ಕ್ಯಾರಕಾಸ್ (ವೆನೆಜುವೆಲಾ), ಜುಲೈ 29 : ವೆನೆಜುವೆಲಾದ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಕೋಲಸ್ ಮಡುರೊ ಅವರು ಜಯಗಳಿಸಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಮಂಡಳಿ ಘೋಷಿಸಿದೆ.
ನಿನ್ನೆ ನಡೆದಿದ್ದ ಚುನಾವಣೆ ಮತ ಎಣಿಕೆ ರಾತ್ರಿಯೇ ಶುರುವಾಗಿ ಶೇಕಡಾ 51 ರಷ್ಟು ಮತಗಳನ್ನು ಪಡೆದು ನಿಕೋಲಸ್ ಮಡುರೊ ವಿಜಯ ಸಾಧಿಸಿದ್ದಾರೆ ಎಂದು ಮಂಡಳಿಯ ಮುಖ್ಯಸ್ಥ ಎಲ್ವಿಸ್ ಅಮೊರೊಸೊ ತಿಳಿಸಿದ್ದಾರೆ. ಪ್ರತಿಸ್ಪರ್ಧಿ ಅಭ್ಯರ್ಥಿ ಎಡಂಡೊ ಗೊನ್ಜಾಲೆಜ್ ಅವರು ಶೇಕಡಾ 44 ರಷ್ಟು ಗಳಿಸಿ ಪರಾಭವಗೊಂಡಿದ್ದಾರೆ.
ದಕ್ಷಿಣ ಅಮೆರಿಕಾದ ರಾಷ್ಟ್ರ ವೆನೆಜುವೆಲಾ ಕಂಡರಿಯದ ಆರ್ಥಿಕತೆ ಅತಪತನಗೊಂಡು ಸದ್ಯ ಚೇತರಿಕೆ ಕಂಡಿದೆ. ಫಲಿತಾಂಶಗಳು ಶೇಕಡಾ 80 ರಷ್ಟು ಮತದಾನ ಕೇಂದ್ರಗಳನ್ನು ಆಧರಿಸಿವೆ ಎಂದು ಎಲ್ವಿಸ್ ಅಮೊರೊಸೊ ಅವರು ಹೇಳಿದ್ದು ಇನ್ನು 30,000 ಮತಗಟ್ಟೆ ಕೇಂದ್ರಗಳಿಂದ ಅಧಿಕೃತ ಮತದಾನದ ಲೆಕ್ಕಾಚಾರಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಎಡಂಡೊ ಗೊನ್ಜಾಲೆಜ್ ಬೆಂಬಲಿಗರು ಹೇಳುತ್ತಿದ್ದಾರೆ.
ವೆನೆಜುವೆಲಾದವರು ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳಿಗಾಗಿ ಕಾತರದಿಂದ ಕಾಯುತ್ತಿದ್ದರು, ಇದು 25 ವರ್ಷಗಳ ಏಕಪಕ್ಷೀಯ ಆಡಳಿತವನ್ನು ಕೊನೆಗೊಳಿಸಲು ದಾರಿ ಮಾಡಿಕೊಡುತ್ತದೆ ಎಂದು ಕೆಲವು ಸಮೀಕ್ಷೆಗಳು ಹೇಳಿದ್ದವು ಹಾಲಿ ಅಧ್ಯಕ್ಷ ನಿಕೋಲಸ್ ಮಡುರೊ, ಮೂರನೇ ಅವಧಿ ಅಧೕಕಾರಕ್ಕೆ ಪ್ರಯತ್ನಿಸುತ್ತಿರುವಾಗ ಕಠಿಣ ಸವಾಲನ್ನು ಎದುರಿಸಿದರು.
ನಿವೃತ್ತ ರಾಜತಾಂತ್ರಿಕರಾಗಿದ್ದ ಎಡಂಡೊ ಗೊನ್ಜಾಲೆಜ್ ಕಳೆದ ಏಪ್ರಿಲ್‌ನಲ್ಲಿ ಕೊನೆಯ ವಿರೋಧ ಪಕ್ಷದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದರು.ಈಗಾಗಲೇ ಆನ್‌ಲೈನ್ ಮತ್ತು ಕೆಲವು ಮತದಾನ ಕೇಂದ್ರಗಳ ಹೊರಗೆ ಸಂಭ್ರ ಕಾಣುತ್ತಿದೆ ಇದು ನಾನು ತುಂಬಾ ಸಂತೋಷವಾಗಿದ್ದೇನೆ ಎಂದು 31 ವರ್ಷದ ಬ್ಯಾಂಕ್ ಉದ್ಯೋಗಿ ಮೆರ್ಲಿಂಗ್ ಫರ್ನಾಂಡಿಸ್ ಹೇಳಿದ್ದಾರೆ.
ಇದಕ್ಕೂ ಮುನ್ನ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲ ಸೂಚಿಸಿದ್ದರು. ಇಂದಿನ ಐತಿಹಾಸಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ ಧ್ವನಿಯನ್ನು ವ್ಯಕ್ತಪಡಿಸಿದ ವೆನೆಜುವೆಲಾದ ಜನರೊಂದಿಗೆ ಯುನೈಟೆಡ್ ಸ್ಟೇಟ್ಸ್ ನಿಂತಿದೆ ಎಂದು ಹ್ಯಾರಿಸ್ ಎಕ್‌್ಸ ನಲ್ಲಿ ಬರೆದಿದ್ದಾರೆ. ವೆನೆಜುವೆಲಾದ ಜನರ ಇಚ್ಛೆಯನ್ನು ಗೌರವಿಸಬೇಕು ಎಂದಿದ್ದಾರೆ.