Sunday, November 10, 2024
Homeಕ್ರೀಡಾ ಸುದ್ದಿ | Sportsಒಲಂಪಿಕ್‌ಗೆ ವಿಶಿಷ್ಟ ಕೊಡುಗೆಗಾಗಿ ಅಭಿನವ್‌ ಬಿಂದ್ರಾಗೆ ಪ್ರತಿಷ್ಠಿತ ಒಲಿಂಪಿಕ್‌ ಆರ್ಡರ್‌ ಗೌರವ

ಒಲಂಪಿಕ್‌ಗೆ ವಿಶಿಷ್ಟ ಕೊಡುಗೆಗಾಗಿ ಅಭಿನವ್‌ ಬಿಂದ್ರಾಗೆ ಪ್ರತಿಷ್ಠಿತ ಒಲಿಂಪಿಕ್‌ ಆರ್ಡರ್‌ ಗೌರವ

ಪ್ಯಾರಿಸ್‌‍, ಆ.11-ಭಾರತದ ಶೂಟಿಂಗ್‌ ಐಕಾನ್‌ ಅಭಿನವ್‌ ಬಿಂದ್ರಾ ಅವರು ಒಲಿಂಪಿಕ್‌ ಆಂದೋಲನಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ಒಲಿಂಪಿಕ್‌ ಆರ್ಡರ್‌ ಗೌರವ ನೀಡಿ ಅಭಿನಂಧಿಸಲಾಗಿದೆ.

ಕಳೆದ 2008 ರ ಬೀಜಿಂಗ್‌ ಕ್ರೀಡಾಕೂಟದಲ್ಲಿ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ಮೊಟ್ಟಮೊದಲ ಒಲಿಂಪಿಕ್‌ ವೈಯಕ್ತಿಕ ಚಿನ್ನದ ಪದಕ ಗೆದ್ದಿದ್ದ ಬಿಂದ್ರ ಅವರು ಬಿಂದ್ರಾ ಅವರು 2018 ರಿಂದ ಓಲಂಪಿಕ್‌ ಅಥ್ಲೀಟ್‌ಗಳ ಆಯೋಗದ ಉಪಾಧ್ಯಕ್ಷರಾಗಿದ್ದಾರೆ .ಶನಿವಾರ ನಡೆದ 142 ನೇ ಅಧಿವೇಶನದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯಿಂದ ಗೌರವವನ್ನು ಸ್ವೀಕರಿಸಿದ್ದಾರೆ.

ನಾನು ಚಿಕ್ಕ ಹುಡುಗನಾಗಿದ್ದಾಗ, ಈ ಒಲಿಂಪಿಕ್‌ ಉಂಗುರಗಳು, ನನ್ನ ಜೀವನಕ್ಕೆ ಅರ್ಥವನ್ನು ನೀಡಿತು ಮತ್ತು ಎರಡು ದಶಕಗಳಿಂದ ನನ್ನ ಒಲಂಪಿಕ್‌ ಕನಸನ್ನು ಮುಂದುವರಿಸಲು ಸಾಧ್ಯವಾಗುವುದು ಎಂದು ಬಿಂದ್ರಾ ಹೇಳಿದರು.

ನನ್ನ ಅಥ್ಲೆಟಿಕ್‌ ವತ್ತಿಜೀವನದ ನಂತರ, ಒಲಿಂಪಿಕ್‌ ಆಂದೋಲನಕ್ಕೆ ಮರಳಿ ಕೊಡುಗೆ ನೀಡಲು ನನಗೆ ಮತ್ತಷ್ಟು ಉತ್ಸಾಹ ಹೆಚ್ಚಾಗಿದೆ ಇದು ನನಗೆ ದೊಡ್ಡ ಗೌರವವಾಗಿದೆ ಎಂದು ಅವರು ಹೇಳಿದರು.

ಐಒಸಿ ಅಥ್ಲೀಟ್‌ಗಳ ಆಯೋಗದ ಉಪಾಧ್ಯಕ್ಷರೂ ಆಗಿರುವ 41ರ ಹರೆಯದ ಬಿಂದ್ರ ಅವರು, ಈ ಪ್ರಶಸ್ತಿಯು ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಲು ಮತ್ತು ಒಲಿಂಪಿಕ್‌ ಆಂದೋಲನಕ್ಕೆ ಕೊಡುಗೆ ನೀಡಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

1975 ರಲ್ಲಿ ಸ್ಥಾಪಿಸಲಾದ ಒಲಂಪಿಕ್‌ ಆರ್ಡರ್‌ ಒಲಿಂಪಿಕ್‌ ಚಳುವಳಿಯ ಅತ್ಯುನ್ನತ ಪ್ರಶಸ್ತಿಯಾಗಿದೆ. ಒಲಿಂಪಿಕ್‌ ಆಂದೋಲನಕ್ಕೆ ಅವರ ವಿಶಿಷ್ಟ ಕೊಡುಗೆಗಳಿಗಾಗಿ ಇದನ್ನು ವ್ಯಕ್ತಿಗಳಿಗೆ ನೀಡಲಾಗುತ್ತದೆ.ಬಿಂದ್ರಾ ಅವರು ಸಿಡ್ನಿ 2000 ರಲ್ಲಿ ಆರಂಭವಾದ ಐದು ಆವತ್ತಿಗಳಲ್ಲಿ ಬೇಸಿಗೆ ಕ್ರೀಡಾಕೂಟದಲ್ಲಿ ಕಾಣಿಸಿಕೊಂಡರು. ಅವರು ಮೊದಲ ಬಾರಿಗೆ ಅಥೆನ್‌್ಸ2004 ರಲ್ಲಿ ಪುರುಷರ 10 ಮೀ.ಏರ್‌ ರೈಫಲ್‌ನ ಫೈನಲ್‌ಗೆ ತಲುಪಿದಾಗ ಅವರು ತಮ ಛಾಪು ಮೂಡಿಸಿದರು.

ಬೀಜಿಂಗ್‌ 2008 ರಲ್ಲಿ, ಅವರು ಹಾಲಿ ಚಾಂಪಿಯನ್‌ ಚೀನಾದ ಝು ಕಿನಾನ್‌ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದರು. ಅವರು ರಿಯೊ 2016 ರಲ್ಲಿ ಫೈನಲ್‌ ಮಾಡಿದರು, ಆದರೆ ನಾಲ್ಕನೇ ಸ್ಥಾನ ಪಡೆದರು.

RELATED ARTICLES

Latest News