Saturday, November 23, 2024
Homeರಾಜ್ಯಶಿಕ್ಷಣ ಸಂಸ್ಥೆಗಳ ನಿವೇಶನ, ಕಟ್ಟಡಗಳಿಗೆ ಸುಂಕ ವಿಧಿಸಿರುವುದಕ್ಕೆ ವಿರೋಧ

ಶಿಕ್ಷಣ ಸಂಸ್ಥೆಗಳ ನಿವೇಶನ, ಕಟ್ಟಡಗಳಿಗೆ ಸುಂಕ ವಿಧಿಸಿರುವುದಕ್ಕೆ ವಿರೋಧ

ಬೆಂಗಳೂರು, ಜು.30– ಶೈಕ್ಷಣಿಕ ಉದ್ದೇಶಕ್ಕೆ ಬಳಸುವ ನಿವೇಶನ ಅಥವಾ ಕಟ್ಟಡಗಳಿಗೆ ಬೆಂಗಳೂರು ಮಹಾನಗರ ಪಾಲಿಕೆ ಕಾನೂನು ಬಾಹಿರವಾಗಿ ಸುಂಕ ವಸೂಲಿ ಮಾಡುತ್ತಿದ್ದು, ಇದು ಕಾನೂನು ಬಾಹಿರ ಎಂದು ಕರ್ನಾಟಕ ಖಾಸಗಿ ಶಿಕ್ಷಣಗಳ ಸಂಘ ವಿರೋಧಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ಕರ್ನಾಟಕ ಮುನಿಸಿಪಲ್‌ ಆಕ್ಟ್‌, ಬಿಬಿಎಂಪಿ ಆಕ್ಟ್‌ ಹಾಗೂ ಟ್ಯಾಕ್ಸ್ ಗೆ ಸಂಬಂಧಿಸಿದಂತೆ ಚಾರಿಟೇಬಲ್‌ ಟ್ರಸ್ಟ್‌ನಡಿ ಸ್ಥಾಪಿಸಿರುವ ಶಾಲೆಗಳ ಕಟ್ಟಡ ಹಾಗೂ ಖಾಲಿ ನಿವೇಶನಗಳಿಗೆ ಯಾವುದೇ ರೀತಿಯ ಸುಂಕ( ಇನಮ್‌ ಟ್ಯಾಕ್ಸ್ , ಸರ್ವಿಸ್‌‍ ಟ್ಯಾಕ್ಸ್ , ಸೆಸ್‌‍ ಅಥವಾ ಬಿಬಿಎಂಪಿ ಟ್ಯಾಕ್ಸ್ ) ವಿಧಿಸುವಂತಿಲ್ಲ ಎಂದಿದೆ.

ಜೊತೆಗೆ ರಾಜ್ಯ ಹೈಕೋರ್ಟ್‌ ಸಹ ಟ್ಯಾಕ್ಸ್ ಸಂಬಂಧಿಸಿದ ಹಲವು ತೀರ್ಪುಗಳಲ್ಲಿ ಟ್ಯಾಕ್ಸ್ ವಿಽಸುವಂತಿಲ್ಲ, ಎಂದು ತೀರ್ಪು ನೀಡಿದೆ. ಹಾಗೂ ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ದೇಶದ ಯಾವುದೇ ಶಾಲೆಗಳಿಂದ ಟ್ಯಾಕ್ಸ್ ನ್ನು ವಸೂಲಿ ಮಾಡಿಲ್ಲ. ಆದರೆ ಈಗ ಜು.19ರಿಂದ ಬೆಂಗಳೂರು ನಗರದ ಬಿಬಿಎಂಪಿಯು ಒಂದು ಸರ್ಕ್ಯುಲರ್‌ ಪ್ರಕಟಿಸಿ, ಬೆಂಗಳೂರಿನ ಶಾಲಾ ಕಾಲೇಜ್‌ ನವರಿಗೆ ಬೆದರಿಕೆ ಒಡ್ಡಿ, ಕಾನೂನುಬಾಹಿರವಾಗಿ, ಟ್ಯಾಕ್ಸ್ ವಸೂಲಿ ಮಾಡುತ್ತಿರುವುದನ್ನು ನಮ್ಮ ಒಕ್ಕೂಟ ಜಂಟಿಯಾಗಿ ಖಂಡಿಸುತ್ತದೆ ಎಂದರು.

ಇದು ಶಿಕ್ಷಣ ಸಂಸ್ಥೆಗಳಿಗೆ ಮಾಡುತ್ತಿರುವ ಮೋಸ, ಈ ರೀತಿಯ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ, ಈಗಾಗಲೇ ಪಡೆದಿರುವ ಟ್ಯಾಕ್ಸನ್ನು ಆಯಾ ಶಾಲಾ- ಕಾಲೇಜುಗಳಿಗೆ ಹಿಂದಿರುಗಿಸಬೇಕು. ಇಲ್ಲವಾದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಹೋರಾಟಕ್ಕೆ ಮುಂದಾಗಲು ನಾವು ಹಿಂಜರಿಯುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶ ಮಾಡಿ ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

RELATED ARTICLES

Latest News