Thursday, November 21, 2024
Homeಜಿಲ್ಲಾ ಸುದ್ದಿಗಳು | District Newsನಕಲಿ ಕೀ ಬಳಸಿ ಬಾಡಿಗೆ ನೀಡಿದ್ದ ಮನೆಯನ್ನೇ ದೋಚಿದ ಮನೆ ಮಾಲೀಕ..!

ನಕಲಿ ಕೀ ಬಳಸಿ ಬಾಡಿಗೆ ನೀಡಿದ್ದ ಮನೆಯನ್ನೇ ದೋಚಿದ ಮನೆ ಮಾಲೀಕ..!

ಮೈಸೂರು,ಜೂ. 19- ನಕಲಿ ಕೀ ಬಳಸಿ ಬಾಡಿಗೆ ನೀಡಿದ್ದ ಮನೆಯನ್ನ ಮಾಲೀಕನೇ ದೋಚಿದ ಘಟನೆ ಮೈಸೂರಿನ ಲೋಕನಾಯಕ ನಗರದಲ್ಲಿ ನಡೆದಿದೆ.ಸರ್ವಸ್ವವನ್ನೂ ಕಳೆದುಕೊಂಡ ಬಾಡಿಗೆದಾರ ಇದೀಗ ಅತಂತ್ರವಾಗಿದ್ದಾರೆ.ಡ್‌ ಪ್ರಾಡಕ್ಟ್‌್ಸ ಡಿಸ್ಟ್ರಿಬ್ಯೂಟರ್‌ ಆಗಿರುವ ಮೇಘರಾಜ್‌ ರವರ ಕುಟುಂಬ ಇದೀಗ ಅತಂತ್ರಕ್ಕೆ ಸಿಲುಕಿದೆ.

ಮಾಲೀಕ ಮಂಜುನಾಥ್‌ ಹಾಗೂ ಈತನ ಸಹೋದರನ ಮೇಲೆ ಮೇಘರಾಜ್‌ ರವರು ಮೇಟಗಳ್ಳಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಮಂಜುನಾಥ್‌ರವರಿಗೆ ಸೇರಿದ ಮನೆಗೆ ಮೇಘರಾಜ್‌ ಸುಮಾರು 6 ತಿಂಗಳ ಹಿಂದೆ ಬಾಡಿಗೆ ಪಡೆದು ವಾಸಕ್ಕೆ ಬಂದಿದ್ದಾರೆ. ಬಾಡಿಗೆ ವಿಚಾರದಲ್ಲಿ ಮೇಘರಾಜ್‌ ಹಾಗೂ ಮಂಜುನಾಥ್‌ ನಡುವೆ ವಿವಾದ ಶುರುವಾಗಿದೆ. ತಾವು ನೀಡಿದ್ದ ಮುಂಗಡ ಹಣ ವಾಪಸ್‌‍ ಪಡೆದು ಮನೆ ಖಾಲಿ ಮಾಡಲು ಮೇಘರಾಜ್‌ ನಿರ್ಧರಿಸಿದ್ದಾರೆ. ಇದಕ್ಕೆ ಒಪ್ಪದ ಮಂಜುನಾಥ್‌ ಮನೆಗೆ ಬೀಗ ಜಡಿದಿದ್ದಾರೆ.

ಈ ಕುರಿತಂತೆ ಮೇಘರಾಜ್‌ ಮೇಟಗಳ್ಳಿ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ. ಮಂಜುನಾಥ್‌ ರವರನ್ನ ಕರೆಸಿ ಪೊಲೀಸರು ಬುದ್ದಿವಾದ ಹೇಳಿ ಬೀಗ ತೆಗೆಸಿದ್ದಾರೆ. ಹೀಗಿದ್ದರೂ ಆಗಾಗ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಕಿರುಕುಳ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಮೇಘರಾಜ್‌ ರವರು ಕುಟುಂಬ ಸಮೇತ ತಮ ಸ್ವಂತ ಊರಾದ ಕಬ್ಬಳಿಗೆರೆಗೆ ತೆರಳಿದ್ದಾರೆ. ಹಿಂದಿರುಗಿ ಬರುವಷ್ಟರಲ್ಲಿ ಮಂಜುನಾಥ್‌ ಮತ್ತೆ ಮನೆಗೆ ಬೀಗ ಹಾಕಿದ್ದಾರೆ. ಕಿಟಕಿ ಮೂಲಕ ಮನೆ ಒಳಗೆ ಪರಿಶೀಲಸಿದಾಗ ಪೀಠೋಪಕರಣಗಳ ಸಮೇತ ನಗದು ಚಿನ್ನಾಭರಣ ನಾಪತ್ತೆಯಾಗಿದೆ.

ಸುಮಾರು 85 ಗ್ರಾಂ ಚಿನ್ನಾಭರಣ,1.20 ಲಕ್ಷ ನಗದು, ಫ್ರಿಡ್ಜ್ , ವಾಶಿಂಗ್‌ ಮೆಷಿನ್‌, ಹರ್ಬಲ್‌ ಪ್ರಾಡಕ್ಟ್‌್ಸ ಗಳು ನಾಪತ್ತೆಯಾಗಿವೆ.ನಕಲಿ ಕೀ ಬಳಸಿ ಮಾಲೀಕ ಮಂಜುನಾಥ್‌ ತಮ ಪದಾರ್ಥಗಳನ್ನು ದೋಚಿದ್ದಾರೆಂದು ಮೇಘರಾಜ್‌ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News