Friday, April 11, 2025
Homeರಾಷ್ಟ್ರೀಯ | Nationalಅಮರನಾಥ ಯಾತ್ರೆಗೆ ತೆರಳಿದ 1,677 ಯಾತ್ರಾರ್ಥಿಗಳ ಹೊಸ ತಂಡ

ಅಮರನಾಥ ಯಾತ್ರೆಗೆ ತೆರಳಿದ 1,677 ಯಾತ್ರಾರ್ಥಿಗಳ ಹೊಸ ತಂಡ

ಜಮ್ಮು, ಜು.28– ಭಾರೀ ಮಳೆ ಹಾಗೂ ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಭಾನುವಾರ ಮುಂಜಾನೆ ಜಮು ಬೇಸ್ ಕ್ಯಾಂಪ್ನಿಂದ ದಕ್ಷಿಣ ಕಶ್ಮೀರ ಹಿಮಾಲಯದ ಅಮರನಾಥ ದೇಗುಲಕ್ಕೆ 1,677 ಯಾತ್ರಾರ್ಥಿಗಳ ಹೊಸ ತಂಡ ತೆರಳಿದೆ.

31 ನೇ ಬ್ಯಾಚ್ನಲ್ಲಿ 1,300 ಕ್ಕೂ ಹೆಚ್ಚು ಪುರುಷರು, 200 ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಮತ್ತು 104 ಸಾಧುಗಳು ಮತ್ತು ಸಾಧ್ವಿಗಳು ಇದ್ದಾರೆ. ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 67 ವಾಹನಗಳ ಬೆಂಗಾವಲುಪಡೆಯಲ್ಲಿ ಮುಂಜಾನೆ 3.35 ಕ್ಕೆ ಭಗವತಿ ನಗರ ಮೂಲ ಶಿಬಿರದಿಂದ ಪ್ರಯಾಣ ಆರಂಭಿಸಿದ್ದಾರೆ.

ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48-ಕಿಮೀ ಮಾರ್ಗದ ಮೂಲಕ ವಾರ್ಷಿಕ ಯಾತ್ರೆ ಕೈಗೊಳ್ಳಲು 1,269 ಯಾತ್ರಾರ್ಥಿಗಳು ಪಹಲ್ಗಾಮ್ ತಲುಪಿದರೆ, 408 ಮಂದಿ ಗಂದರ್ಬಾಲ್ ಜಿಲ್ಲೆಯ ಚಿಕ್ಕದು ಮತ್ತು ಕಡಿದಾದ 14-ಕಿಮೀ ಬಾಲ್ಟಾಲ್ ಮಾರ್ಗವನ್ನು ಆರಿಸಿಕೊಂಡಿದ್ದಾರೆ.

ಜೂನ್ 28 ರಂದು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮುವಿನಿಂದ ಮೊದಲ ಬ್ಯಾಚ್ ಅನ್ನು ಫ್ಲ್ಯಾಗ್ ಆಫ್ ಮಾಡಿದಾಗಿನಿಂದ, ಒಟ್ಟು 1,36,984 ಯಾತ್ರಿಕರು ಜಮು ಮೂಲ ಶಿಬಿರದಿಂದ ಯಾತ್ರೆ ಕೈಗೊಂಡಿದ್ದಾರೆ. ಈ ವರ್ಷ ಇಲ್ಲಿಯವರೆಗೆ 4.51 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಗುಹಾ ದೇಗುಲದಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗದ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಯಾತ್ರೆಯು ಕಳೆದ ವರ್ಷದ 4.5 ಲಕ್ಷ ಯಾತ್ರಿಕರ ಅಂಕಿಅಂಶಗಳನ್ನು ಈ ವರ್ಷ ಒಂದು ತಿಂಗಳೊಳಗೆ ದಾಟಿದೆ. ಜೂನ್ 29 ರಂದು ಆರಂಭವಾಗಿರುವ ಯಾತ್ರೆ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.

RELATED ARTICLES

Latest News