Friday, November 22, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-07-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-07-2024)

ನಿತ್ಯ ನೀತಿ : ನಮ ಬಳಿ ಏನಿದೆ ಅನ್ನುವುದಕ್ಕಿಂತ ನೆಮದಿ ಇದೆಯಾ ಎಂದು ಯೋಚಿಸುವುದು ಉತ್ತಮ. ನೆಮದಿಗಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ.

ಪಂಚಾಂಗ : ಶುಕ್ರವಾರ, 12-07-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಪರಿಘ / ಕರಣ: ಗರಜೆ

ಸೂರ್ಯೋದಯ – ಬೆ.06.00
ಸೂರ್ಯಾಸ್ತ – 06.50
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ
: ಹಲವಾರು ಸವಾಲುಗಳನ್ನು ಎದುರಿಸಬೇಕಾದ ಸಂದರ್ಭ ಎದುರಾಗಲಿದೆ.
ವೃಷಭ: ಆದಾಯ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಮಹಿಳೆಯರಿಗೆ ಶುಭ ದಿನ.
ಮಿಥುನ: ಅಂದುಕೊಂಡ ಕೆಲಸ-ಕಾರ್ಯಗಳಲ್ಲಿ ಒಂದಷ್ಟು ಶ್ರಮವಿದ್ದರೂ ತಕ್ಕ ಪ್ರತಿಫಲ ಸಿಗಲಿದೆ.

ಕಟಕ: ತೈಲ ಮಾರಾಟದಿಂದ ಲಾಭ ಸಿಗಲಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ.
ಸಿಂಹ: ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಲ್ಲಿ ಹೆಚ್ಚು ಸಮಯ ಕಳೆಯುವಿರಿ.
ಕನ್ಯಾ: ಹಿರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ.

ತುಲಾ: ಆರೋಗ್ಯ ಸಮಸ್ಯೆ ಗಳನ್ನು ಎದುರಿಸಲು ಹೆಚ್ಚು ವ್ಯಾಯಾಮ ಮಾಡಬೇಕು.
ವೃಶ್ಚಿಕ: ಹಣ ಉಳಿತಾಯ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಿ.
ಧನುಸ್ಸು: ವಿವಾಹ ವಿಚಾರದಲ್ಲಿ ಅನಿರೀಕ್ಷಿತ ಬದಲಾವಣೆ ಯಾಗಲಿದೆ. ಆಹಾರ ಕ್ರಮದಲ್ಲಿ ಜಾಗ್ರತೆ ವಹಿಸಿ.

ಮಕರ: ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.
ಕುಂಭ: ನೌಕರರಿಗೆ ಉದ್ಯೋಗದಲ್ಲಿನ ಹೊಸ ವ್ಯವಸ್ಥೆಯಿಂದಾಗಿ ಮನಸ್ಸಿಗೆ ಸಂತಸ ಸಿಗಲಿದೆ.
ಮೀನ: ಮಾತು ಕಡಿಮೆ ಆಡಿದಷ್ಟು ಒಳಿತು.

RELATED ARTICLES

Latest News