ಬೆಂಗಳೂರು,ಜು.10- ಮುಡಾ ಭೂ ಕಬಳಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಸದಸ್ಯರು ನೇರ ಶಾಮೀಲಾಗಿರುವ ಹಿನ್ನಲೆಯಲ್ಲಿ ಸಿಬಿಐನಿಂದ ತನಿಖೆ ನಡೆಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ದ ಜನಾಂದೋಲನ ರೂಪಿಸುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅವರು ಅನೇಕ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ಮುಖವಾಡ ಕಳಚಿ ಬಿದ್ದಿದೆ. ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂ. ಬೆಲೆ ಬಾಳು ಜಮೀನನ್ನು ಕಬಳಿಕೆ ಮಾಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದು ಬಂಡತನಕ್ಕೆ ಬಿದ್ದು ತಾವು ಮಾಡಿರುವ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಿಬಿಐ ತನಿಖೆಗೆ ವಹಿಸಲು ಸಮಸ್ಯೆ ಏನು ಎಂದು ಪ್ರಶ್ನೆ ಮಾಡಿದರು.
ನೀವು ಪ್ರಾಮಾಣಿಕರಾಗಿದ್ದರೆ ಸಿಬಿಐಗೆ ಕೊಡಲು ಹಿಂದೆಮುಂದೆ ಮೀನಾಮೇಷ ಏಕೆ ಎಣಿಸುತ್ತಿದ್ದೀರಿ, ಈ ಪ್ರಕರಣವನ್ನು ಎಸ್‌ಐಟಿಗೆ ಕೊಟ್ಟರೆ ತಿಪ್ಪೆ ಸವರುವ ಕೆಲಸ ಮಾಡುತ್ತಾರೆ. ನಿಮ ವಿರುದ್ಧ ಎಸ್‌ಐಟಿ ದೂರು ದಾಖಲಿಸಲು ಸಾಧ್ಯವೇ. ವಿಚಾರಣೆಗೆ ನೋಟಿಸ್ ಕೊಡಲು ಆಗುತ್ತದೆಯೇ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದುಕೊಂಡು ಅವ್ಯವಹಾರ ನಡೆಸಿ ನಮಗೆ ಪರಿಹಾರ ನೀಡಬೇಕೆಂದು ಹೇಳಿದ ದೇಶದ ಮೊದಲ ಮುಖ್ಯಮಂತ್ರಿ. ಕುಟುಂಬದ ಸದಸ್ಯರಿಗೆ ಬೇಕಾಬಿಟ್ಟಿ ನಿವೇಶನ ಹಂಚಲಾಗಿದೆ. ಪರಿಹಾರ ನೀಡಲು ಹೇಗೆ ಸಾಧ್ಯ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಅಧಿಕಾರಕ್ಕೆ ಬರುವ ಮುನ್ನ ಭ್ರಷ್ಟಾಚಾರ ಆಡಳಿತ ನೀಡುತ್ತೇವೆ ಎಂದು ರಾಜ್ಯದ ಜನತೆಗೆ ವಾಗ್ದಾನ ಮಾಡಿದ್ದರು. ಮಹದೇವಪ್ಪನಿಗೂ ಫ್ರೀ, ನಿನಗೂ ಫ್ರೀ ಎಂದು ಹೇಳಿದ್ದ ಸಿದ್ದರಾಮಯ್ಯನವರು ಈಗ ತಮ ಪತ್ನಿಗೆ 14 ನಿವೇಶನಗಳನ್ನು ಮಂಜೂರು ಮಾಡಿಕೊಂಡಿದ್ದಾರೆ. ಇದು ಅವರ ಆಡಳಿತ ಶೈಲಿ ಎಂದು ವ್ಯಂಗ್ಯವಾಡಿದರು.
ಸಿಎಂ ತಮ ಪತ್ನಿಗೆ 2 ಕೂಟಿಗೂ ಹೆಚ್ಚು ಬೆಲೆಬಾಳುವ, 62 ಕೋಟಿಗೂ ಹೆಚ್ಚಿನ ಸೈಟ್ ಅಲಾರ್ಟ್ ಮಾಡಿಕೊಂಡಿದ್ದಾರೆತಾವೇ ಅವ್ಯವಹಾರ ನಡೆಸಿ ಪರಿಹಾರ ಕೇಳಿದ ಸಿಎಂ ದೇಶದಲ್ಲಿ ಇದ್ದರೆ ಅದು ಸಿದ್ದರಾಮಯ್ಯ. 2022ನೇ ಜನವರಿ 12ರಂದು ಕ್ರಯಪತ್ರ ಅಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಭೂಮಿಯನ್ನ ಸ್ವ ಇಚ್ಛೆಯಿಂದ ಬಿಟ್ಟುಕೊಡಲು ನಿಯಮ 1991ರ ಮೆರೆಗೆ 14 ಸೈಟ್ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಸಿಎಂ ಅವರು ಹೇಳಿದಂತೆ 91ರ ಕಾನೂನಿನ ಪ್ರಕಾರ ಅವರಿಗೆ ಬರಬೇಕಾದ ಸೈಟ್ 4.800 ಅಡಿ 4060 ಇರುವ 2 ಸೈಟ್ ಕೊಡಬೇಕು ಎಂದು ಮಾತ್ರ ಇರುವುದು.
ಕಾನೂನಿನಲ್ಲಿ 2 ಸೈಟ್ ಕೊಡುವ ಜಾಗದಲ್ಲಿ 14 ಸೈಟ್ ಕೊಟ್ಟಿದ್ದಾರೆ ಅಂದರೆ ಇದು ಕಾನೂನು ಬಾಹಿರವಾದುದು ಎಂದರು. 2004ರಲ್ಲಿ ಪಾರ್ವತಮ ಅವರ ಅಣ್ಣ ಜಮೀನು ಖರೀದಿ ಮಾಡ್ತಾರೆ. ಭೂಸ್ವಾಧೀನದಲ್ಲಿ ಇದೆ ಅಂತ ದಾಖಲೆಯಲ್ಲಿ ಇತ್ತು 2009-10ರಲ್ಲಿ ಗಿಫ್‌್ಟ ಕೊಟ್ಟಾಗಲೂ ಈ ಲ್ಯಾಂಡ್, ಅಕ್ವೈಸೇಷನ್ ಆಫ್ ಮೂಡಾ ಈ 3 ಎಕರೆ 18 ಗುಂಟೆನಲ್ಲಿ ಉಲ್ಲೇಖ ಇದೆ, ಮೂಡಾ ಅಕ್ವೈಸೇಷನ್ ಆಗಿದೆ ಎಂದು ಮಲ್ಲಿಕಾರ್ಜುನ ಸ್ವಾಮಿ ಅವರು ಗಿಫ್ಟ್ ಕೊಟ್ಟಾಗ ಅದು ಕೃಷಿ ಭೂಮಿ ಎಂದರು.
ಅದು ತಪ್ಪು ಮಾಹಿತಿ ಸಿಎಂ 2013ರ ಚುನಾವಣಾ ಅಫಿಡವಿಟ್‌ನಲ್ಲಿ ಮೆನ್ಷನ್ ಮಾಡಿಲ್ಲ. ಇದು ಕ್ಲಿಯರ್ ವಯಲೇಶನ್ ಅಫ್ ಆ್ಯಕ್ಟ್, ಭಾರತೀಯ ಚುನಾವಣಾ ಆಯೋಗಕ್ಕೂ ದೂರು ಕೊಡುತ್ತೇವೆ. ಸಿಎಂ ನನಗೆ 18 ಕೋಟಿ ಮಾತ್ರ ಬಂದಿರೋದು ಎಂದು ಹೇಳುತ್ತಾರೆ. 1991 ರ ಕಾಯಿದೆ ಪ್ರಕಾರ 4060ಯ 2 ಸೈಟ್ ಮಾತ್ರ ತೆಗೆದುಕೊಳ್ಳುವ ಅರ್ಹತೆ ರುತ್ತದೆ. ಅದು ಹೇಗೆ 14 ಸೈಟ್ ಸಿಗುತ್ತದೆ ಎಂದು ಪ್ರಶ್ನಿಸಿದರು.
ಸಚಿವ ಭೈರತಿ ಸುರೇಶ್ ಆತುರಾತುರವಾಗಿ ಮೂಡಾ ಅಧಿಕಾರಿಗಳ ಸಭೆ ನಡೆಸಿ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಾರೆ. ಯಾವ ಡಿಸಿ ಮೂಡಾದಲ್ಲಿ ಭ್ರಷ್ಟಾಚಾರ ನಡಿತಿದೆ ಎಂದು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಆ ಡಿಸಿಯನ್ನು ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದಾರೆ. ಸಚಿವ ಭೈರತಿ ಸುರೇಶ್ ಮೂಡ ಕಡತಗಳನ್ನು ತಗೊಂಡು ಬೆಂಗಳೂರಿಗೆ ಬರ್ತಾರೆ ಸುರೇಶ್ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ.
14 ನಿವೇಶನಗಳ ಸದ್ಯದ ಬೆಲೆ ಸ್ಕೈಯರ್ ಫೀಟ್ ಗೆ 9 ಸಾವಿರ ರೂ ಇದೆ2 ಸೈಟ್ ಗೆ ಅಷ್ಟೇ ಕೊಡುವ ಅಧಿಕಾರ ಇರೋದು, 14 ಸೈಟ್ ಹೇಗೆ ಕೊಟ್ರುಹರಾಜು ಆಗಬೇಕಿದ್ದ ಸೈಟ್‌ಗಳು ಅಕ್ರಮವಾಗಿ ಹಗರಣ ಮಾಡಲಾಗುತ್ತಿದೆ. ಡಿಸಿ ವರದಿ ಕೊಟ್ಟ ನಂತರವೂ, 40 ಸೈಟ್‌ಗಳನ್ನು ಒಬ್ಬರಿಗೆ ಕೊಟ್ಟಿದ್ದಾರೆ. ಸರ್ಕಾರ ಬಂದಮೇಲೆ ಕಾನೂನು ಬಾಹಿರವಾಗಿ ಸಾವಿರಾರು ನಿವೇಶನ ನೀಡಿದ್ದಾರೆ. ನಾವು ದಾಖಲೆ ಸಮೇತ ಈ ಹಗರಣವನ್ನು ತೆರೆದಿಟ್ಟಿದ್ದೀವಿ ಎಂದರು.