ಬೆಂಗಳೂರು, ಜ.4: ಕಳೆದ ನಾಲ್ಕೈದು ದಿನಗಳಿಂದ ಕಡಿಮೆಯಾಗಿದ್ದ ಶೀತಗಾಳಿ ಮತ್ತೆ ಪ್ರಾರಂಭವಾಗಿದೆ. ಭಾಗಶಃ ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಕನಿಷ್ಠ ತಾಪಮಾನದಲ್ಲಿ 2ರಿಂದ 3 ಡಿ.ಸೆ.ನಷ್ಟು ಹೆಚ್ಚಳವಾಗಿತ್ತು. ಆದರೆ, ನಿನ್ನೆಯಿಂದ ಮತ್ತೆ ತಂಪಾದ ಮೇಲ್ಮೈ ಗಾಳಿ ಬೀಸುತ್ತಿದ್ದು, ಮಾಗಿ ಚಳಿಯ ತೀವ್ರತೆ ಹೆಚ್ಚಾಗತೊಡಗಿದೆ.
ತೀವ್ರ ಚಳಿಯಿಂದ ತತ್ತರಿಸಿ ಹೋಗಿದ್ದ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದೆ. ಆದರೆ, ದಕ್ಷಿಣ ಕರ್ನಾಟಕ ಭಾಗದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಕುಸಿತವಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಕೋಲಾರದಲ್ಲಿ ಅತಿ ಕಡಿಮೆ 10.3 ಡಿ.ಸೆ.ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕರಾವಳಿ ಭಾಗದ ಜಿಲ್ಲೆಗಳನ್ನು ಹೊರತುಪಡಿಸಿದರೆ, ಉಳಿದಡೆ ಕನಿಷ್ಠ ಉಷ್ಣಾಂಶ 15 ಡಿ.ಸೆ.ಗಿಂತ ಕಡಿಮೆ ದಾಖಲಾಗುತ್ತಿದೆ.
ಮಕರ ಸಂಕ್ರಾಂತಿ ಹಬ್ಬದವರೆಗೂ ಮಾಗಿ ಚಳಿಯ ತೀವ್ರತೆ ಕಂಡುಬರಲಿದೆ ಹಾಗೂ ಶೀತಗಾಳಿಯು ಮುಂದುವರೆಯಲಿದೆ. ಹೀಗಾಗಿ ರಾಜ್ಯದಲ್ಲಿ ಚಳಿ ಹೆಚ್ಚಾಗಿರುತ್ತದೆ. ಕೆಲವೆಡೆ ಮುಂಜಾನೆ ಮಂಜು ಕವಿಯುವುದು ಸಾಮಾನ್ಯವಾಗಿರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಕನಿಷ್ಠ ತಾಪಮಾನದ ವಿವರ:
ಚಿಕ್ಕಬಳ್ಳಾಪುರ – 11.1 ಡಿ.ಸೆ.,
ತುಮಕೂರು – 11.4 ಡಿ.ಸೆ.,
ಚಿಕ್ಕಮಗಳೂರು – 12.1 ಡಿ.ಸೆ.,
ಕೊಪ್ಪಳ – 12.5 ಡಿ.ಸೆ.,
ಧಾರವಾಡ – 12.6 ಡಿ.ಸೆ.,
ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ – 12.7 ಡಿ.ಸೆ.,
ಮೈಸೂರು, ಬೆಂಗಳೂರು ದಕ್ಷಿಣ – 12.8 ಡಿ.ಸೆ.,
ಬೆಳಗಾವಿ – 13 ಡಿ.ಸೆ.,
ವಿಜಯನಗರ, ಚಾಮರಾಜನಗರ – 13.1 ಡಿ.ಸೆ.,
ಹಾಸನ, ಬೀದರ್ – 13.2 ಡಿ.ಸೆ.,
ಗದಗ – 13.5 ಡಿ.ಸೆ.,
ದಾವಣಗೆರೆ – 13.7 ಡಿ.ಸೆ.,
ಬೆಂಗಳೂರು ನಗರ – 13.8 ಡಿ.ಸೆ.,
ಬಾಗಲಕೋಟೆ – 13.9 ಡಿ.ಸೆ.,
ಚಿತ್ರದುರ್ಗ – 14 ಡಿ.ಸೆ.,
ಹಾವೇರಿ – 14.1 ಡಿ.ಸೆ.,
ಮಂಡ್ಯ – 14.3 ಡಿ.ಸೆ.,
ವಿಜಯಪುರ – 14.6 ಡಿ.ಸೆ.,
ಕೊಡಗು, ಕಲಬುರಗಿ – 15.1 ಡಿ.ಸೆ.,
ರಾಯಚೂರು – 15.6 ಡಿ.ಸೆ.,
ಉತ್ತರ ಕನ್ನಡ – 15.5 ಡಿ.ಸೆ.
ಉಳಿದ ಜಿಲ್ಲೆಗಳ ಕನಿಷ್ಠ ತಾಪಮಾನವು 15 ಡಿ.ಸೆ.ಗಿಂತ ಹೆಚ್ಚಾಗಿದೆ.
