Sunday, November 10, 2024
Homeರಾಷ್ಟ್ರೀಯ | Nationalಸೆಬಿ ಅನುಮಾನಿಸಿದ ರಾಹುಲ್‌ ಗಾಂಧಿಗೆ ಬಿಜೆಪಿ ತರಾಟೆ

ಸೆಬಿ ಅನುಮಾನಿಸಿದ ರಾಹುಲ್‌ ಗಾಂಧಿಗೆ ಬಿಜೆಪಿ ತರಾಟೆ

ನವದೆಹಲಿ,ಆ.12- ಅಮೆರಿಕ ಮೂಲದ ಹಿಂಡೆನ್‌ಬರ್ಗ್‌ ಸಂಸ್ಥೆಯ ಇತ್ತೀಚಿನ ಆರೋಪಗಳ ಆಧಾರದ ಮೇಲೆ ಭಾರತೀಯ ಷೇರು ಮಾರುಕಟ್ಟೆಗಳ ಸಮಗ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಕ್ಕಾಗಿ ಬಿಜೆಪಿ ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಪ್ರತಿಪಕ್ಷದ ನಾಯಕ ಈಗ ಬಹಿರಂಗವಾಗಿ ಭಾರತೀಯ ಷೇರು ಮಾರುಕಟ್ಟೆಯ ನೈಜತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿದ್ದಾರೆ. ನಮ್ಮ ಆರ್ಥಿಕತೆಯ ಮೇಲಿನ ವಿಶ್ವಾಸವನ್ನು ಹಾಳುಮಾಡುವ ಈ ಅಬ್ಬರದ ಪ್ರಯತ್ನವು ರಾಹುಲ್‌ ಗಾಂಧಿಯವರ ನಿಜವಾದ ಉದ್ದೇಶವನ್ನು ಬಹಿರಂಗಪಡಿಸುತ್ತದೆ, ಇದು ಭಾರತದ ವಿನಾಶವಲ್ಲದೆ ಬೇರೇನೂ ಅಲ್ಲ ಎಂದು ಬಿಜೆಪಿ ನಾಯಕ ಅಮಿತ್‌ ಮಾಳವಿಯಾ ಅವರು ಎಕ್‌್ಸ ಮಾಡಿದ್ದಾರೆ.

ಹಿಂಡೆನ್‌ಬರ್ಗ್‌ ಮಾಡಿದ ಬೆಲೆ ಕುಶಲತೆಯ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಕ ವೈಫಲ್ಯವಿಲ್ಲ ಎಂದು ಸುಪ್ರೆಂ ಕೋರ್ಟ್‌ ನೇಮಿಸಿದ ತಜ್ಞರ ಸಮಿತಿಯ ತೀರ್ಮಾನದ ಹೊರತಾಗಿಯೂ ಗಾಂಧಿಯವರ ಹೇಳಿಕೆಗಳು ಬಂದಿರುವು ದುರದೃಷ್ಟಕರ ಎಂದಿದ್ದಾರೆ.

ಜನವರಿಯಲ್ಲಿ ಸಿಜೆಐ ಡಿವೈ ಚಂದ್ರಚೂಡ್‌ ನೇತೃತ್ವದ ಸುಪ್ರೆಂ ಕೋರ್ಟ್‌, ಸೆಬಿಯಿಂದ ಯಾವುದೇ ಉದ್ದೇಶಪೂರ್ವಕ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿತ್ತು ಎನ್ನುವುದನ್ನು ಮಾಳವಿಯಾ ಸ್ಮರಿಸಿಕೊಂಡಿದ್ದಾರೆ.ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಗಮನಾರ್ಹ ಅಪಾಯವಿದೆ ಸೆಬಿಯ ಸಮಗ್ರತೆ ಅದರ ಅಧ್ಯಕ್ಷರ ವಿರುದ್ಧದ ಆರೋಪಗಳಿಂದ ಗಂಭೀರವಾಗಿ ರಾಜಿಯಾಗಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು.

ಹೊಸ ಹಿಂಡೆನ್‌ಬರ್ಗ್‌ ವರದಿಯು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್‌ ಮತ್ತು ಅವರ ಪತಿ ಧವಲ್‌ ಬುಚ್‌ ಅವರು ಆಪಾದಿತ ಅದಾನಿ ಮನಿ ಸೈಫನಿಂಗ್‌ ಹಗರಣದಲ್ಲಿ ಭಾಗಿಯಾಗಿರುವ ಕಡಲಾಚೆಯ ಘಟಕಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿತ್ತು. ಆದಾಗ್ಯೂ, ಸೆಬಿ ಅಧ್ಯಕ್ಷರು ಮತ್ತು ಅದಾನಿ ಸಮೂಹವು ಈ ಆರೋಪಗಳನ್ನು ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಕರೆದಿದ್ದರು.

RELATED ARTICLES

Latest News