Friday, January 2, 2026
Homeರಾಜ್ಯಬಳ್ಳಾರಿಯಲ್ಲಿ ಬ್ಯಾನರ್‌ ವಿಚಾರಕ್ಕೆ ಗಲಾಟೆ, ತನಿಖೆಗೆ ಬಿ.ವೈ.ವಿಜಯೇಂದ್ರ ಆಗ್ರಹ

ಬಳ್ಳಾರಿಯಲ್ಲಿ ಬ್ಯಾನರ್‌ ವಿಚಾರಕ್ಕೆ ಗಲಾಟೆ, ತನಿಖೆಗೆ ಬಿ.ವೈ.ವಿಜಯೇಂದ್ರ ಆಗ್ರಹ

Banner clash outside Reddy's house turns deadly

ಬೆಂಗಳೂರು,ಜ.2- ಬ್ಯಾನರ್‌ ಕಟ್ಟುವ ವಿಚಾರಕ್ಕೆ ಬಳ್ಳಾರಿ ನಗರದಲ್ಲಿ ನಡೆದ ಘಟನೆ ಕುರಿತು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ ತನಿಖೆ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಈ ಕೂಡಲೇ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ನಮ ಪಕ್ಷದ ಪ್ರಮುಖರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬಳ್ಳಾರಿಯಲ್ಲಿ ನಿನ್ನೆ ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಎದುರು ನಡೆದಿರುವ ಘಟನೆ ಕಾಂಗ್ರೆಸ್‌‍ ಗೂಂಡಾಗಳು ನಡೆಸಿದ ಸರ್ಕಾರಿ ಪ್ರಾಯೋಜಕತ್ವದ ಪೂರ್ವನಿಯೋಜಿತ ದುಷ್ಕೃತ್ಯವಾಗಿದೆ. ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುವೆ ಎಂದು ಹೇಳಿದ್ದಾರೆ.

ಜನಾರ್ಧನ ರೆಡ್ಡಿ ಮತ್ತು ಅವರ ಕುಟುಂಬವನ್ನು ಗುರಿಯನ್ನಾಗಿಸಿಕೊಂಡು ನಡೆದಿರುವ ಈ ಘಟನೆಗೆ ಮಹರ್ಷಿ ವಾಲ್ಮೀಕಿ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮದ ಬ್ಯಾನರ್‌ ಅಳವಡಿಕೆಯನ್ನೇ ನೆಪ ಮಾಡಿಕೊಳ್ಳಲಾಗಿದೆ. ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದಿಲ್ಲ. ನಾಗರಿಕ ಸಮಾಜ ನೆಮದಿಯಾಗಿ ಬದುಕುವ ವಾತಾವರಣವನ್ನು ವಿಚಲಿತಗೊಳಿಸಿ, ಭಯಗ್ರಸ್ಥ ನಗರವನ್ನಾಗಿಸಲು ಸ್ಥಳೀಯ ಶಾಸಕರ ಕುಮಕ್ಕಿನಿಂದ ಅವರ ಬೆಂಬಲಿಗರು ದುಷ್ಕೃತ್ಯಕ್ಕೆ ಇಳಿದಂತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಜನಾರ್ದನ ರೆಡ್ಡಿಯವರು ಬಿಜೆಪಿಗೆ ಮರು ಸೇರ್ಪಡೆಯಾದನಂತರ ಸ್ಥಳೀಯವಾಗಿ ಪಕ್ಷಸಂಘಟನೆ ಪ್ರಬಲವಾಗುತ್ತಿರುವುದು, ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಅವರ ನಡುವಿನ ಬಾಂಧವ್ಯ ಹಿಂದಿನಂತೆ ಬೆಸೆದಿರುವುದು ರಾಜಕೀಯ ದುಷ್ಟರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ವಿಪರ್ಯಾಸವೆಂದರೆ ಸ್ಥಳೀಯ ಪೊಲೀಸ್‌‍ ಠಾಣೆಗಳು ಕಾಂಗ್ರೆಸ್‌‍ ಕಛೇರಿಗಳಾಗಿ ಮಾರ್ಪಟ್ಟಿವೆ. ಪೊಲೀಸರು ಕಾಂಗ್ರೆಸ್‌‍ ಕೈಗೊಂಬೆಯಾಗಿದ್ದಾರೆ. ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರೆ ಈ ದುಷ್ಕೃತ್ಯವನ್ನು ತಡೆಯಬಹುದಿತ್ತು ಎಂದು ವಿಜಯೇಂದ್ರ ಹೇಳಿದ್ದಾರೆ.

RELATED ARTICLES

Latest News