Friday, November 22, 2024
Homeರಾಜ್ಯಮಹಾದಾಯಿ ಕುರಿತು ಗೋವಾ ಕಿರಿಕ್, ತಿರುಗೇಟು ನೀಡದೆ ರಾಜ್ಯ ಸರ್ಕಾರ ಮೌನ

ಮಹಾದಾಯಿ ಕುರಿತು ಗೋವಾ ಕಿರಿಕ್, ತಿರುಗೇಟು ನೀಡದೆ ರಾಜ್ಯ ಸರ್ಕಾರ ಮೌನ

ಬೆಳಗಾವಿ,ಜೂ.7- ಮಹಾ ದಾಯಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಟ್ವೀಟ್ ಮೂಲಕ ಸುಖಾಸುಮನೆ ಕಿತಾಪತಿ ತೆಗೆದಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ತಿರುಗೇಟು ನೀಡದೆ ಮೌನ ವಹಿಸಿದೆ ಎಂದು ಅಮಾಧಾನ ವ್ಯಕ್ತವಾಗಿದೆ.
ಮಹಾದಾಯಿ ಟ್ರಿಬ್ಯೂನಲ್ ಶಿಫಾರಸಿನ ಮೇರೆಗೆ ಕೇಂದ್ರದಿಂದ ಸೃಜಿಸಲಾದ ಪ್ರವಾಹ (ಪ್ರೊಗ್ರೆಸಿವ್ ರಿವರ್ ಅಥಾರಿಟಿ ಫಾರ್ ವೆಲ್ಫೇರ್ ಆ್ಯಂಡ್ ಹಾರ್ಮನಿ) ಅಧಿಕಾರಿಗಳ ತಂಡ ಇಂದು ಗೋವಾ ಕರ್ನಾಟಕ ಗಡಿಯ ಕಣಕುಂಬಿಯಲ್ಲಿ ಸಭೆ ನಡೆಸಿದೆ.

ಸಭೆಯಲ್ಲಿ ಪ್ರವಾಹವನ್ನು ನೀರಿನ ಯೋಜನಾ ಪ್ರದೇಶಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸಲು ಸಮಿತಿ ರಚಿಸಿರುವುದು ಗಮನಾರ್ಹ. ಆದರೆ ಗೋವಾ ಸಿಎಂ ಪ್ರಮೋದ ಸಾವಂತ್ ಟ್ವೀಟ್ ಮಾಡಿ ಪ್ರವಾಹವನ್ನು ಪರಿವೀಕ್ಷಣೆಗೆ ಕರೆಸಿದ್ದಾಗಲೂ ಕರ್ನಾಟಕ ಸರಕಾರ ನಿರ್ಲಕ್ಷ್ಯ ವಹಿಸಿದೆ.

ನಿಯಮಿತ ಭೇಟಿಗಾಗಿ ಪ್ರವಾಹ ಸಮಿತಿ ಆಗಮಿಸಿದೆ ಎಂದು ಗೋವಾ ಹೇಳಿಕೊಳ್ಳುತ್ತಿದ್ದರೂ ಅದರ ಹುನ್ನಾರ ಬೇರೆಯದೇ ಆಗದೆ. ಗೋವಾ ಸಿಎಂ ಟ್ವೀಟ್ ಮಾಡಿ 72 ಗಂಟೆ ಕಳೆದರೂ ಕರ್ನಾಟಕ ಮಾತ್ರ ಈ ವಿಷಯದಲ್ಲಿ ಗಮನಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.

ಕರ್ನಾಟಕ-ಗೋವಾ ನಡುವಿನ ಮಹದಾಯಿ ಯೋಜನಾ ಪ್ರದೇಶದಲ್ಲಿ ಸಾಮರಸ್ಯ ಮೂಡಿಸುವ ಪ್ರವಾಹ ಆಗಮಿಸಿ ಏನು ಪ್ರಯೋಜನ? ತಿಳಿದಿಲ್ಲ. ಜಲಶಕ್ತಿ ಮಂತ್ರಾಲಯದ ಪ್ರವಾಹ ಸಮಿತಿಯ ಚೇರಮನ್ ಪಿ.ಎಂ. ಸ್ಕಾಟ್, ಸದಸ್ಯರಾದ ಮುಖ್ಯ ಅಭಿಯಂತರ ವಿರೇಂದ್ರ ಶರ್ಮಾ, ನವದೆಹಲಿಯ ಹೈಡ್ರೋಲಾಜಿ ವಿಭಾಗದ ಮುಖ್ಯ ಅಭಿಯಂತರ ಮನೋಜ್ ತಿವಾರಿ, ಮಿಲಿಂದ ನಾಯಕ, ಸುಭಾಶಚಂದ್ರ ಸೇರಿ ಇತರ ಹಿರಿಯ ಅಧಿಕಾರಿಗಳು ಸಾಧಕಬಾಧಕಗಳ ಚರ್ಚೆ ನಡೆಸಿದ್ದಾರೆ.

ಕರ್ನಾಟಕ ಸರಕಾರದ ಮೌನ, ಗೋವಾ ಸಿಎಂ ಕಿತಾಪತಿ, ನಿಯಮಿತದ ಹೆಸರಿನಲ್ಲಿ ಆಗಮಿಸಿದ ಪ್ರವಾಹ ಸಮಿತಿಯ ಪರಿವೀಕ್ಷಣೆಗೆ ರಾಜ್ಯ ಕನ್ನಡ ಹಾಗೂ ಸಾಮಾಜಿಕ ಸಂಘಟನೆಗಳ ಆಕ್ಷೇಪ ವ್ಯಕ್ತಪಡಿಸಿವೆ. ಕರ್ನಾಟಕ ಸರಕಾರದ ಮೌನ ಹಾಗೂ ಗೋವಾ ಸಿಎಂ ಸಾವಂತ್ ಅವರ ತರಾತುರಿಯ ಉದ್ಧಟತನದ ಬಗ್ಗೆ ಹಿರಿಯ ಹೋರಾಟಗಾರ ಅಶೋಕ ಚಂದರಗಿ ಅವರು ಅಸಹನೆ ವ್ಯಕ್ತಪಡಿಸಿದ್ದ ಆರೆ.

RELATED ARTICLES

Latest News