Sunday, September 15, 2024
Homeಬೆಂಗಳೂರುಗ್ರೇಟರ್‌ ಬೆಂಗಳೂರು ರಚನೆ ಬಿಟ್ಟು ಬಿಬಿಎಂಪಿ ಚುನಾವಣೆ ನಡೆಸುವಂತೆ ಸಿಎಂಗೆ ಪತ್ರ

ಗ್ರೇಟರ್‌ ಬೆಂಗಳೂರು ರಚನೆ ಬಿಟ್ಟು ಬಿಬಿಎಂಪಿ ಚುನಾವಣೆ ನಡೆಸುವಂತೆ ಸಿಎಂಗೆ ಪತ್ರ

ಬೆಂಗಳೂರು,ಆ.12- ಗ್ರೀಟರ್‌ ಬೆಂಗಳೂರು ರಚನೆ ಬಗ್ಗೆ ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆ ಯೋಚನೆ ಕೈಬಿಟ್ಟು ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಪತ್ರ ಬರೆದಿದೆ.

ಗ್ರೇಟರ್‌ ಬೆಂಗಳೂರು ರಚನೆಯಲ್ಲಿ ಪ್ರಗತಿಪರ ಅಂಶಗಳಿಲ್ಲ ಎಂದು ನಾಗರಿಕರ ಅಭಿಪ್ರಾಯವಾಗಿದೆ. ಅಲ್ಲದೆ ಬ್ರಾಂಡ್‌ ಬೆಂಗಳೂರು ಸಮಿತಿ ನೀಡಿದ್ದ ಹಲವು ಅಪೇಕ್ಷಣೀಯ ಶಿಫಾರಸ್ಸುಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಅಮರೇಶ್‌ ಅವರು ಸಿಎಂಗೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮೆಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ಮಂಡಿಸಿರುವ ಗ್ರೀಟರ್‌ ಬೆಂಗಳೂರು ಆಡಳಿತ ಮಸೂದೆಗೆ ಜನಾಗ್ರಹ ಸಂಸ್ಥೆ ನಡೆಸಿದ ತುಲನಾತ್ಮಕ ವಿಶ್ಲೇಷಣೆಯಲ್ಲಿ 10 ಅಂಕಗಳಿಗೆ ಕೇವಲ 3.35 ಅಂಕಗಳು ಸಾರ್ವಜನಿಕರಿಂದ ಲಬಿಸಿರುವುದು ಬಿಬಿಜಿ ಜನಪ್ರಿಯ ಅಲ್ಲವೆಂದು ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಆದೇಶಿಸುವುದೋ ಎಂಬ ಭಯದಿಂದ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಕಾರಣಕ್ಕಾಗಿ ಸದರಿ ಜನಪ್ರಿಯವಲ್ಲದ ಜಿಬಿಜಿ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಿದಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಕಳೆದ 4 ವರ್ಷ ಕಳೆದರೂ ಚುನಾವಣೆ ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ಆದ್ದರಿಂದ ತಕ್ಷಣವೇ ಜಿಬಿಜಿ ಮಸೂದೆಯನ್ನು ಕೈಬಿಟ್ಟು ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News