ಬೆಂಗಳೂರು,ಜ.4- ಗುಂಡು ಹಾರಿಸಿ ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಬಲಿ ಪಡೆದ ಶಾಸಕನನ್ನು ಉಚ್ಛಾಟಿಸುವ ತಾಕತ್ತು ನಿಮ ಪಕ್ಷಕ್ಕಿದೆಯೇ? ಎಂದು ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ ಮಾಡಿದೆ.
ಬಳ್ಳಾರಿ ಗಲಭೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಗಲಭೆ ನಡೆಸಿದ್ದು ಕಾಂಗ್ರೆಸ್ ಶಾಸಕ, ಗುಂಡು ಹಾರಿಸಿದ್ದೂ ಕಾಂಗ್ರೆಸ್ ಗೂಂಡಾಗಳ ಕಡೆಯವರು, ಬಿಜೆಪಿ ಶಾಸಕರನ್ನು ಹತ್ಯೆ ಮಾಡಲು ಪ್ರಚೋದಿಸಿದ್ದೂ ಕಾಂಗ್ರೆಸ್ ಶಾಸಕ. ಆದರೆ, ಅಮಾನತಿನ ಶಿಕ್ಷೆ ಮಾತ್ರ ಸರ್ಕಾರಿ ಅಧಿಕಾರಿಗೆ ಎಂದು ಕಿಡಿಕಾರಿದೆ.
ಪೂರ್ವನಿಯೋಜಿತ, ಸರ್ಕಾರಿ ಪ್ರಾಯೋಜಿತ ಮತ್ತು ಆಡಳಿತ ಯಂತ್ರವೇ ನೇರವಾಗಿ ಭಾಗಿಯಾದ ಪ್ರಕರಣಕ್ಕೆ ಆಗಷ್ಟೇ ಅಧಿಕಾರ ಸ್ವೀಕರಿಸಿದ ಸರ್ಕಾರಿ ಅಧಿಕಾರಿಯನ್ನು ಸಿದ್ದಾರಾಮಯ್ಯ ಸರ್ಕಾರ ಅಮಾನತುಗೊಳಿಸಿದ್ದೇಕೆ? ಎಂದು ಪ್ರಶ್ನಿಸಿದೆ. ಗುಂಡು ಹಾರಿಸಿ ತಮದೇ ಪಕ್ಷದ ಕಾರ್ಯಕರ್ತನನ್ನು ಬಲಿ ಪಡೆದ ಶಾಸಕನನ್ನು ಉಚ್ಛಾಟಿಸುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕಿದೆಯೇ? ಎಂದೂ ಪ್ರಶ್ನಿಸಿದೆ.
