ನವದೆಹಲಿ, ಆ.7- ಪ್ಯಾರಿಸ್ ಒಲಿಂಪಿಕ್ ಗೇಮ್ಸೌನಲ್ಲಿ ಐತಿಹಾಸಿಕ ಸಾಧನೆಯ ಬಳಿಕ ಸ್ವದೇಶಕ್ಕೆ ಆಗಮಿಸಿದ ಶೂಟರ್ ಮನು ಭಾಕರ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಮಹಿಳಾ ಶೂಟಿಂಗ್ ಸ್ಪರ್ಧೆಯಲ್ಲಿ ಎರಡು ಪದಕಗಳನ್ನು ಗೆದ್ದ ಒಲಿಂಪಿಕ್ಸ್ ನಲ್ಲಿ ಈ ಸಾಧನೆ ಮಾಡಿದ ಸ್ವಾತಂತ್ರ್ಯದ ನಂತರದ
ಮೊದಲ ಭಾರತೀಯರಾಗಿದ್ದು , ಭಾಕರ್ ಅವರನ್ನು ಪ್ಯಾರಿಸ್ನಿಂದ ನವದೆಹಲಿಗೆ ಏರ್ ಇಂಡಿಯಾ ನೇರ ವಿಮಾನವು ಬೆಳಿಗ್ಗೆ 9:20 ರ ಸುಮಾರಿಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು,
ನಗರದಲ್ಲಿ ಬೆಳಗಿನ ಜಾವದ ತುಂತುರು ಮಳೆಯ ನಡುವೆಯೂ ಅವರಲ್ಲಿ ಭಾಕರ್ ಅವರ ಪೋಷಕರಾದ ರಾಮ್ ಕಿಶನ್ ಮತ್ತು ಸುಮೇಧಾ ಮತ್ತು ಭಾಕರ್ ಅವರ ವೈಯಕ್ತಿಕ ತರಬೇತುದಾರ ಜಸ್ಪಾಲ್ ರಾಣಾ ,ಕ್ರೀಡಾ ಉತ್ಸಾಹಿಗಳು ಮತ್ತು ಉತ್ತರಾಖಾಂಡದ ಅಧಿಕಾರಿಗಳು ಆಕೆಯ ಆಗಮನಕ್ಕೆ ಮುಂಚೆಯೇ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಹಾಡು ಮತ್ತು ನೃತ್ಯದೊಂದಿಗೆ ಭಾಕರ್ ಅವರ ಸಾಧನೆಯನ್ನು ಆಚರಿಸಿದರು,
ಆಕೆ ಬರುತ್ತಿದ್ದಂತೆ ಡ್ರಮ್ ಬಾರಿಸಿದರು,ಜಯಕಾರ ಘೋಷಣೆ ಕೂಗಿ ಭಾಕರ್ ಮತ್ತು ರಾಣಾ ಅವರ ಫೋಟೋಗಳೊಂದಿಗೆ ಬ್ಯಾನರ್ಳನ್ನು ಹಿಡಿದುಕೊಂಡು ಶುಭಕೋರಿದರು ಮತ್ತೆ ಭಾಕರ್ ಅವರು ಶನಿವಾರ ಪ್ಯಾರಿಸ್ಗೆ ಹಿಂತಿರುಗಲಿದ್ದಾರೆ ಮತ್ತು ಭಾನುವಾರದ ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾರತೀಯ ತಂಡದ ಮಹಿಳಾ ಧ್ವಜಧಾರಿಯಾಗಲಿದ್ದಾರೆ.