Tuesday, May 20, 2025
Homeರಾಷ್ಟ್ರೀಯ | Nationalಒಂದು ವರ್ಷದ ಮಗನ ಕತ್ತು ಹಿಸುಕಿ ಕೊಂದ ಪಾಪಿ ತಂದೆ

ಒಂದು ವರ್ಷದ ಮಗನ ಕತ್ತು ಹಿಸುಕಿ ಕೊಂದ ಪಾಪಿ ತಂದೆ

ಲಕ್ನೋ,ಜೂ.22 (ಪಿಟಿಐ)- ಪತ್ನಿ ಹಡೆದ ಮಗು ನನ್ನದಲ್ಲ ಎಂದು ಶಂಕಿತಗೊಂಡ ಪಾಪಿ ತಂದೆಯೊಬ್ಬ ತನ್ನ ಒಂದು ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಒಂದು ವರ್ಷದ ಮಗನನ್ನು ಹತ್ಯೆ ಮಾಡಿದ ಪಾಪಿ ತಂದೆಯನ್ನು ಬಹ್ರೈಚ್‌ನ ನಿವಾಸಿ ಸುಜಿತ್‌ ಎಂದು ಗುರುತಿಸಲಾಗಿದೆ.ತನ್ನ ಪತ್ನಿ ಹಡೆದ ಮಗುವಿಗೆ ತಂದೆ ನಾನಲ್ಲ ಎಂದು ನಂಬಿದ್ದ ಸುಜಿತ್‌ ಒಂದು ವರ್ಷದ ಮಗುವಿನ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗುವನ್ನು ತಾಯಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ಕುರಿತಂತೆ ತಾಯಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ಸುಜಿತ್‌ನನ್ನು ಬಂಧಿಸಲಾಗಿದೆ ಎಂದು ರೂಪೈದಿಹಾ ಪೊಲೀಸ್‌‍ ಠಾಣೆಯ ಎಸ್‌‍ಎಚ್‌ಒ ಸಂಶೇರ್‌ ಬಹದ್ದೂರ್‌ ಸಿಂಗ್‌ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸುಜಿತ್‌ ತನ್ನ ಹೆಂಡತಿಯ ನಿಷ್ಠೆಯನ್ನು ಅನುಮಾನಿಸುತ್ತಾನೆ ಮತ್ತು ಅಪ್ರಾಪ್ತ ಹುಡುಗ ತನ್ನ ಮಗು ಅಲ್ಲ ಎಂದು ಹೇಳುತ್ತಿದ್ದನು, ಆದ್ದರಿಂದ ಅವನು ಅವನನ್ನು ಕೊಂದಿದ್ದಾನೆ ಎಂದು ಕಂಡುಬಂದಿದೆ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News