Friday, November 22, 2024
Homeಇದೀಗ ಬಂದ ಸುದ್ದಿಸಂಸತ್‍ನಲ್ಲಿ ಮೋದಿ ವಿರುದ್ಧ ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣಕ್ಕೆ ಸ್ಪೋಟಕ ತಿರುವು

ಸಂಸತ್‍ನಲ್ಲಿ ಮೋದಿ ವಿರುದ್ಧ ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣಕ್ಕೆ ಸ್ಪೋಟಕ ತಿರುವು

ನವದೆಹಲಿ,ಅ.20- ಪ್ರಧಾನಿ ನರೇಂದ್ರಮೋದಿ ಮತ್ತು ಅದಾನಿ ಗ್ರೂಪ್‍ನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು, ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂಬ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಸಂಸದೆಯ ಪರವಾಗಿ ಪ್ರಶ್ನೆಗಳನ್ನು ಫೋಸ್ಟ್ ಮಾಡಲು ಅವರ ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್‍ವರ್ಡ್‍ನ್ನು ಹಂಚಿಕೊಂಡಿದ್ದಾರೆ ಎಂದು ಉದ್ಯಮಿ ದರ್ಶನ್ ಹಿರಾನಂದನಿಯವರು ಸಂಸತ್ತಿನ ನೈತಿಕ ಸಮಿತಿಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಆರೋಪಿಸಿದ್ದಾರೆ.

ಹಿರಾನಂದಿನಿ ಅಫಿಡವಿಟ್ ಹೊರಗಡೆ ಬರುತ್ತಿದ್ದಂತೆ ಮಹುವಾ ಮೊಯಿತ್ರಾ ಕೂಡ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯಮಿಯ ಅಫಿಡೆವಿಟ್‍ನ ದೃಢೀಕರಣವನ್ನು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ವಿರುದ್ಧ ವಾಗ್ದಾಳಿ ನಡೆಸಲು ಇರುವುದು ಒಂದೇ ಮಾರ್ಗ ಎಂಬ ಅನಿಸಿಕೆ ಸಂಸದೆಯಲ್ಲಿತ್ತು. ಈ ಕಾರಣದಿಂದ ಅದಾನಿ ಸಮೂಹದ ವಿರುದ್ಧ ಪ್ರಶ್ನೆಗಳನ್ನು ರೂಪಿಸಲು ತಮಗೆ ಸಂಸತ್ ಖಾತೆಯ ಲಾಗಿನ್ ಐಡಿ ನೀಡಿದ್ದರು ಎಂದು ಹೀರಾನಂದಾನಿ ಮೂರು ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ.

ಮೊಯಿತ್ರಾ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಡಿರುವ ಕೆಲವು ಆರೋಪಗಳಲ್ಲಿ ಹೀರಾನಂದಾನಿ ತಪ್ಪೋಪ್ಪಿಕೊಂಡಿದ್ದಾರೆ. ಆದರೆ ತಮ್ಮ ಎದುರಾಳಿ ಉದ್ಯಮ ಅದಾನಿ ಸಮೂಹವನ್ನು ಟಾರ್ಗೆಟ್ ಮಾಡಲು ಹೀರಾನಂದಾಗಿ ಸಮೂಹದ ಪರವಾಗಿ ಮೊಯಿತ್ರಾ 50 ಪ್ರಶ್ನೆಗಳನ್ನು ಸಂಸತ್‍ನಲ್ಲಿ ಕೇಳಿದ್ದರು ಎಂಬ ಮುಖ್ಯ ಆರೋಪದ ಬಗ್ಗೆ ಅದರಲ್ಲಿ ಅವರು ಉಲ್ಲೇಖ ಮಾಡಿಲ್ಲ.

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮೊಯಿತ್ರಾ ಮತ್ತು ಉದ್ಯಮಿ ಹಿರಾನಂದಾನಿ ನಡುವೆ ಲಂಚ ವಿನಿಮಯವಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿರುವ ದುಬೆ, ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿದ್ದಾರೆ.

ಮಹುವಾ ಮೊಯಿತ್ರಾ ಅವರು ಕ್ಷಿಪ್ರವಾಗಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚಲು ಬಯಸಿದ್ದರು. ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ನಿಂದಿಸುವ ಮೂಲಕ ವೇಗವಾಗಿ ಜನಪ್ರಿಯತೆ ಗಳಿಸಲು ಗೆಳೆಯರಿಂದ ಸಲಹೆ ಪಡೆದಿದ್ದರು ಎಂಬುದಾಗಿಯೂ ಉಲ್ಲೇಖಿಸಲಾಗಿದೆ.

ಟಿಎಂಸಿ ಸಂಸದೆ ಮೇಲುಗೈ ಸಾಧಿಸಲು ಬಯಸುವ ಹಾಗೂ ಆಸೆಬುರುಕರಾಗಿದ್ದು, ತಮ್ಮ ಬೆಂಬಲವನ್ನು ಉಳಿಸಿಕೊಳ್ಳಲು ಮತ್ತು ಆಪ್ತರ ವಲಯದಲ್ಲಿ ಉಳಿಯಲು ವಿವಿಧ ಸಹಾಯಗಳಿಗೆ ಬೇಡಿಕೆ ಇರಿಸಿದ್ದರು. ಈ ಪಟ್ಟಿಯಲ್ಲಿ ತಮಗೆ ದುಬಾರಿ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು, ದೆಹಲಿಯಲ್ಲಿ ತಮಗೆ ಅಧಿಕೃತವಾಗಿ ಹಂಚಿಕೆಯಾದ ಬಂಗಲೆಯನ್ನು ನವೀಕರಿಸುವುದು, ಪ್ರಯಾಣ ವೆಚ್ಚಗಳು ಮತ್ತು ರಜಾ ವಿಹಾರಗಳ ವೆಚ್ಚವನ್ನು ಭರಿಸುವುದು ಮುಂತಾದವು ಸೇರಿದ್ದವು.

ನಿಜ್ಜರ್ ಹತ್ಯೆ ಹೇಳಿಕೆ ಮುನ್ನ ಭಾರತದೊಂದಿಗೆ ಚರ್ಚೆ ನಡೆಸಿದ್ದೇವೆ ; ಕೆನಡಾ

ಆಕೆಗೆ ಅಸಮಾಧಾನ ಉಂಟುಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ ಎಂದು ಅಫಿಡವಿಟ್‍ನಲ್ಲಿ ಹೀರಾನಂದಾನಿ ತಿಳಿಸಿದ್ದಾರೆ. ಅವರು ನನ್ನನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ನಾನು ಬಯಸದ ಸಂಗತಿಗಳಿಗಾಗಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನನಗೆ ಅನೇಕ ಬಾರಿ ಅನಿಸಿತ್ತು. ಆದರೆ ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದಿದ್ದಾರೆ.

ಈ ಪ್ರಯತ್ನದಲ್ಲಿ ಮೊಯಿತ್ರಾ ಇತರರಿಂದಲೂ ಸಹಾಯ ಪಡೆದಿದ್ದರು. ಪತ್ರಕರ್ತರು, ವಿರೋಧ ಪಕ್ಷಗಳ ನಾಯಕರು ಮತ್ತು ಅದಾನಿ ಸಮೂಹದ ಮಾಜಿ ಉದ್ಯೋಗಿಗಳು ದೃಢಪಡದ ಮಾಹಿತಿಗಳನ್ನು ಮೊಯಿತ್ರಾಗೆ ನೀಡಿದ್ದರು ಎಂದಿದ್ದಾರೆ. ಇದರಲ್ಲಿ ಅವರು ಪತ್ರಕರ್ತೆ ಸುಚೇತಾ ದಲಾಲ್ ಹೆಸರು ಉಲ್ಲೇಖಿಸಿದ್ದಾರೆ. ಇದನ್ನು ಸುಚೇತಾ ನಿರಾಕರಿಸಿದ್ದಾರೆ.

ಮೊಯಿತ್ರಾ ತಿರುಗೇಟು: ಇದಕ್ಕೆ ಪ್ರತಿಯಾಗಿ ಎರಡು ಪುಟಗಳ ಹೇಳಿಕೆ ಹಾಗೂ ಐದು ಪ್ರಶ್ನೆಗಳನ್ನು ಎತ್ತಿರುವ ಮೊಯಿತ್ರಾ, ಪ್ರಧಾನಿ ಕಚೇರಿಯು ಹೀರಾನಂದಾನಿ ಅವರ ತಲೆಗೆ ಗನ್ ಇರಿಸಿದ್ದು, ಬಿಳಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡಿದೆ ಮತ್ತು ಬಳಿಕ ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ ಎಂದು ಅಫಿಡವಿಟ್‍ನಲ್ಲಿನ ಅಂಶಗಳನ್ನು ಅಲ್ಲಗಳೆದಿದ್ದಾರೆ.

ಆದರೆ ಹೀರಾನಂದಾನಿ ಅವರ ಹೇಳಿಕೆ ಮೊಯಿತ್ರಾರಿಗೆ ಭಾರಿ ಹಿನ್ನಡೆ ಉಂಟುಮಾಡಿದೆ. ಹೀರಾನಂದಾನಿ ಅವರಿಗೆ ಮೊಯಿತ್ರಾ ತಮ್ಮ ಲಾಗಿನ್ ಐಡಿ ನೀಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಇದು ಸಾಬೀತಾದರೆ ಅವರು ತಮ್ಮ ಸವಲತ್ತು ಉಲ್ಲಂಘಿಸಿದಂತಾಗಲಿದೆ. ಅವರನ್ನು ಅಮಾನತುಗೊಳಿಸುವ ಆದೇಶ ಹೊರಡಿಸಬಹುದಾಗಿದೆ.

ಮಧ್ಯಪ್ರದೇಶದ ಪ್ರಸ್ತುತ 230 ಶಾಸಕರಲ್ಲಿ 186 ಮಂದಿ ಕೋಟ್ಯಾಧಿಪತಿಗಳು

ಕಾಸಿಗಾಗಿ ಪ್ರಶ್ನೆ ವಿವಾದದಲ್ಲಿ ಸಿಲುಕಿರುವ ದರ್ಶನ್ ಹೀರಾನಂದಾನಿ, ಈ ಪ್ರಕರಣವು ತಮ್ಮನ್ನು ಒಳಗೊಂಡಿರುವುದರಿಂದ ಮತ್ತು ಸಂಸತ್‍ನ ನಿಲುವಳಿ ಸಮಿತಿ ಹಾಗೂ ನ್ಯಾಯಾಂಗದ ವ್ಯಾಪ್ತಿಗೆ ಬರುವಂತಹ ರಾಜಕೀಯ ತೀವ್ರತೆ ಪಡೆದಿರುವುದರಿಂದ ಅಫಿಡವಿಟ್ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಇಂಧನ ಮತ್ತು ಮೂಲಸೌಕರ್ಯಗಳ ಒಪ್ಪಂದವನ್ನು ಅದಾನಿ ಗ್ರೂಪ್ ಎದುರು ಪಡೆಯಲು ಹಿರಾನಂದನಿ ಪಡೆಯಲು ವಿಫಲವಾಗಿತ್ತು. ಹಾಗಾಗಿ, ಹಿರಾನಂದನಿ ವ್ಯಾಪಾರಿ ಹಿತಾಸಕ್ತಿಗೆ ಅನುಗುಣವಾಗಿ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ದುಬೆ ಅವರು ಆರೋಪಿಸಿದ್ದಾರೆ. ಅಲ್ಲದೇ, ಐಫೋನ್‍ನಂಥ ದುಬಾರಿ ಗಿಫ್ಟ್ ಮಾತ್ರವಲ್ಲದೇ, 2 ಕೋಟಿ ಹಣವನ್ನು ಕಂಪನಿಯಿಂದ ಮಹುವಾ ಮೋಯಿತ್ರಾ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

RELATED ARTICLES

Latest News