲಸೋರ್ ಎಸ್ಪಿ ಸಾಗರಿಕಾ ನಾಥ್ ಅವರು, ಬಾಲಾಸೋರ್ ಪುರಸಭೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಎಲ್ಲಾ ವಾಣಿಜ್ಯ ಸಂಸ್ಥೆಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿದೆ.ಸೂಕ್ಷ್ಮ ಪ್ರದೇಶಗಳಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಮತ್ತು ನಿನ್ನೆ ಕೆಲವು ಸ್ಥಳಗಳಲ್ಲಿ ಹಿಂಸಾಚಾರಗಳು ವರದಿಯಾಗಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.