Sunday, November 24, 2024
Homeಜಿಲ್ಲಾ ಸುದ್ದಿಗಳು | District Newsಮದುವೆಗೆ ಒಪ್ಪದ ತಾಯಿಗೆ ಮಗಳ ಅಶ್ಲೀಲ ಫೋಟೊ ಕಳಿಸಿದ ಪ್ರಿಯತಮ

ಮದುವೆಗೆ ಒಪ್ಪದ ತಾಯಿಗೆ ಮಗಳ ಅಶ್ಲೀಲ ಫೋಟೊ ಕಳಿಸಿದ ಪ್ರಿಯತಮ

ಮೈಸೂರು,ಆ.5- ಯುವಕನ ದುರ್ವತನೆಗೆ ಬೇಸತ್ತು ಮದುವೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಿಯಕರ ತನ್ನ ಪ್ರಿಯತಮೆಯ ಅಶ್ಲೀಲ ಫೋಟೊಗಳನ್ನು ಯುವತಿಯ ತಾಯಿಗೆ ರವಾನಿಸಿ ಸೇಡು ತೀರಿಸಿಕೊಂಡ ಘಟನೆ ನಗರದ ಎನ್‌.ಆರ್‌.ಮೊಹಲ್ಲಾ ಪೊಲೀಸ್‌‍ ಠಾಣಾ ವ್ಯಾಪ್ತಿಯ ನಾಯ್ಡು ನಗರದಲ್ಲಿ ನಡೆದಿದೆ.

ಕಲ್ಯಾಣಗಿರಿ ನಿವಾಸಿ ಮಹಮದ್‌ ವಾಸಿಂ ಹಾಗೂ ನೊಂದ ಯುವತಿ ಒಂದೇ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಇವರ ನಡುವೆ ಸ್ನೇಹ ಬೆಳೆದಿತ್ತು.ಯುವತಿಯನ್ನು ಮದುವೆಯಾಗುವುದಾಗಿ ಪ್ರಸ್ತಾಪ ಮಾಡಿ, ಈ ಬಗ್ಗೆ ಯುವತಿಯ ತಾಯಿಯೊಂದಿಗೆ ಚರ್ಚಿಸಿದ್ದ. ಆದರೆ ಪ್ರಾರಂಭದಲ್ಲಿ ಮದುವೆಗೆ ಯುವತಿಯ ಮನೆಯವರು ನಿರಾಕರಿಸಿದ್ದರು.

ತದನಂತರ ಯುವಕನ ಮನೆಯವರ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿ ನಿಶ್ಚಿತಾರ್ಥ ಕೂಡ ಮಾಡಿದ್ದರು. ಕೆಲದಿನಗಳ ನಂತರ ಇಬ್ಬರೂ ಸುತ್ತಾಡಿದ್ದಾರೆ. ಈ ವೇಳೆ ಯುವತಿಯ ಅಶ್ಲೀಲ ಫೋಟೊ ಪಡೆದು ವಿಚಿತ್ರವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸರಗೊಂಡು ಯುವತಿಯ ತಾಯಿ ಮದುವೆಗೆ ನಿರಾಕರಿಸಿದ್ದಾರೆ.

ಆದರೆ ಪಟ್ಟು ಬಿಡದ ಮಹಮದ್‌ ವಾಸಿಂ ಮದುವೆ ಮಾಡಿಕೊಡಿ, ಇಲ್ಲವಾದರೆ ನಿಮ ಮಗಳ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಬೆದರಿಕೆಗೆ ಮಣಿಯದಿದ್ದಾಗ ಯುವತಿಯ ತಾಯಿಗೆ ಅಶ್ಲೀಲ ಫೋಟೊ ಕಳುಹಿಸಿ ಸೇಡು ತೀರಿಸಿಕೊಂಡಿದ್ದಾನೆ. ಈ ಸಂಬಂಧ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನೊಂದ ತಾಯಿ ಎನ್‌.ಆರ್‌.ಮೊಹಲ್ಲಾ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES

Latest News