Wednesday, October 16, 2024
Homeರಾಷ್ಟ್ರೀಯ | Nationalಈ ತಿಂಗಳು 2 ಬಾರಿ ಗರುಡ ವಾಹನವೇರಿ ಭಕ್ತರಿಗೆ ದರ್ಶನ ನೀಡಲಿದ್ದಾರೆ ತಿಮಪ್ಪ

ಈ ತಿಂಗಳು 2 ಬಾರಿ ಗರುಡ ವಾಹನವೇರಿ ಭಕ್ತರಿಗೆ ದರ್ಶನ ನೀಡಲಿದ್ದಾರೆ ತಿಮಪ್ಪ

ತಿರುಪತಿ,ಆ.6- ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ಈ ತಿಂಗಳು ಎರಡು ಬಾರಿ ಗರುಡ ವಾಹನದಲ್ಲಿ ತನ್ನ ಭಕ್ತರಿಗೆ ದಿವ್ಯದರ್ಶನ ನೀಡಲಿದ್ದಾರೆ. ಈ ತಿಂಗಳಲ್ಲಿ ಏಳುಬೆಟ್ಟದ ತಿಮಪ್ಪ ಸ್ವಾಮಿಯು ಎರಡು ಬಾರಿ ಗರುಡವಾಹನದ ಮೇಲೆ ಸವಾರಿ ಮಾಡುತ್ತಾರೆ.

ಆ. 9ರಂದು ಗರುಡ ಪಂಚಮಿ ಮತ್ತು ಆ.19 ಶ್ರಾವಣ ಪೌರ್ಣಮಿಯಂದು ಗರುಡ ಸೇವೆ ನಡೆಯಲಿದೆ. ಗರುಡ ಪಂಚಮಿ ಮತ್ತು ಶ್ರಾವಣಿ ಪೌರ್ಣಮಿಯ ದಿನದಂದು ತಿಮಪ್ಪ ಸ್ವಾಮಿ ಗರುಡವಾಹನದ ಮೇಲೆ ನಾಲ್ಕು ಮಹಡಿ ಬೀದಿಗಳಲ್ಲಿ ಸಂಚರಿಸಿ ಭಕ್ತರನ್ನು ಆಶೀರ್ವದಿಸಲಿದ್ದಾರೆ.

ಆ. 9 ರಂದು ಗರುಡ ಪಂಚಮಿಯ ದಿನದಂದು ಸಂಜೆ 7 ರಿಂದ 9 ರವರೆಗೆ ತಿರುಮಲದ ಮಹಡಿ ಬೀದಿಗಳಲ್ಲಿ ತನ್ನಿಷ್ಟದ ವಾಹನವಾದ ಗರುಡನನ್ನು ಏರಿ ಭಕ್ತಾದಿಗಳಿಗೆ ಆಶೀರ್ವಾದ ನೀಡುತ್ತಾರೆ. ಗರುಡಾತನು ಶ್ರೀವಾರಿಯ ವಾಹನಗಳಲ್ಲಿ ಅಗ್ರಗಣ್ಯನು. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ವತಿಯಿಂದ ಪ್ರತಿ ವರ್ಷ ಗರುಡ ಪಂಚಮಿಯನ್ನು ಶ್ರಾವಣ ಶುಕ್ಲ ಪಕ್ಷದ 5 ನೇ ದಿನದಂದು ಆಚರಿಸಲಾಗುತ್ತದೆ.

ನವವಿವಾಹಿತರು ತಮ ವೈವಾಹಿಕ ಜೀವನ ಸುಖಮಯವಾಗಿರಲು ಗರುಡಪಂಚಮಿ ಪೂಜೆಯನ್ನು ಮಾಡುತ್ತಾರೆ ಮತ್ತು ಮಹಿಳೆಯರು ತಮ ಮಗುವನ್ನು ಗರುಡನಂತೆ ಬಲಶಾಲಿ ಮತ್ತು ಒಳ್ಳೆಯ ಸ್ವಭಾವವನ್ನು ಹೊಂದಲು ಪೂಜಿಸುತ್ತಾರೆ ಎಂದು ನಂಬಲಾಗಿದೆ. ಆ. 19 ರಂದು ಶ್ರಾವಣ ಪೌರ್ಣಮಿ ಬರುತ್ತದೆ ಮತ್ತು ಟಿಟಿಡಿ ವತಿಯಿಂದ ಗರುಡ ವಾಹನ ಸೇವೆಯು ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಸಲಾಗುತ್ತದೆ.

ಆ.19 ರಂದು ಶ್ರಾವಣ ಪೌರ್ಣಮಿಯಂದು ಪೂರ್ಣಮಿ ಗರುಡಸೇವೆ ವಿಜಂಭಣೆಯಿಂದ ನಡೆಯಲಿದೆ. ಇದರ ಅಂಗವಾಗಿ ಸಂಜೆ 7ರಿಂದ 9ರವರೆಗೆ ತಿಮಪ್ಪ ಸ್ವಾಮಿಯು ಗರುಡ ವಾಹನವೇರಿ ದೇವಸ್ಥಾನದ ನಾಲ್ಕು ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡಲಿದ್ದಾರೆ.

RELATED ARTICLES

Latest News