Friday, November 22, 2024
Homeರಾಷ್ಟ್ರೀಯ | Nationalಯುಜಿಸಿ-ನೆಟ್‌-2024 ಪರೀಕ್ಷೆ ರದ್ದುಗೊಳಿಸುವಂತೆ ಶಿಕ್ಷಣ ಸಚಿವಾಲಯ ಆದೇಶ

ಯುಜಿಸಿ-ನೆಟ್‌-2024 ಪರೀಕ್ಷೆ ರದ್ದುಗೊಳಿಸುವಂತೆ ಶಿಕ್ಷಣ ಸಚಿವಾಲಯ ಆದೇಶ

ನವದೆಹಲಿ,ಜೂನ್‌.20- ಯುಜಿಸಿ-ನೆಟ್‌-2024 ಪರೀಕ್ಷೆಯನ್ನುರದ್ದುಗೊಳಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಆದೇಶಿಸಿದೆ.ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ದೂರುಗಳು ಬಂದ ಮರು ದಿನವೇ ರದ್ದು ಪಡಿಸುವಂತೆ ಸಚಿವರು ಆದೇಶಿಸಿದ್ದಾರೆ.

ಈಗಾಗಲೇ ವೈದ್ಯಕೀಯ ಕೋರ್ಸ್‌ನ ನೀಟ್‌ ಪರೀಕ್ಷೆ ವಿವಾದ ಸೃಷೃಸಿರುವ ನಡುವೆ ಬೋಧಕರ ಆಯ್ಕೆ ಗೆ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಯುಜಿಸಿ -ನೆಟ್‌ಗೆ ಈ ಬಾರಿ ಪೆನ್‌ ಮತ್ತು ಪೇಪರ್‌ ಮಾದರಿಯಲ್ಲಿ ನಡೆಸಲಾಯಿತು. 11.21 ಲಕ್ಷ ನೋಂದಾಯಿತ ಅಭ್ಯರ್ಥಿಗಳಲ್ಲಿ ಸರಿಸುಮಾರು 81% ರಷ್ಟು ಜನರು ಪರೀಕ್ಷೆಗೆ ಹಾಜರಾಗಿದ್ದರು, ಇದು ರಾಷ್ಟ್ರವ್ಯಾಪಿ 317 ನಗರಗಳಲ್ಲಿ ನಡೆದಿತ್ತು.

ಪರೀಕ್ಷಾ ಪ್ರಕ್ರಿಯೆಯ ಅತ್ಯುನ್ನತ ಮಟ್ಟದ ಪಾರದರ್ಶಕತೆ ಮತ್ತು ಪವಿತ್ರತೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಯುಜಿಸಿ-ನೆಟ್‌ ಜೂನ್‌ 2024 ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ಪರೀಕ್ಷೆಯನ್ನು ನಡೆಸಲಾಗುವುದು, ಇದಕ್ಕಾಗಿ ಮಾಹಿತಿಯನ್ನು ಪ್ರತ್ಯೇಕವಾಗಿ ಹಂಚಿಕೊಳ್ಳಲಾಗುತ್ತದೆ. ಏಕಕಾಲದಲ್ಲಿ, ಈ ವಿಷಯವನ್ನು ಸಮಗ್ರ ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದೆ.ಇದು ದೇಶಾದ್ಯಂತ ಲಕ್ಷಾಂತರ ಆಕಾಂಕ್ಷಿಗಳ ಮೇಲೆ ಪರಿಣಾಮ ಬೀರಲಿದೆ.

RELATED ARTICLES

Latest News