ಅಮರಾವತಿ,ಜು.12- ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಪಗಿಡ್ಯಾಲ ಮಂಡಲದ ಮುಚುಮರಿ ಗ್ರಾಮದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಒಂದೇ ಶಾಲೆಯಲ್ಲಿ ಓದುತ್ತಿದ್ದ 12 ಹಾಗೂ 13 ವರ್ಷದ ಬಾಲಕರು ತಮದೇ ಶಾಲೆಯ 8 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಭೀಕರವಾಗಿ ಹತ್ಯೆಗೈದಿದ್ದಾರೆ.
ಒಟ್ಟು ಇಬ್ಬರು ಬಾಲಕರು ಸೇರಿ ಮೂವರು ಜುಲೈ 7 ರಂದು ಕೃತ್ಯವನ್ನು ಎಸಗಿ, ಬಾಲಕಿಯ ಶವವನ್ನು ಕಾಲುವೆಯೊಂದರಲ್ಲಿ ಎಸೆದಿದ್ದಾರೆ. ಇನ್ನು, ಸಿನೀಮಯ ರೀತಿಯಲ್ಲಿ ಪೊಲೀಸರ ಸ್ನೈಪರ್ ಶ್ವಾನವು ಮೂವರು ಆರೋಪಿಗಳನ್ನು ಹಿಡಿದುಕೊಟ್ಟಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಮುಚುಮರಿಯ ಪಾರ್ಕ್ ಒಂದರಲ್ಲಿ ಆಡುತ್ತಿದ್ದ ಮಗಳು ಕಾಣೆಯಾಗಿದ್ದಾಳೆ ಎಂದು ನಂದಿಕೋಟ್ಕೂರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು. ಇದಾದ ನಂತರ ಪೊಲೀಸರು ಎಷ್ಟು ಹುಡುಕಿದರೂ ಬಾಲಕಿಯು ಸಿಕ್ಕಿರಲಿಲ್ಲ. ಪ್ರಕರಣದ ಕುರಿತು ತನಿಖೆಯ ಭಾಗವಾಗಿ ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸುತ್ತಿದ್ದರು. ಇಷ್ಟಾದರೂ ಬಾಲಕಿಗೆ ಏನಾಯಿತು ಎಂಬುದೇ ಗೊತ್ತಾಗಿರಲಿಲ್ಲ. ಆದರೆ, ಪೊಲೀಸರ ಶ್ವಾನವು ಆರೋಪಿಗಳನ್ನು ಹಿಡಿದುಕೊಟ್ಟಿತು.
ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶ್ವಾನವನ್ನು ಹಿಡಿದುಕೊಂಡು ತಿರುಗಾಡುವಾಗ ಶ್ವಾನವು ಅವಸರದಲ್ಲಿ ತೆರಳಿದೆ. ಶ್ವಾನದ ಜತೆಗೆ ಓಡಿದ ಪೊಲೀಸರು, ಶ್ವಾನವು ಬಾಲಕರ ಮನೆಯ ಬಳಿ ಬಂದು ನಿಂತಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಇಬ್ಬರು ಬಾಲಕರನ್ನು ವಶಪಡಿಸಿಕೊಂಡು, ವಿಚಾರಣೆ ನಡೆಸಿದ್ದಾರೆ. ಆಗ ಒಬ್ಬ ಬಾಲಕನು ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ವಿಷಯವನ್ನು ಒಪ್ಪಿಕೊಂಡಿದ್ದಾನೆ. ಶವವನ್ನು ಕಾಲುವೆಗೆ ಎಸೆದಿರುವುದಾಗಿ ತಿಳಿಸಿದ್ದಾನೆ.
ಮುಚುಮರಿಯ ಪೊಲೀಸ್ ಠಾಣೆ ಇನ್್ಸಪೆಕ್ಟರ್ ಜಯಶೇಖರ್ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. ಬಾಲಕನೊಬ್ಬ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತೀವ್ರ ವಿಚಾರಣೆ ಬಳಿಕ ಇಬ್ಬರೂ ಬಾಯಿಬಿಟ್ಟಿದ್ದಾರೆ. ಬಾಲಕಿಯ ಶವವನ್ನು ಕಾಲುವೆಗೆ ಎಸೆದಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದುವರೆಗೆ ಬಾಲಕಿಯ ಶವ ಪತ್ತೆಯಾಗಿಲ್ಲ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಸದ್ಯ, ಕಾಲುವೆಯಲ್ಲಿ ನೀರಿನ ಮಟ್ಟ ಹೆಚ್ಚಿರುವ ಕಾರಣ ಬಾಲಕಿಯ ಶೋಧ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ.