Friday, November 22, 2024
Homeರಾಷ್ಟ್ರೀಯ | National20 ವರ್ಷಗಳ ನಂತರ ಸಿಕ್ಕಿಬಿದ್ದ ಬ್ಯಾಂಕ್‌ ವಂಚಕ

20 ವರ್ಷಗಳ ನಂತರ ಸಿಕ್ಕಿಬಿದ್ದ ಬ್ಯಾಂಕ್‌ ವಂಚಕ

ನವದೆಹಲಿ,ಆ.6- ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿಬಿಐ ಯಶಸ್ವಿಯಾಗಿದೆ.ಬಂಧಿತ ಆರೋಪಿಯನ್ನು ವಿ ಚಲಪತಿ ರಾವ್‌ ಎಂದು ಗುರುತಿಸಲಾಗಿದೆ.

ಈತ ತನ್ನ ಗುರುತು ಮತ್ತು ಸ್ಥಳವನ್ನು ಮರೆಮಾಚಿ ಜೀವನ ನಡೆಸುತ್ತಿದ್ದ, ಕಂಪ್ಯೂಟರ್‌ಆಪರೇಟರ್‌ ಆಗಿ ನಂತರ ಸ್ವಾಮೀಜಿ ವೇಷ ಧರಿಸಿದ್ದರೂ ಆತನನ್ನು ಬಂಧಿಸುವಲ್ಲಿ ಸಿಬಿಐ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

2002ರಲ್ಲಿ ಹೈದಾರಾಬಾದ್‌‍ನ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಚಂದುಲಾಲ್‌ ಬಿರಾದಾಯಿ ಶಾಖೆಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಅವರು ಬ್ಯಾಂಕ್‌ಗೆ 50 ಲಕ್ಷ ರೂ. ವಂಚಿಸಿದ್ದರು. 2006ರಲ್ಲಿ ಸಿಬಿಐ ಎರಡು ಚಾರ್ಜ್‌ಶೀಟ್‌‍ಗಳನ್ನು ಸಲ್ಲಿಸಿತ್ತು, ಪ್ರಕರಣದಲ್ಲಿ ಆರೋಪಿಯಾಗಿರುವ ಛಲಪತಿ ಪತ್ನಿ ಕಾಪಾಟಿಪುರ ಪೊಲೀಸ್‌‍ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಏಳು ವರ್ಷಗಳ ನಂತರ ಅವರು ಪತಿ ಮತಪಟ್ಟಿದ್ದಾರೆಂದು ಹೇಳಿ ಸಿವಿಲ್‌ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಿದ್ದರು. ಹೈದರಾಬಾದ್‌ ನ್ಯಾಯಾಲಯ ಅವರ ಪರವಾಗಿ ಆದೇಶವನ್ನು ನೀಡಿತ್ತು. ತನ್ನ ಪತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತೆಲಂಗಾಣ ಹೈಕೋರ್ಟ್‌‍ನಿಂದ ತಡೆಯಾಜ್ಞೆ ಪಡೆದಿದ್ದರು.

2013ರಲ್ಲಿ ಸಿಬಿಐ ನ್ಯಾಯಾಲಯ ಚಲಪತಿಯನ್ನು ಘೋಷಿತ ಅಪರಾಧಿ ಎಂದು ಘೋಷಿಸಿತು. ಚಲಪತಿ ಸೇಲಂಗೆ ಓಡಿಹೋಗಿ ತನ್ನ ಹೆಸರನ್ನು ಎಂ ವಿನೀತ್‌ ಕುಮಾರ್‌ ಎಂದು ಬದಲಾಯಿಸಿ, ಆಧಾರ್‌ ಸಂಖ್ಯೆಯನ್ನು ಪಡೆದುಕೊಂಡಿದ್ದ. 2007ರಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ, ಆದರೆ ಮೊದಲ ಮಗನ ಜತೆ ಸಂಪರ್ಕವನ್ನು ಹೊಂದಿದ್ದ ಎಂದು ಎರಡನೇ ಪತ್ನಿ ತಿಳಿಸಿದ್ದಾರೆ.

ಸಿಬಿಐ ಅವರನ್ನು ಪತ್ತೆಹಚ್ಚಲು ಪ್ರಯತ್ನಿಸಿದಾಗ, ಚಲಪತಿ ಅವರು 2014 ರಲ್ಲಿ ಸೇಲಂನಿಂದ ಪಲಾಯನ ಮಾಡಿದರು ಮತ್ತು ಭೋಪಾಲ್‌‍ಗೆ ತೆರಳಿ ಅಲ್ಲಿ ಸಾಲ ವಸೂಲಾತಿ ಏಜೆಂಟ್‌ ಆಗಿ ಕೆಲಸ ಮಾಡಿದರು. ಉತ್ತರಾಖಂಡದ ರುದ್ರಪುರಕ್ಕೆ ಶಾಲೆಯೊಂದರಲ್ಲಿ ಕೆಲಸ ಮಾಡಲು ಶುರುಮಾಡಿದರು. 2016 ರಲ್ಲಿ ಔರಂಗಾಬಾದ್‌ನ ಆಶ್ರಮಕ್ಕೆ ತೆರಳಿದರು, ಅಲ್ಲಿ ಅವರು ತಮ ಹೆಸರನ್ನು ಸ್ವಾಮಿ ವಿಧಿತಾತಾನಂದ ತೀರ್ಥ ಎಂದು ಬದಲಾಯಿಸಿಕೊಂಡರು ಮತ್ತು ಮತ್ತೊಂದು ಆಧಾರ್‌ ಕಾರ್ಡ್‌ ಪಡೆದುಕೊಂಡಿದ್ದ.

2021 ರಲ್ಲಿ ಪಲಾಯನ ಮಾಡುವ ಮೊದಲು ಅವರು ಆಶ್ರಮಕ್ಕೆ 70 ಲಕ್ಷ ರೂಪಾಯಿಗಳನ್ನು ವಂಚಿಸಿದ್ದರು ಎಂಬುದು ನಂತರ ಗೊತ್ತಾಗಿದೆ. ತನಿಖೆಯ ವೇಳೆ, ಸಿಬಿಐ ತಮಿಳುನಾಡಿನ ತಿರುನಲ್ವೇಲಿಯ ನರಸಿಂಗನಲ್ಲೂರು ಗ್ರಾಮದಲ್ಲಿ ಅವರನ್ನು ಪತ್ತೆ ಮಾಡಿದೆ. ಚಲಪತಿ ಅವರನ್ನು ಹೈದರಾಬಾದ್‌ನಲ್ಲಿರುವ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆ. 16 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

RELATED ARTICLES

Latest News