Saturday, April 5, 2025
Homeಇದೀಗ ಬಂದ ಸುದ್ದಿಗುಡ್ಡ ಕುಸಿತ, ಶಿರಾಡಿಘಾಟ್ ಬಂದ್

ಗುಡ್ಡ ಕುಸಿತ, ಶಿರಾಡಿಘಾಟ್ ಬಂದ್

ಹಾಸನ,ಜು.19-ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್ನಲ್ಲಿ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ನೆನ್ನೆ ಸಂಜೆ ಹಾಗೂ ಇಂದು ಮುಂಜಾನೆ ದೊಡ್ಡತಪ್ಲು ಬಳಿ ಗುಡ್ಡ ಕುಸಿತವಾಗಿದ್ದು, ಇದರಿಂದಾಗಿ ಸುಮಾರು 10 ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿತ್ತು ವಾಹನ ಸಂಚಾರಕ್ಕೆ ತಡೆ ಯೊಡ್ಡಲಾಗಿದೆ.

ಈ ನಡುವೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಜುಲೈ 18 ರಿಂದ ಶಿರಡಿ ಮಾರ್ಗದಲ್ಲಿ ದುರಸ್ತಿ ಕಾರ್ಯ ಮುಗಿಯುವವರೆಗೂ ತುರ್ತು ವಾಹನ ಹೊರತುಪಡಿಸಿ ಎಲ್ಲಾ ವಾಹನಗಳಿಗೂ ಸಂಚಾರ ನಿರ್ಬಂಧಿಸಿ ಆದೇಶಿಸಿದ್ದಾರೆ.ಸಕಲೇಶಪುರ ಹಾನುಬಾಳು ಮೂಲಕ ಮೂಡಿಗೆರೆ ಇಲ್ಲಿಂದ ಧರ್ಮಸ್ಥಳ ಸುಬ್ರಹಣ್ಯ ಸಂಚರಿಸಲು ಅವಕಾಶ ಇದ್ದು ಇಲ್ಲಿಯೂ ಸಹ ಗುಡ್ಡ ಕುಸಿತವಾದರೆ ಸಂಚಾರ ನಿರ್ಬಂಧವಾಗುವ ಸಾಧ್ಯತೆ ಇದೆ.

RELATED ARTICLES

Latest News