Thursday, September 19, 2024
Homeರಾಷ್ಟ್ರೀಯ | Nationalಹಿಂಡೆನ್‌ಬರ್ಗ್‌ ಆರೋಪಗಳು ಆಧಾರರಹಿತ ಎಂದ ಸೆಬಿ ಅಧ್ಯಕ್ಷೆ ಮಾಧಬಿ ಪುರಿ, ಮತ್ತು ಪತಿ

ಹಿಂಡೆನ್‌ಬರ್ಗ್‌ ಆರೋಪಗಳು ಆಧಾರರಹಿತ ಎಂದ ಸೆಬಿ ಅಧ್ಯಕ್ಷೆ ಮಾಧಬಿ ಪುರಿ, ಮತ್ತು ಪತಿ

ನವದೆಹಲಿ,ಆ.11 -ಹಿಂಡೆನ್‌ಬರ್ಗ್‌ ಮಾಡಿರುವ ಆರೋಪಗಳನ್ನು ನಿರಾಧಾರ,ಸುಳ್ಳು ,ನಿರಾಧಾರ ಎಂದು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್‌ ಮತ್ತು ಅವರ ಪತಿ ಧವಲ್‌ ಬುಚ್‌ ಹೇಳಿದ್ದಾರೆ.ತಮ ಹಣಕಾಸು ತೆರೆದ ಪುಸ್ತಕವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಹಿಂಡೆನ್‌ಬರ್ಗ್‌ ರಿಸರ್ಚ್‌ ಮಾಹಿತಿ ದುರದಷ್ಟಕರ ಎಂದು ಹೇಳಿದ್ದಾರೆ.

ಅದಾನಿ ಕಂಪನಿಯ ಕಡಲಾಚೆಯ ನಿಧಿಗಳಲ್ಲಿ ಸೆಬಿ ಅಧ್ಯಕ್ಷೆ ಮಧಬಿ ಪುರೋ ಬುಚ್‌ ಮತ್ತು ಅವರ ಪತಿ ಪಾಲುಗಳನ್ನು ಹೊಂದಿದ್ದಾರೆ ಎಂದು ಅಮೆರಿಕದ ಹಿಂಡೆನ್‌ಬರ್ಗ್‌ ರಿಸರ್ಚ್‌ ಆರೋಪಿಸಿ ಮತ್ತೆ ಗೊಂದಲ ಸೃಷ್ಟಿಗೆ ಮುಂದಾಗಿದೆ.ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಾಧಬಿ ಪುರಿ ಬುಚ್‌ ನಮ ವಿರುದ್ಧ ಆ.10 ರಂದು ಹಿಂಡೆನ್‌ಬರ್ಗ್‌ ವರದಿಯಲ್ಲಿ ಮಾಡಿದ ಆರೋಪಗಳು ಆಧಾರರಹಿತ,ನಾವು ಬಲವಾಗಿ ನಿರಾಕರಿಸುತ್ತೇವೆ ಎಂದು ಹೇಳಿದಾರೆ.

ಅವುಗಳು ಯಾವುದೇ ಸತ್ಯವನ್ನು ಹೊಂದಿಲ್ಲ. ನಮ ಜೀವನ ತೆರೆದ ಪುಸ್ತಕವಾಗಿದೆ. ಅಗತ್ಯವಿರುವ ಎಲ್ಲಾ ಬಹಿರಂಗಪಡಿಸುವಿಕೆಗಳನ್ನು ಈಗಾಗಲೇ ವರ್ಷಗಳಲ್ಲಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾವು ಕಟ್ಟುನಿಟ್ಟಾಗಿ ಖಾಸಗಿ ನಾಗರಿಕರಾಗಿದ್ದ ಅವಧಿಗೆ ಸಂಬಂಧಿಸಿದವುಗಳನ್ನು ಒಳಗೊಂಡಂತೆ ಯಾವುದೇ ಮತ್ತು ಎಲ್ಲಾ ಹಣಕಾಸಿನ ದಾಖಲೆಗಳನ್ನು ಬಹಿರಂಗಪಡಿಸಲು ಯಾವುದೇ ಹಿಂಜರಿಕೆಯಿಲ್ಲ ಎಂದು ಹೇಳಿದರು, ಇದಲ್ಲದೆ, ಸಂಪೂರ್ಣ ಪಾರದರ್ಶಕತೆಯ ಹಿತದಷ್ಟಿಯಿಂದ, ನಾವು ಸರಿಯಾದ ಸಮಯದಲ್ಲಿ ವಿವರವಾದ ಹೇಳಿಕೆಯನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

RELATED ARTICLES

Latest News