Sunday, July 21, 2024
Homeರಾಷ್ಟ್ರೀಯಶಾಕಿಂಗ್ : ತ್ರಿಪುರಾದಲ್ಲಿ 828 ವಿದ್ಯಾರ್ಥಿಗಳಿಗೆ ಹೆಚ್‌ಐವಿ ಸೋಂಕು, 47 ಸಾವು..!

ಶಾಕಿಂಗ್ : ತ್ರಿಪುರಾದಲ್ಲಿ 828 ವಿದ್ಯಾರ್ಥಿಗಳಿಗೆ ಹೆಚ್‌ಐವಿ ಸೋಂಕು, 47 ಸಾವು..!

ನವದೆಹಲಿ, ಜು.10- ಈಶಾನ್ಯ ರಾಜ್ಯದ ತ್ರಿಪುರಾದಲ್ಲಿ ಕೆಲವೇ ವಾರದಲ್ಲಿ ಸುಮಾರು 828 ವಿದ್ಯಾರ್ಥಿಗಳಿಗೆ ಹೆಚ್‌ಐವಿ ಸೋಂಕು ತಗುಲಿದ್ದು, ಇದರ ನಡುವೆ ಈ ಮಹಾಮಾರಿಗೆ 47 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಹೆಚ್‌ಐವಿ ಪೀಡಿತ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಮತ್ತು ಪ್ರತಿಷ್ಠಿತ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಸ್ಫೋಟಕ ಮಾಹಿತಿ ನೀಡಿದ್ದಾರೆ.

ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಶ್ರೀಮಂತ ಕುಟುಂಬಗಳಿಂದ ಬಂದವರು ಎಂದು ಹೇಳಲಾಗುತ್ತಿದ್ದು, ವಿವಿಧೆಡೆ ವಿದ್ಯಾಭ್ಯಾಸಕ್ಕೆ ತೆರಳಿದ್ದಾಗ ಅಡ್ಡದಾರಿ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.ಒಂದೇ ರಾಜ್ಯದ ಇಷ್ಟು ವಿದ್ಯಾರ್ಥಿಗಳು ಹೆಚ್‌ಐವಿ ಪೀಡಿತರಾಗಿರುವುದಕ್ಕೆ ಡ್ರಗ್ಸ್ ಸೇವನೆಯೂ ಕೂಡ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.


ತ್ರಿಪುರಾದ ಏಡ್ಸ್ ನಿಯಂತ್ರಣ ಸೊಸೈಟಿ ಪ್ರಕಾರ, ಇತ್ತೀಚೆಗೆ 220 ಶಾಲೆಗಳು, 24 ಕಾಲೇಜುಗಳು ಹಾಗೂ ವಿದ್ಯಾರ್ಥಿಗಳ ತಪಾಸಣೆ ಕೈಗೊಂಡಾಗ ಈ ಸ್ಫೋಟಕ ಮಾಹಿತಿ ಗೊತ್ತಾಗಿದೆ ಎಂದು ಹೇಳಿದೆ.

ಪ್ರತಿದಿನ ಹೆಚ್‌ಐವಿ ಪೀಡಿತರು ದಾಖಲಾಗುತ್ತಿದ್ದು, ಇದನ್ನು ನಿಯಂತ್ರಿಸಲು ತುರ್ತು ಕ್ರಮ ಅಗತ್ಯವಾಗಿದೆ ಎಂದು ಹೇಳಲಾಗಿದೆ. ಕಳೆದ ಮೇ 2024ರ ಮಾಹಿತಿಯಂತೆ ಒಟ್ಟು 8729 ಮಂದಿ ರಾಜ್ಯದಲ್ಲಿ ಹೆಚ್‌ಐವಿ ಪೀಡಿತರಾಗಿದ್ದು, 4570 ಪುರುಷರು, 1103 ಮಹಿಳೆಯರಿದ್ದಾರೆ ಎಂದು ವರದಿ ತಿಳಿಸಿದೆ.

RELATED ARTICLES

Latest News