Thursday, November 14, 2024
Homeರಾಷ್ಟ್ರೀಯ | Nationalಕೋರ್ಟ್‌ ಆದೇಶ ಲೆಕ್ಕಿಸದೆ 2ನೇ ಮದುವೆಯಾಗಿ ಪತ್ನಿ ಜೊತೆ ಪರಾರಿಯಾದ ಭೂಪ

ಕೋರ್ಟ್‌ ಆದೇಶ ಲೆಕ್ಕಿಸದೆ 2ನೇ ಮದುವೆಯಾಗಿ ಪತ್ನಿ ಜೊತೆ ಪರಾರಿಯಾದ ಭೂಪ

ಹೈದರಾಬಾದ್‌,ಆ.10– ವಿಚ್ಛೇದನ ಕೋರಿದ್ದ ಪತಿಗೆ ಕೆಲ ವರ್ಷಗಳ ಕಾಲ ಪತ್ನಿಯೊಂದಿಗೇ ಇದ್ದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯ ಹೇಳಿದ್ದರೂ ಕೂಡ ಮತ್ತೊಂದು ಮದುವೆಯಾಗಿ 2ನೇ ಪತ್ನಿಯೊಂದಿಗೆ ಪರಾರಿಯಾಗಿರುವ ಘಟನೆ ತೆಲಂಗಾಣದ ವಾರಂಗಲ್‌ ಜಿಲ್ಲೆಯ ಪೆದ್ದಾ ಪೆಂಡ್ಯಾಲ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ: 2016ರ ಏಪ್ರಿಲ್‌ನಲ್ಲಿ ತಿರುಮಲದ ಶ್ರೀ ಸಿದ್ದೇಶ್ವರ ಮಠದಲ್ಲಿ ಜಿ.ರಾಕೇಶ್‌ ಎಂಬ ವ್ಯಕ್ತಿ ಸಂಧ್ಯಾ ಅವರನ್ನು ವಿವಾಹವಾಗಿದ್ದರು. ಈ ವೇಳೆ ರಾಕೇಶ್‌ ಕುಟುಂಬ ಚಿನ್ನದ ಆಭರಣಗಳು ಸೇರಿದಂತೆ 15 ಲಕ್ಷ ರೂ.ವರದಕ್ಷಿಣೆ ತೆಗೆದುಕೊಂಡಿತ್ತು.

ಈಗ ದಂಪತಿಗೆ ಒಂದು ಹೆಣ್ಣು ಮಗುವಿದೆ. ಈಗ ರಾಕೇಶ್‌ ಸಂಧ್ಯಾ ಅವರಿಂದ ವಿಚ್ಛೇದನಕ್ಕೆ ಒತ್ತಾಯಿಸಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಪತ್ನಿ ಸಂಧ್ಯಾ ಬೇರೆಯಾಗಲು ಒಪ್ಪದೆ ಪತಿಯೊಂದಿಗೆ ಇರಲು ಅವಕಾಶ ನೀಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು.

ಇದರಿಂದ ರಾಕೇಶ್‌ ಮತ್ತು ಸಂಧ್ಯಾ ಕೆಲವು ವರ್ಷಗಳ ಕಾಲ ಒಟ್ಟಿಗೆ ವಾಸಿಸಿ ಅವರ ಘರ್ಷಣೆಯನ್ನು ಬಗೆಹರಿಸಿಕೊಳ್ಳುವಂತೆ ಕೋರ್ಟ್‌ ಆದೇಶಿಸಿದೆ. ಆದರೆ ಸಂಧ್ಯಾಗೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು ರಾಕೇಶ್‌ ಆಕೆಯನ್ನು ಹಿಂಸಿಸಲು ಪ್ರಾರಂಭಿಸಿದ್ದಾನೆ. ಅಲ್ಲದೆ ರಾಕೇಶ್‌ ಕುಟುಂಬ ಆಕೆ ಮನೆಗೆ ಪ್ರವೇಶಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದೆ.

ಭಯಗೊಂಡ ಸಂಧ್ಯಾ ತನ್ನ ಮಗಳೊಂದಿಗೆ ತನ್ನ ಹೆತ್ತವರ ಮನೆಗೆ ಅವರ ವಿಚ್ಛೇದನ ಪ್ರಕರಣವು ನ್ಯಾಯಾಲಯದಲ್ಲಿ ಇನ್ನೂ ಪ್ರಕ್ರಿಯೆಯಲ್ಲಿದೆ. ಏತನಧ್ಯೆ, ರಾಕೇಶ್‌ ಹೈದರಾಬಾದ್‌ನ ತೆಳ್ಳಗಡ್ಡಾದಲ್ಲಿ ನೆಲೆಸಿರುವ ಅಪರ್ಣಾ ಅವರೊಂದಿಗೆ ಎರಡನೇ ಮದುವೆಗೆ ಯೋಜಿಸಿ ಅವರ ನಿರೀಕ್ಷೆಯಂತೆ ವಿವಾಹವಾಗಿದ್ದಾರೆ.

ಮೊದಲ ಪತ್ನಿ ಸಂಧ್ಯಾ, ತಮ ಪುತ್ರಿ ಮಾನ್ವಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಸಿದ್ದೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ನವದಂಪತಿಯೊಂದಿಗೆ ಜಗಳವಾಡಿದ್ದಾರೆ. ಪರಿಸ್ಥಿತಿಗೆ ಹೆದರಿ ರಾಕೇಶ್‌ ಅಪರ್ಣಾ ಅವರೊಂದಿಗೆ ಪರಾರಿಯಾಗಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಏತನಧ್ಯೆ ತಿರುಮಲದಲ್ಲಿ ನಡೆದ ಈ ಘಟನೆಯನ್ನು ಕೇಳಿದ ಭಕ್ತರು ಕೋಪಗೊಂಡಿದ್ದಾರೆ. ಇಂತಹ ವಿವಾಹಗಳು ನಡೆಯದಂತೆ ಅಧಿಕಾರಿಗಳು ವಿಶೇಷ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ತಿರುಮಲದಲ್ಲಿ ಕುಟುಂಬ ಮತ್ತು ಜೀವನವನ್ನು ಹಾಳುಮಾಡುವ ಎರಡನೇ ಮದುವೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಕಟ್ಟುನಿಟ್ಟಾದ ನಿಯಮಗಳನ್ನು ಹೇರುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

RELATED ARTICLES

Latest News