Sunday, October 6, 2024
Homeರಾಜ್ಯಇದೇ ತಿಂಗಳ 13ರಂದು ಕಾಂಗ್ರೆಸ್‌‍ ಕಚೇರಿಯಲ್ಲಿ ಕಾರ್ಯಕರ್ತರ ಕುಂದುಕೊರತೆ ಆಲಿಸಲಿದ್ದಾರೆ ಸಿಎಂ

ಇದೇ ತಿಂಗಳ 13ರಂದು ಕಾಂಗ್ರೆಸ್‌‍ ಕಚೇರಿಯಲ್ಲಿ ಕಾರ್ಯಕರ್ತರ ಕುಂದುಕೊರತೆ ಆಲಿಸಲಿದ್ದಾರೆ ಸಿಎಂ

ಬೆಂಗಳೂರು,ಜು.8- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ತಿಂಗಳ 13 ರಂದು ಕಾಂಗ್ರೆಸ್‌‍ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಲು ಮತ್ತೊಮೆ ಸಮಯ ನಿಗದಿಯಾಗಿದೆ. ಈ ಮೊದಲು ಜು.6 ರಂದು ನಿಗದಿಯಾಗಿದ್ದ ಸಮಯ ವಿವಿಧ ಕಾರಣಗಳಿಗಾಗಿ ಮುಂದೂಡಿಕೆ ಆಗಿತ್ತು. ಈಗ ಎರಡನೇ ಬಾರಿ ಜು.13 ರಂದು ಸಮಯ ನಿಗದಿಯಾಗಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿಯವರು ಕೆಪಿಸಿಸಿಯ ಭಾರತ್‌ಜೋಡೋ ಆಡಿಟೋರಿಯಂನ ಕಟ್ಟಡದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ.

ಪಕ್ಷದ ಸದಸ್ಯರು, ಕಾರ್ಯಕರ್ತರು, ಮುಖಂಡರು ಅಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಆಡಳಿತಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.ಕಾರ್ಯಕರ್ತರ ಸ್ಪಂದನಾ ಕಾರ್ಯಕ್ರಮದ ಸಭೆಯಲ್ಲಿ ಭಾಗವಹಿಸುವವರು ಪೂರ್ವಭಾವಿಯಾಗಿ ನೊಂದಾವಣೆ ಮಾಡಿಕೊಳ್ಳಬೇಕಿದೆ.

ಗೂಗಲ್‌ ಶೀಟ್‌ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಪಕ್ಷದ ಕಚೇರಿಗೆ ಸಲ್ಲಿಸಬೇಕು. ನೊಂದಣಿ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಮಂಜುನಾಥ ಬಚ್ಚೇಗೌಡ – 9731931116, ಚಮನ್‌ ರ್ಜಾನಾ – 9986899910, ಸೈಯದ್‌ ಮೊಯಿನ್‌ – 9980476394, ವಿಜಯ್‌ ಮತ್ತಿಕಟ್ಟಿ – 9480774569, ಬಿ.ಆರ್‌. ನಾಯ್ಡು – 9945490000 ಅನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.

ಸಂಪುಟದ ಪ್ರತಿಯೊಬ್ಬ ಸಚಿವರು ನಿಯಮಿತವಾಗಿ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳನ್ನು ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರು.

ಅದರಂತೆ ಈಗಾಗಲೇ ಸಚಿವ ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಕೆಲವರು ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಾವೇ ಪಕ್ಷದ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಸ್ಪಂದನಾ ಕಾರ್ಯಕ್ರಮ ನಡೆಸುವ ಮೂಲಕ ಇತರ ಸಚಿವರಿಗೆ ಮೇಲ್ಪಂಕ್ತಿ ಹಾಕಿಕೊಡುವುದಾಗಿ ಹೇಳಿದರು. ಅದರಂತೆ ಈ ಮೊದಲು ನಿಗದಿಯಾಗಿದ್ದ ಕಾರ್ಯಕ್ರಮ ಮುಂದೂಡಿಕೆಯಾಗಿ ಈಗ 2ನೇ ಬಾರಿ ಸಮಯ ನಿಗದಿಯಾಗಿದೆ.

RELATED ARTICLES

Latest News