ಬೈರುತ್, ಅ.19 -ಗಾಜಾದಲ್ಲಿನ ಆಸ್ಪತ್ರೆಯೊಂದರ ಮೇಲೆ ಮಾರಣಾಂತಿಕ ಬಾಂಬ್ ಸ್ಪೋಟದ ನಂತರ ಉದ್ವಿಗ್ನತೆ ಭುಗಿಲೆದ್ದಿರುವಾಗ ನಡುವೆ ಇರಾಕ್‍ನಲ್ಲಿರುವ ಅಮೆರಕ ಸೇನೆ ನೆಲೆಗಳ ಮೇಲೆ ಡ್ರೋನ್‍ಗಳ ಮೂಲಕ ದಾಳಿ ನಡೆಸಲಾಗಿದ್ದು ಕೆಲವರು ಗಾಯಗೊಂಡಿದ್ದಾರೆ.
ಎರಡು ಡ್ರೋನ್‍ಗಳು ಅಮೆರಿಕ ಪಡೆಗಳು ಬಳಸುತ್ತಿದ್ದ ಪಶ್ಚಿಮ ಇರಾಕ್‍ನಲ್ಲಿನ ನೆಲೆಯನ್ನು ಗುರಿಯಾಗಿಸಿಕೊಂಡಿವೆ ಮತ್ತು ಒಂದು ಡ್ರೋನ್ ಉತ್ತರ ಇರಾಕ್‍ನಲ್ಲಿರುವ ನೆಲೆಯನ್ನು ಉಗ್ರರು ಗುರಿಯಾಗಿಸಿಕೊಂಡಿದ್ದರು ಅಮೆರಿಕ ಪಡೆಗಳು ಮೂರನ್ನೂ ತಡೆದು ಎರಡನ್ನು ನಾಶಪಡಿಸಿದರೆ ಒಂದು ಮಾತ್ರ ಪಶ್ಚಿಮ ನೆಲೆಯಲ್ಲಿ ಸ್ಪೋಟಗೊಂಡಿದ್ದು ಸಮ್ಮಿಶ್ರ ಪಡೆಗಳಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್‍ಹೇಳಿಕೆಯಲ್ಲಿ ತಿಳಿಸಿದೆ.
ಕ್ರಿಪ್ಟೋಕರೆನ್ಸಿ ವಂಚನೆ : 32.66 ಕೋಟಿ ಮೌಲ್ಯದ ಬ್ಯಾಂಕ್ ಖಾತೆ ಜಪ್ತಿ
ಈ ಕ್ಷಣದಲ್ಲಿ ನಾವು ಇರಾಕ್ ಮತ್ತು ಇತರ ಪ್ರದೇಶದ ಪರಿಸ್ಥಿತಿಯನ್ನು ಜಾಗರೂಕತೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಅಮೆರಿಕ ಪಡೆಗಳು ಯಾವುದೇ ಬೆದರಿಕೆಯನ್ನು ಎದುರಿಸಲು ಸಜ್ಜಾಗಿದೆ ಎಂದು ಹೇಳಿದೆ. ಇರಾಕ್‍ನಲ್ಲಿರುವ ಇರಾನ್ ಬೆಂಬಲಿತ ಸೇನಾಪಡೆಗಳು ಇಸ್ರೇಲ್‍ಗೆ ಅಮೆರಿಕದ ಬೆಂಬಲದ ಕಾರಣ ದಾಳಿ ಮಾಡುವುದಾಗಿ ಬೆದರಿಕೆ ಹಾಕಿವೆ.
ಈ ನಡುವೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ ಸಂಘಟನೆ ಎರಡು ದಾಳಿಗಳ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ .ಕಳೆದ ಅ.7 ರಂದು ಯುದ್ಧದ ಆರಂಭದಿಂದಲೂ, ಲೆಬನಾನ್-ಇಸ್ರೇಲ್ ಉತ್ತರದ ಗಡಿಯುದ್ದಕ್ಕೂ ಪ್ರಬಲ ಹಮಾಸ್ ಮಿತ್ರ ಪಡೆ ಹೆಜ್ಬೊಲ್ಲಾ ಮತ್ತು ಅದರ ಅಸಾಧಾರಣ ಶಸ್ತ್ರಾಗಾರದ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿ ಇಸ್ರೇಲ್‍ನೊಂದಿಗೆ ಈ ಗುಂಪು ಸೀಮಿತ ದಾಳಿ ಮಾಡಿದೆ.
ನಮ್ಮ ಕ್ಷಿಪಣಿಗಳು, ಡ್ರೋನ್‍ಗಳು ಮತ್ತು ವಿಶೇಷ ಪಡೆಗಳು ಅಮೇರಿಕನ್ ಶತ್ರುಗಳ ಮೇಲೆ ದಾಳಿಗೆ ನಿರ್ದೇಶಿಸಲು ಸಿದ್ಧವಾಗಿವೆ ಮತ್ತು ಈ ಯುದ್ಧದಲ್ಲಿ ಮಧ್ಯಪ್ರವೇಶಿಸಿದರೆ ಅದರ ಹಿತಾಸಕ್ತಿಗಳನ್ನು ಅಡ್ಡಿಪಡಿಸಲು ಸಿದ್ಧವಾಗಿವೆ ಎಂದು ಕಟೈಬ್ ಹೆಜ್ಬೊಲ್ಲಾ ಮಿಲಿಟರಿಯ ಮುಖ್ಯಸ್ಥ ಅಹ್ಮದ್ ಅಬು ಹುಸೇನ್ ಅಲ್-ಹಮೀದಾವಿ, ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ, ಹೊತ್ತಿ ಉರಿದ ಪಬ್
ದುಷ್ಟರು ದೇಶವನ್ನು ತೊರೆಯಬೇಕು. ಇಲ್ಲವಾದಲ್ಲಿ ಮರಣಾನಂತರ ಇಹಲೋಕದಲ್ಲಿ ನರಕದ ಬೆಂಕಿಯನ್ನು ಸವಿಯುತ್ತಾರೆ ಎಂದು ಇಸ್ರೇಲ್ ಹೇಳಿದೆ.