Thursday, September 19, 2024
Homeಅಂತಾರಾಷ್ಟ್ರೀಯ | Internationalಬಾಂಗ್ಲಾದಲ್ಲಿ ಹಿಂದೂಗಳಿಗೆ ಜೀವಭಯ : ಮನೆ, ದೇವಸ್ಥಾನಗಳ ಮೇಲೆ ದಾಳಿ

ಬಾಂಗ್ಲಾದಲ್ಲಿ ಹಿಂದೂಗಳಿಗೆ ಜೀವಭಯ : ಮನೆ, ದೇವಸ್ಥಾನಗಳ ಮೇಲೆ ದಾಳಿ

ಢಾಕಾ, ಆ.7- ಹಿಂದೂಗಳನ್ನು ಟಾರ್ಗೆಟ್ ಮಾಡಿ ದುಷ್ಕರ್ಮಿಗಳ ಗುಂಪು ದಾಳಿ ಮಾಡುತ್ತಿರುವುದರಿಂದ ಆತಂಕ ಹೆಚ್ಚುತ್ತಿದೆ. ಈಗಾಗಲೇ ಇಸ್ಕಾನ್ ದೇವಾಲಯ ಸೇರಿದಂತೆ ಕಾಳಿ ದೇವಸ್ಥಾನ ಹಾಗೂ ರಸ್ತೆ ಪಕ್ಕದಲ್ಲಿರುವ ಗುಡಿಗಳನ್ನು ಧ್ವಂಸ ಮಾಡಲಾಗುತ್ತಿದೆ.

ಇದರಿಂದಾಗಿ ಹಿಂದೂಗಳು ರಸ್ತೆಯಲ್ಲಿ ಓಡಾಡಲು ಹಿಂಜರಿಯುವಂತಾಗಿದ್ದು, ಜೀವಭಯ ಕಾಡುತ್ತಿದೆ. ರಾಜಕೀಯ ಬಿಕ್ಕಟ್ಟಿನ ನಡುವೆ ಈಗ ಹಂಗಾಮಿ ಸರ್ಕಾರದ ನೇತೃತ್ವವನ್ನು ಮಹಮದ್ ಯೂನಸ್ ವಹಿಸಿದ್ದು, ಈಗ ನಾಗರಿಕರ ರಕ್ಷಣೆಗೆ ಹೇಗೆ ಪ್ರಯತ್ನ ನಡೆಸಲಾಗುತ್ತದೆ ಎಂಬುದನ್ನು ಕಾದು ನೋಡಲಾಗುತ್ತಿದೆ.

ಹಿಂದೂ ಗಾಯಕನ ಮನೆ ಲೂಟಿ: ಬಾಂಗ್ಲಾ ದೇಶದಲ್ಲಿರುವ ಹಿಂದೂ ಗಾಯಕ ರಾಹುಲ್ ಅವರ ಮನೆಯನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಗಿದೆ. ದುಷ್ಕರ್ಮಿಗಳು ಮನೆಗೆ ನುಗ್ಗಿದ ವೇಳೆ ರಾಹುಲ್ ಆನಂದ್ ಪತ್ನಿ ಹಾಗೂ ಚಿಕ್ಕ ಮಗನನ್ನು ಕರೆದುಕೊಂಡು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.

ರಹಸ್ಯ ಸ್ಥಳದಲ್ಲಿ ಅವರನ್ನು ನಿರಾಶ್ರಿತರನ್ನಾಗಿರಿಸಲಾಗಿದೆ. ಮನೆಯಲ್ಲಿದ್ದ ಮೂರು ಸಾವಿರಕ್ಕೂ ಹೆಚ್ಚು ಅತ್ಯಮೂಲ್ಯವಾದ ಸಂಗೀತದ ಸಲಕರಣೆಗಳು ಸುಟ್ಟು ಬೂದಿಯಾಗಿವೆ. ಹಲವಾರು ವರ್ಷಗಳಿಂದ ತಯಾರಿಸಲಾದ ಅಪರೂಪದ ಸಂಗೀತ ಸಲಕರಣೆಗಳು ನಾಶವಾಗಿರುವ ಬಗ್ಗೆ ತೀವ್ರ ಆಘಾತ ವ್ಯಕ್ತವಾಗಿದೆ.

ರಾಹುಲ್ ಆನಂದ್ ಅವರ ಮನೆ 140 ವರ್ಷಗಳ ಇತಿಹಾಸ ಹೊಂದಿದ್ದು, ಪ್ರಾಚ್ಯಸ್ಥಳ ಎಂದು ಗುರುತಿಸಿಕೊಂಡಿತ್ತು. ಫ್ರೆಂಚ್ನ ಅಧ್ಯಕ್ಷ ಇಮ್ಯಾನ್ಯುಯಲ್ ಮಾರ್ಕೊನ್ ಕಳೆದ ವರ್ಷ ಬಾಂಗ್ಲಾ ದೇಶಕ್ಕೆ ಭೇಟಿ ನೀಡಿದಾಗ ಈ ಮನೆಗೆ ಆಗಮಿಸಿದ್ದರು.

RELATED ARTICLES

Latest News