Wednesday, February 12, 2025
Homeರಾಜಕೀಯ | Politicsಸಂಸದ ಸುಧಾಕರ್‌ ಮದ್ಯ ಹಂಚಿಕೆ ಕುರಿತು ಜೆ.ಪಿ.ನಡ್ಡಾ ಉತ್ತರಿಸಬೇಕು : ಡಿಕೆಶಿ

ಸಂಸದ ಸುಧಾಕರ್‌ ಮದ್ಯ ಹಂಚಿಕೆ ಕುರಿತು ಜೆ.ಪಿ.ನಡ್ಡಾ ಉತ್ತರಿಸಬೇಕು : ಡಿಕೆಶಿ

ಬೆಂಗಳೂರು,ಜು.8- ಬಿಜೆಪಿ ಸಂಸದ ಡಾ ಕೆ.ಸುಧಾಕರ್‌ ಅವರು ಕಾರ್ಯಕರ್ತರಿಗೆ ಮದ್ಯ ಹಂಚಿಕೆ ಮಾಡಿರುವ ಬಗ್ಗೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಉತ್ತರಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳು ಈ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನೆಲಮಂಗಲದಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವುದು ಬೇರೆ ವಿಚಾರ.

ಆದರೆ ಬಿಜೆಪಿ ಪ್ರಮುಖ ನಾಯಕರು ಇದಕ್ಕೆ ಸ್ಪಷ್ಟನೆ ನೀಡಬೇಕು. ಬಿಜೆಪಿಯ ಇಂಥ ಸಂಸ್ಕೃತಿ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರಿಗಿಂತ ರಾಷ್ಟ್ರೀಯ ನಾಯಕರು ಉತ್ತರಿಸಬೇಕು ಎಂದು ತಿಳಿಸಿದರು.

RELATED ARTICLES

Latest News