Saturday, November 23, 2024
Homeರಾಷ್ಟ್ರೀಯ | Nationalಛತ್ತೀಸ್‌‍ಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲೀಯರ ಬಂಧನ, ಸ್ಫೋಟಕಗಳ ವಶ

ಛತ್ತೀಸ್‌‍ಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲೀಯರ ಬಂಧನ, ಸ್ಫೋಟಕಗಳ ವಶ

ಸುಕಾ,ಜು.7- ಛತ್ತೀಸ್‌‍ಗಢದ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸರು ಐವರು ನಕ್ಸಲೀಯರನ್ನು ಬಂಧಿಸಿದ್ದು, ಅವರಿಂದ ಎರಡು ಬ್ಯಾರೆಲ್‌ ಗ್ರೆನೇಡ್‌ ಲಾಂಚರ್‌ ಶೆಲ್‌ಗಳು ಮತ್ತು ಟಿಫಿನ್‌ ಬಾಂಬ್‌ ಸೇರಿದಂತೆ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಹೇಮ್ಲಾ ಪಾಲ (35), ಹೇಮ್ಲಾ ಹಂಗಾ (35), ಸೋಡಿ ದೇವ (25), ನುಪ್ಪೊ (20) ಮತ್ತು ಕುಂಜಮ್‌ ಮಾಸ (28) ಎಂದು ಗುರುತಿಸಲಾಗಿದೆ, ಎಲ್ಲರೂ ಚಿಂತಲ್ನಾರ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯ ನಿವಾಸಿಗಳು ಮತ್ತು ಸೂರ್ಪನಗುಡದಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ.

ಎರಡು ದೇಶೀ ನಿರ್ಮಿತ ಬ್ಯಾರೆಲ್‌ ಗ್ರೆನೇಡ್‌ ಲಾಂಚರ್‌ (ಬಿಜಿಎಲ್‌‍) ಶೆಲ್‌ಗಳು, ಒಂದು ಟಿಫಿನ್‌ ಬಾಂಬ್‌‍, ಏಳು ಜಿಲೆಟಿನ್‌ ರಾಡ್‌ಗಳು, ಒಂಬತ್ತು ಡಿಟೋನೇಟರ್‌ಗಳು, ಸ್ಫೋಟಕ ಪುಡಿ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ತಯಾರಿಸಲು ಬಳಸುವ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ರಿಸರ್ವ್‌ ಗಾರ್ಡ್‌ (ಡಿಆರ್‌ಜಿ), ಬಸ್ತಾರ್‌ ಫೈಟರ್ಸ್‌ ಮತ್ತು ಜಿಲ್ಲಾ ಪಡೆಗಳ ಜಂಟಿ ತಂಡವು ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಿನ್ನೆ ಜಾಗರಗುಂದ ಪೊಲೀಸ್‌‍ ಠಾಣಾ ವ್ಯಾಪ್ತಿಯಿಂದ ನಕ್ಸಲ್‌ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಂಗಾವರಂ ಬಳಿ ಭದ್ರತಾ ಪಡೆಗಳು ಇರುವುದನ್ನು ಕಂಡು ಜಾಗರಗುಂದದ ಸಮೀಪದಲ್ಲಿ ಗ್ರಹಿಸಿದ ಕೆಲವು ನಕ್ಸಲೀಯರು, ಸ್ಥಳೀಯ ಧಿರಿಸುಗಳನ್ನು ಹಾಕಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಇದು ವ್ಯರ್ಥವಾಯಿತು.

RELATED ARTICLES

Latest News