Friday, November 22, 2024
Homeರಾಷ್ಟ್ರೀಯ | Nationalಬಿಎಸ್‌‍ಎಫ್‌ನ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ನಾಪತ್ತೆ

ಬಿಎಸ್‌‍ಎಫ್‌ನ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ನಾಪತ್ತೆ

ಭೂಪಾಲ್‌,ಜು.7- ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಿಎಸ್‌‍ಎಫ್‌ನ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ನಾಪತ್ತೆಯಾಗಿದ್ದಾರೆ. ಮಧ್ಯಪ್ರದೇಶದ ಜಬಲ್‌ಪುರ ನಿವಾಸಿ ಆಕಾಂಕ್ಷಾ ನಿಖರ್‌ ಮತ್ತು ಶಹಾನಾ ಖಾತೂನ್‌ ಪಶ್ಚಿಮ ಬಂಗಾಳದ ನಿವಾಸಿ ಶಹಾನಾ ಖಾತೂನ್‌ ನಾಪತ್ತೆಯಾಗಿರುವ ಮಹಿಳಾ ಕಾನ್‌ಸ್ಟೇಬಲ್‌ಗಳು. ಜೂ.6ರಂದು ಇಬ್ಬರೂ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ಮಹಿಳಾ ಪೇದೆಯ ತಾಯಿ ನೀಡಿದ ದೂರಿನ ಮೇರೆಗೆ ಬಿಲುವಾ ಪೊಲೀಸ್‌‍ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಕಾನ್‌ಸ್ಟೇಬಲ್‌ಗಳ ಪತ್ತೆಗೆ ತನಿಖೆ ನಡೆಸಲು ಎಸ್‌‍ಐಟಿ ಕೂಡ ರಚಿಸಲಾಗಿದೆ. ಪೊಲೀಸರೊಂದಿಗೆ ಎಸ್‌‍ಐಟಿ ಮತ್ತು ಬಿಎಸ್‌‍ಎಫ್‌ ಗುಪ್ತಚರ ದಳವೂ ಅವರಿಗಾಗಿ ಹುಡುಕಾಟ ನಡೆಸುತ್ತಿದೆ.

ಬಿಎಸ್‌‍ಎಫ್‌‍ ಅಕಾಡೆಮಿ ಟೆಕನ್‌ಪುರ್‌ ಗ್ವಾಲಿಯರ್‌ನಲ್ಲಿ ನಿಯೋಜಿಸಲಾಗಿದ್ದ ಈ ಕಾನ್‌ಸ್ಟೆಬಲ್‌ಗಳ ಹುಡುಕಾಟವು ಈಗ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಗಡಿಯನ್ನು ತಲುಪಿದೆ.

ಬಿಎಸ್‌‍ಎಫ್‌ ಅಕಾಡೆಮಿಯ ಹಾಸ್ಟೆಲ್‌ ಕೊಠಡಿಯಲ್ಲಿ ಮೊಬೈಲ್‌ ಬಿಟ್ಟು ಹೋಗಿದ್ದಾಳೆ. ಬಿಎಸ್‌‍ಎಫ್‌ನಿಂದ ಮಾಹಿತಿ ಪಡೆದು ಗ್ವಾಲಿಯರ್‌ನ ಬಿಲುವಾ ಠಾಣೆ ಪೊಲೀಸರು ತನಿಖೆ ನಡೆಸಿದಾಗ, ಗ್ವಾಲಿಯರ್‌ ರೈಲು ನಿಲ್ದಾಣದಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲ ಗ್ವಾಲಿಯರ್‌ ರೈಲು ನಿಲ್ದಾಣದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರ ಚಿತ್ರಗಳೂ ಸೆರೆಯಾಗಿವೆ. ಇವರಿಬ್ಬರೂ ಗ್ವಾಲಿಯರ್‌ನಿಂದ ದೆಹಲಿಗೆ ರೈಲು ಹಿಡಿದಿದ್ದರು ಎಂಬುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ದೆಹಲಿಯ ಎಟಿಎಂನಿಂದ ಹಣ ಡ್ರಾ ಮಾಡಿ ಕೋಲ್ಕತ್ತಾಗೆ ತೆರಳಿದ್ದಾರೆ. ಕೋಲ್ಕತ್ತಾದಿಂದ ಮುರ್ಷಿದಾಬಾದ್‌ ತಲುಪಿದ್ದಾರೆ.

ಇಬ್ಬರೂ 2021ರಿಂದ ಅಕಾಡೆಮಿಯ ಸಹಾಯಕ ತರಬೇತಿ ಕೇಂದ್ರದಲ್ಲಿ ಬೋಧಕ (ತರಬೇತುದಾರ) ಹುದ್ದೆಯನ್ನು ಹೊಂದಿದ್ದಾರೆ.ಪ್ರಕರಣದಲ್ಲಿ ಕಾಣೆಯಾದ ಮಹಿಳಾ ಕಾನ್‌ಸ್ಟೆಬಲ್‌‍ ಆಕಾಂಕ್ಷಾ ಅವರ ತಾಯಿಯ ದೂರಿನ ಮೇರೆಗೆ ಬಿಲುವಾ ಪೊಲೀಸ್‌‍ ಠಾಣೆಯಲ್ಲಿ ಶಹಾನಾ ಖಾತೂನ್‌, ಅಕ್ಕ ಮತ್ತು ಅವರ ಕುಟುಂಬದ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ.

ಪೊಲೀಸ್‌‍ ತಂಡವನ್ನು ಬಂಗಾಳಕ್ಕೆ ಕಳುಹಿಸಲಾಗಿದೆ. ಮತ್ತೊಂದೆಡೆ, ಎಸ್‌‍ಐಟಿ ಮತ್ತು ಬಿಎಸ್‌‍ಎಫ್‌ ಗುಪ್ತಚರ ಘಟಕ ಕೂಡ ಆಕಾಂಕ್ಷಾಗಾಗಿ ಹುಡುಕಾಟ ನಡೆಸುತ್ತಿದೆ.

RELATED ARTICLES

Latest News