Saturday, November 23, 2024
Homeಕ್ರೀಡಾ ಸುದ್ದಿ | Sports5ನೇ ಬಾರಿಗೆ ಚಿನ್ನ ಗೆದ್ದ ಕ್ಯೂಬಾದ ಕುಸ್ತಿಪಟು ಮಿಜೈನ್ ಲೊಪೆಜ್

5ನೇ ಬಾರಿಗೆ ಚಿನ್ನ ಗೆದ್ದ ಕ್ಯೂಬಾದ ಕುಸ್ತಿಪಟು ಮಿಜೈನ್ ಲೊಪೆಜ್

ಪ್ಯಾರಿಸ್, ಆ.7- ಕ್ಯೂಬಾದ ಗ್ರೀಕೋ- ರೋಮನ್ ಕುಸ್ತಿಪಟು ಮಿಜೈನ್ ಲೊಪೆಜ್ ಅವರು ಇಂದು ಪ್ಯಾರಿಸ್ ಒಲಿಂಪಿಕ್ಸ್ ನ 130 ಕೆ.ಜಿ. ವಿಭಾಗದ ಕುಸ್ತಿ ಫೈನಲ್ ಪಂದ್ಯದಲ್ಲಿ ಚಿಲಿಯ ಯಸಾನಿ ಅಕೋಸ್ಟಾ ಅವರನ್ನು 6-0 ಯಿಂದ ಸೋಲಿಸಿ ಸ್ವರ್ಣ ಪದಕ ತಮದಾಗಿಸಿಕೊಂಡರು.

ತನೂಲಕ ಗ್ರೀಕೋ ರೋಮನ್ ಕುಸ್ತಿಯಲ್ಲಿ ಸತತ ಐದನೇ ಸ್ವರ್ಣ ಗೆದ್ದ ಹಿರಿಮೆ ಅವರದಾಯಿತು.ಮೊಪೆಜ್ ಅವರು ಒಂದೇ ಕ್ರೀಡಾ ವಿಭಾಗದಲ್ಲಿ ಸತತ ಐದು ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪ್ರಪ್ರಥಮ ಒಲಿಂಪಿಕ್ ಕ್ರೀಡಾಪಟುವಾಗಿದ್ದಾರೆ. ಮತ್ತು ಐದು ಒಲಿಂಪಿಕ್ ಚಿನ್ನದ ಪದಕಗಳನ್ನು ಗಳಿಸಿದ ಮೊಟ್ಟಮೊದಲ ಕುಸ್ತಿಪಟುವಾಗಿದ್ದಾರೆ.

ಎಂತಹ ಮಹತ್ತರ ಸಂತೋಷವಿದು! ಎಂದು ಲೊಪೆಜ್ ಅವರು ಭಾಷಾಂತರಕಾರರೊಬ್ಬರ ಮುಖಾಂತರ ತಿಳಿಸಿದರು. ಇದು ನಾನು ಬಯಸುತ್ತಿದ್ದ ಫಲಿತಾಂಶ ಮತ್ತು ನನ್ನ ದೇಶ ಮತ್ತು ಇಡೀ ಜಗತ್ತಿಗೆ ನಾನು ಆಶಿಸಿದ್ದ ಪದಕ ಇದಾಗಿದೆ. ಒಲಿಂಪಿಕ್ನ ಉನ್ನತ ಶ್ರೇಣಿಯ ಕ್ರೀಡಾಪಟುಗಳ ಸಾಲಿನಲ್ಲಿ ನಾನೂ ಸ್ಥಾನ ಪಡೆದಿರುವುದಕ್ಕಾಗಿ ಬಹಳ ಸಂತೋಷವಾಗಿದೆ.

ಇದು ಪ್ರತಿಯೊಬ್ಬರ ಮತ್ತು ನನ್ನ ಕುಟುಂಬದ ನೆರವಿನೊಂದಿಗೆ ಪಟ್ಟ ಪರಿಶ್ರಮಕ್ಕೆ ಸಂದ ಜೀವಮಾನದ ಬಹುಮಾನ. ಇದು ನನ್ನ ಅತಿದೊಡ್ಡ ಗೆಲುವು ಎಂದು ಅವರು ನುಡಿದರು.

ಪಂದ್ಯದ ಬಳಿಕ ಲೊಪೆಜ್ ಅವರು ತಮ್ಮ ನಿವೃತ್ತಿಯ ಸೂಚಕವಾಗಿ ತಮ ಶೂಗಳನ್ನು ಮ್ಯಾಟ್ನ ನಡುವೆ ಇರಿಸಿದರು. 2004ರಲ್ಲಿ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡ ಅವರು ಆಗ ಐದನೇ ಸ್ಥಾನ ಪಡೆದಿದ್ದರು. ಈಗ ದಾಖಲೆ ಚಿನ್ನದೊಂದಿಗೆ ಕುಸ್ತಿ ಕ್ರೀಡೆಗೆ ವಿದಾಯ ಹೇಳಿದ್ದಾರೆ.

RELATED ARTICLES

Latest News