Sunday, November 10, 2024
Homeರಾಜ್ಯರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ

ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ

ಬೆಂಗಳೂರು,ಆ.5- ಯಾದಗಿರಿಯ ಪಿಎಸ್‌‍ಐ ಪರಶುರಾಮ್‌ ಸಾವಿನ ಬೆನ್ನಲ್ಲೇ ನಗರದ ಸಿಸಿಬಿ ಇನ್ಸ್ ಪೆಕ್ಟರ್‌ ಆತಹತ್ಯೆ ಮಾಡಿಕೊಂಡಿರುವ ಘಟನೆ ಕಗ್ಗಲಿಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಿಸಿಬಿ ಆರ್ಥಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಮೇಗೌಡ (54) ಆತಹತ್ಯೆ ಮಾಡಿಕೊಂಡಿರುವ ಇನ್ಸ್ ಪೆಕ್ಟರ್.

ಮೂಲತಃ ಚನ್ನಪಟ್ಟಣ ತಾಲ್ಲೂಕು ಎಲೆತೋಟದಹಳ್ಳಿ ಸಮೀಪದ ಕರ್ಲಹಳ್ಳಿ ನಿವಾಸಿಯಾದ ತಿಮೇಗೌಡ ಅವರು ಬಿಡದಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಇವರ ಕುಟುಂಬ ಮೈಸೂರಿನಲ್ಲಿ ನೆಲೆಸಿದೆ. ಈ ಹಿಂದೆ ಬಿಡದಿ ಪೊಲೀಸ್‌‍ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಮೇಗೌಡ ಅವರು ಎರಡು ತಿಂಗಳ ಹಿಂದೆಯಷ್ಟೇ ಸಿಸಿಬಿಗೆ ವರ್ಗಾವಣೆಯಾಗಿದ್ದರು.

ಕುಂಬಲಗೂಡು ಸಮೀಪದ ತಗಚಗುಪ್ಪೆಯ ಜಮೀನೊಂದರಲ್ಲಿ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ತಿಮೇಗೌಡ ಅವರು ಆತಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತಹತ್ಯೆಗೆ ಸದ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಸಮಸ್ಯೆಯಿಂದ ಆತಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಬಹುಶ: ರಾತ್ರಿ ಇವರು ಆತಹತ್ಯೆ ಮಾಡಿಕೊಂಡಿರಬಹುದು. ಇಂದು ಬೆಳಿಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ನೋಡಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.ಸುದ್ದಿ ತಿಳಿದು ಕಗ್ಗಲಿಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಬಗ್ಗೆ ಕಗ್ಗಲಿಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಯಾದಗಿರಿಯ ಪಿಎಸ್‌‍ಐ ಪರಶುರಾಮ್‌ ಅವರು ವರ್ಗಾವಣೆಯಾದ ಮಾರನೆದಿನವೇ ನಿಧನರಾಗಿದ್ದು, ಅವರ ಸಾವು ಸಂಶಯಾಸ್ಪಧವಾಗಿರುವುದರಿಂದ ಸರ್ಕಾರ ಸಿ.ಐ.ಡಿ ತನಿಖೆಗೆ ವಹಿಸಿದ್ದು, ಈಗಾಗಲೇ ಸಿ.ಐ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Latest News