ಬೆಂಗಳೂರು,ಜೂ.21- ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಅತಂತ್ರ ಪರಿಸ್ಥಿತಿ ತಲುಪಿದ್ದ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ನಾಯಕರು ಸರ್ಕಾರ ರಚನೆ ಮಾಡದೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿದ್ದಾರೆಯೇ…?!
ಮೈತ್ರಿ ಸರ್ಕಾರ ರಚಿಸಲು ಆಸಕ್ತಿ ತೋರದ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ಜನಾದೇಶವಿಲ್ಲದ ಕಾರಣ ಸರ್ಕಾರ ರಚನೆಯ ಕಸರತ್ತು ಕೈಬಿಟ್ಟು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಬಿಟ್ಟು ಕೊಡಲು ಮುಂದಾಗಿದ್ದರು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಜೂ.4ರ ಮಂಗಳವಾರ ಲೋಕಸಭಾ ಚುನಾವಣೆ ಫಲಿತಾಂಶ ಮತ ಎಣಿಕೆ ಪ್ರಾರಂಭವಾಗಿ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಹೊರಬಿದ್ದಿತ್ತು. 400 ಕ್ಷೇತ್ರಗಳನ್ನು ಗೆದ್ದು 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮೋದಿಯವರ ಕನಸು ನನಸಾಗಲು 31 ಸಂಖ್ಯೆಗಳ ಕೊರತೆ ಎದುರಾಗಿತ್ತು.
ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸಮಿಶ್ರ ಸರ್ಕಾರದ ಅವಾಂತರಗಳನ್ನು ನೋಡಿದ್ದ ಮೋದಿಯವರು ಕಿಚಡಿ ಸರ್ಕಾರದ ರಚನೆ ಕಸರತ್ತು ಕೈಬಿಟ್ಟು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ತಯಾರಿ ನಡೆಸಿದ್ದರು.
ಬಿಜೆಪಿಗೆ 240 ಅಂತ ತಿಳಿಯುತ್ತಿದ್ದಂತೆ ಮೋದಿ, ಶಾ, ನಡ್ಡಾ, ರಾಜನಾಥ ಸಿಂಗ್ ಇಂಡಿ ಮೈತ್ರಿಕೂಟಕ್ಕೆ ಬಿಟ್ಟುಕೊಟ್ಟು, ವಿರೋಧ ಪಕ್ಷದಲ್ಲಿ ಕೂರಲು ತಯಾರಿ ನಡೆಸಿದರು. ಈ ವಿಷಯದಲ್ಲಿ ತಕ್ಷಣವೇ ಶಿಂಧೆ ಮತ್ತು ಚಿರಾಗ್ ಪಾಸ್ವಾನ್ ತಾವೂ ವಿರೋಧಪಕ್ಷದಲ್ಲಿ ಕೂರುವುದಾಗಿ ಘೋಷಿಸಿದ್ದರು.
ಅದಕ್ಕೇ ದೆಹಲಿಯ ಬಿಜೆಪಿ ಕಚೇರಿ ತಲುಪಬೇಕಿದ್ದ ಮೋದಿ ತಡವಾಗಿಯೇ ತಲುಪಿದ್ದರು. ನಿತೀಶ್ ಮತ್ತು ನಾಯ್ಡುಗೆ ಕರೆಮಾಡಿದ್ದ ಮೋದಿ ನಿಮಗೆ ಬೇಕಾದ ನಿರ್ಧಾರ ತೆಗೆದುಕೊಳ್ಳಿ ಎಂದು ತಿಳಿಸಿದ್ದರು. ಇಂಡಿ ಅಲಯನ್ಸಿನ ರಿಸ್ಕಿ ಪರಿಸ್ಥಿತಿ ಅರಿತಿದ್ದ ಇಬ್ಬರೂ ಗಾಬರಿಯಾಗಿದ್ದರು. ಬಿಜೆಪಿಯ ಈ ನಿರ್ಧಾರ ಖರ್ಗೆ, ಜೈರಾಂ ರಮೇಶರಿಗೆ ತಿಳಿಯುವಂತೆ ಮಾಡಲಾಯಿತು.
ಇಂಥ ಪರಿಸ್ಥಿತಿ ನಿರೀಕ್ಷೆ ಮಾಡಿರದಿದ್ದ ಅವರೂ ಈ ವಿಷಯವನ್ನು ಮುಚ್ಚಿಟ್ಟು ಶರದ್ ಪವಾರ್‌ಗೆ ನಿತೀಶ್ ಮತ್ತು ನಾಯ್ಡು ಬಳಿ ಮಾತಾಡಲು ತಿಳಿಸಿದರು.ನಿತೀಶ್ ಪವಾರ್‌ಗೆ ನಿಮಗೆ ಮೋದಿ ವಿರೋಧ ಪಕ್ಷದಲ್ಲಿ ಕೂರುವ ನಿರ್ಧಾರ ಮಾಡಿದ್ದು ಹೇಗೆ ತಿಳಿಯಿತು? ಎಂದು ಕೇಳಿದಾಗ ಅವಾಕ್ಕಾದ ಶರದ್ ಪವಾರ್ ತಮಗೆ ವಿಷಯ ಗೊತ್ತಿರಲಿಲ್ಲ, ಕೇವಲ ನಿತೀಶ್ ಮತ್ತು ನಾಯ್ಡುರನ್ನು ಸಂಪರ್ಕಿಸಲಷ್ಟೇ ಹೇಳಿದ್ದರು ಎಂದು ತಿಳಿಸಿದರು.
ನಿತೀಶ್ ನಂತರ ಎಲ್ಲವನ್ನೂ ವಿವರಿಸಿ, ಕಾಂಗ್ರೆಸ್ ಪಕ್ಷವು ಅಧಿಕಾರ ಹಿಡಿದರೆ ಪ್ರತಿಯೊಬ್ಬರಿಗೂ ತಿಂಗಳಿಗೆ 8500 ಕೊಡುತ್ತೇವೆ ಮತ್ತು ದೇಶದ ಆಸ್ತಿಯನ್ನು ಬಡವರಿಗೆ ಹಂಚುತ್ತೇವೆ ಎಂಬ ಪ್ರಣಾಳಿಕೆಯನ್ನು ಜ್ಞಾಪಿಸಿದರು. ಹಾಗೇ ಯಾರು ಪ್ರಧಾನಮಂತ್ರಿ? ಎಂದು ಕೇಳಿದರು. ಇದನ್ನು ಅಖಿಲೇಶ್ ಯಾದವ್‌ಗೆ ಪವಾರ್ ತಿಳಿಸಿ ತಮಗೆ ಧೋಖಾ ಆದದ್ದು ವಿವರಿಸಿದರು.
ಖರ್ಗೆ ಬಳಿ ಬಿರುಸಾಗಿ ಪ್ರಶ್ನಿಸಿದ ಪವಾರ್ ಬಿಜೆಪಿಯ ಈ ನಿರ್ಧಾರವನ್ನು ತಮಗ್ಯಾಕೆ ತಿಳಿಸಲಿಲ್ಲ? ಎಂದು ಕೇಳಿದರು. ಈಗಷ್ಟೇ ಬಂದ ಸುದ್ದಿಯಾದ್ದರಿಂದ ತಿಳಿಸಲಾಗಲಿಲ್ಲ ಅಂದರು. ಪ್ರಧಾನಮಂತ್ರಿ ಯಾರು? ಅಂತ ನಿರ್ಧರಿಸಿಯೇ ಮುಂದಿನ ನಿರ್ಧಾರ ತೆಗೆದುಕೊಳ್ಳುವ ನಿರ್ಧಾರವನ್ನು ಪವಾರ್ ತಿಳಿಸಿದರು. ಇದರ ಮಧ್ಯೆ ತನ್ನನ್ನು ಕೇಳದೇ ಯಾವ ನಿರ್ಧಾರವನ್ನೂ ತೆಗೆದುಕೊಳ್ಳದಿರಲು ಅಖಿಲೇಶ್ ಖಡಕ್ಕಾಗಿ ತಿಳಿಸಿದರು.
ಫಲಿತಾಂಶ ಪೂರ್ತಿಯಾಗಿ ಬರುವ ಮೊದಲೇ ಇಂಡಿ ಮೈತ್ರಿಕೂಟದಲ್ಲಿ ಗೊಂದಲ ಶುರುವಾಗಿತ್ತು. ದೇಶದ 140 ಕೋಟಿ ಜನರಿಗೆ ತಿಂಗಳಿಗೆ ಎಂಟೂವರೆ ಸಾವಿರ, ಮತ್ತು ಸಂಪತ್ತಿನ ಸಮಾನ ಹಂಚಿಕೆಯ ಪ್ರಣಾಳಿಕೆಯನ್ನು ಈಡೇರಿಕೆಯ ಬಗ್ಗೆ ಯೋಚಿಸಿದ ನಿತೀಶ್, ನಾಯ್ಡು ಮರಳಿ ಬಿಜೆಪಿಗೆ ಬೆಂಬಲ ಘೋಷಿಸಿದರು. ಚರಣ್ ಸಿಂಗ್, ಚಂದ್ರಶೇಖರ್, ದೇವೇಗೌಡ, ಗುಜ್ರಾಲರಿಗೆ ಮಾಡಿದಂತೆ ಮಾಡಿದರೇನು ಎಂದು ಯೋಚಿಸಿದ ನಿತೀಶ್, ನಾಯ್ಡು ಈ ನಿರ್ಧಾರ ಘೋಷಿಸಿದ್ದರು.
ಬಿಜೆಪಿಯ 240 ಮತ್ತು ಪಾಸ್ವಾನ್, ಶಿಂದೆ ಮತ್ತಿತರ ಚಿಕ್ಕಪುಟ್ಟ ಪಕ್ಷಗಳು ಒಟ್ಟು ಸೇರಿ 264 ಆಗಿ ಶಕ್ತಿಶಾಲಿ ವಿರೋಧಪಕ್ಷವಾಗುವ ಸಿದ್ಧತೆ ನಡೆಸಿತ್ತು. ಜಯಂತ್ ಚೌಧುರಿಯ ಮೂಲಕ್ ಮೋದಿ, ಶಾಗೆ ಇಂಡಿ ಒಕ್ಕೂಟದ ಒಳಗಿನ ಗೊಂದಲದ ಅರಿವೂ ಆಗಿತ್ತು.ಈ ಮೊದಲೇ ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಸ್ವತಃ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ತಿಂಗಳಿಗೆ 8500 ಕೊಡುವುದಾಗಿ ಗಾಳಿಸುದ್ದಿ ಹಬ್ಬಿಸಿತ್ತು. ಹಾಗಾಗಿಯೇ ಕ್ಯೂ ಶುರುವಾಯಿತು.
ಈ ಆಶ್ವಾಸನೆಯನ್ನು ಈಡೇರಿಸದಿದ್ದರೆ ವಿರೋಧ ಪಕ್ಷದಲ್ಲಿ ಕೂರಲಿರುವ ಬಿಜೆಪಿ ಬಿಟ್ಟೀತೇ? ಈ ಭಯದಿಂದ ಕಾಂಗ್ರೆಸ್ ಸರ್ಕಾರ ರಚಿಸುವ ಯಾವುದೇ ಇಂಡಿ ಮೈತ್ರಿ ಪಕ್ಷಕ್ಕೆ ಬಾಹ್ಯ ಬೆಂಬಲ ಕೊಡುವುದಾಗಿ ತಿಳಿಸಿತು. ಯಾಕೆಂದರೆ ಹಾಗೆ ಮಾಡಿದರೆ ತಮ ಆಶ್ವಾಸನೆ ಈಡೇರಿಸುವ ಅಗತ್ಯ ಬೀಳುವುದಿಲ್ಲವಲ್ಲ.
ನಿತೀಶ್, ನಾಯ್ಡು ಬೆಂಬಲ ಘೋಷಿಸಿದಾಗ ಮೋದಿ, ಶಾ ಪಟ್ಟಾಗಿ ಕೂತು ತಮ ಬಳಿಯೇ ಇಟ್ಟುಕೊಂಡರು. ಇದರಲ್ಲಿ ಗೃಹ, ಹಣಕಾಸು, ರಕ್ಷಣಾ ಖಾತೆ, ವಿದೇಶಿ ವ್ಯವಹಾರ ಬರುತ್ತವೆ. ನಾಯ್ಡು, ನಿತೇಶ್ ಒಪ್ಪಿದರು. ನಂತರವೇ ಬಿಜೆಪಿ ಸರ್ಕಾರ ಮಾಡುವುದಾಗಿ ಘೋಷಿಸಿತು. ಈಗಿರುವುದು ವಾಜಪೇಯಿ, ಅಡ್ವಾಣಿ ಕಾಲವಲ್ಲ , ತಂತ್ರದ ಕಾಲ.