ಕಲಘಟಗಿ (ಧಾರವಾಡ),ಜು.11- ಕಲಘಟಗಿ ಠಾಣಾ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಗೋವಾ ಮಾರುಕಟ್ಟೆ ಸಂಪರ್ಕದಿಂದ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ ನಾಲ್ವರನ್ನು ಬಂಧಿಸಿ 32ಲಕ್ಷ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಬಂಧಿತರು ಗೋವಾದಿಂದ ಸುಮಾರು 12.42 ಲಕ್ಷ ರೂ. ಕಿಮತ್ತಿನ ಎಡ್ರಿಯಲ್ ಕೋಲಾ ಲಿಕ್ಕರ್ ತೆಗೆದುಕೊಂಡು ಬಂದು ಕಲರ್ ಮಿಕ್ಸ್ ಮಾಡಿ ಇಂಪಿರಿಯಲ್ ಬ್ಲ್ಯೂ ಲೇಬಲ್ ಅಂಟಿಸಿ ಸುಮಾರು 32 ಲಕ್ಷ ರೂ. ಮೌಲ್ಯದ ಮದ್ಯ ತಯಾರಿಸಿ ಮಾರಲು ಇಟ್ಟುಕೊಂಡಿದ್ದರು ಎಂದರು.
ಹುಬ್ಬಳ್ಳಿ ಮೂಲದ ವಿನಾಯಕ ಜಿತೂರಿ, ವಿನಾಯಕ ಶಿಲ್ಲಿಂಗ್, ಈಶ್ವರ ಪವಾರ ಹಾಗೂ ರೋಹಿತ್ ಶಿಲ್ಲಿಂಗ್ ಎಂಬುವರನ್ನು ಬಂಧಿಸಲಾಗಿದೆ ಎಂದು ಹೇಳಿದರು.ಬಂಧಿತರಿಂದ 21.84ರೂ. ಮೌಲ್ಯದ 182 ಬಾಕ್ಸ್ ಇಂಪಿರಿಯಲ್ ಬ್ಲ್ಯೂ ಲೇಬಲ್ ಅಂಟಿಸಿದ ಎಡ್ರಿಯಲ್ ಕೋಲಾ ಲಿಕ್ಕರ್, 6.24 ಲಕ್ಷ ರೂ. ಮೌಲ್ಯದ ಕಲರ್ ಮಿಕ್ಸ್ ಮಾಡಿ ಲೇಬಲ್ ಅಂಟಿಸಿದ 52 ಬಾಕ್ಸ್ ಗಳು, 3.48 ಲಕ್ಷ ರೂ. ಮೌಲ್ಯದ ಕ್ರಮದಲ್ಲಿ ಡಂಪ್ ಮಾಡಿ ಕಲರ್ ಮಿಕ್ಸ್ ನ 29 ಬಾಕ್ಸ್ ಗಳು, 10 ಸಾವಿರ ಮೌಲ್ಯದ 1 ಕೀಪ್ಯಾಡ್ ಮೋಬೈಲ್, 1 ಸ್ಕ್ರೀನ್ ಟಚ್ ಮೊಬೈಲ್ ಹಾಗೂ ಎಸ್ಬಿಐ ಬ್ಯಾಂಕ್ ಪಾಸ್ಬುಕ್ ಹಾಗೂ 35 ಸಾವಿರ ಮೌಲ್ಯದ ಸ್ಕೂಟಿ ವಾಹನವನ್ನು ಜಪ್ತಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಪಿಗಳಾದ ಎಸ್.ಎಂ.ನಾಗರಾಜ, ನಾರಾಯಣ ಭರಮನಿ, ಸಿಪಿಐ ಶ್ರೀಶೈಲ್ ಕೌಜಲಗಿ ಸೇರಿದಂತೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.