Saturday, November 23, 2024
Homeಆರೋಗ್ಯ / ಜೀವನಶೈಲಿಸಾರ್ಕೋಮಾ ಕ್ಯಾನ್ಸರ್‌ ಬಗ್ಗೆ ಜಾಗೃತಿ ವಾಕಥಾನ್

ಸಾರ್ಕೋಮಾ ಕ್ಯಾನ್ಸರ್‌ ಬಗ್ಗೆ ಜಾಗೃತಿ ವಾಕಥಾನ್

ಬೆಂಗಳೂರು: ಅಪರೂಪದ ಕ್ಯಾನ್ಸರ್‌ಗಳಲ್ಲಿ ಒಂದಾದ “ಸಾರ್ಕೋಮಾ” ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ “ಸಾರ್ಕೋಮಾ ಸ್ಟ್ರಾಂಗ್‌ ರೈಟ್‌ ಸ್ಟೆಪ್‌ ಫಸ್ಟ್‌ ಟೈಮ್‌” ಶೀರ್ಷಿಕೆಯಡಿ 5ಕೆ ವಾಕಥಾನ್ ನಡೆಸಿತು.

ಸೆಂಟ್‌ಜೋಸೆಫ್‌ ಮೈದಾನದಿಂದ ಬೆಳಗ್ಗೆ 7ಗಂಟೆಗೆ ಪ್ರಾರಂಭಗೊಂಡ ವಾಕಥಾನ್‌ ಕಬ್ಬನ್‌ಪಾರ್ಕ್‌, ವಿಧಾನಸೌಧದ ಸುತ್ತಮುತ್ತಲ ಪ್ರದೇಶದ ಮೂಲಕ ಹಾದು ಹೋಯಿತು. ಈ ವಾಕಥಾನ್‌ನಲ್ಲಿ ಸಾರ್ಕೋಮಾ ಕ್ಯಾನ್ಸರ್‌ನಿಂದ ಬದುಕುಳಿದ ಪ್ರತೀಕ್ಷಾ, ನೌಕಾಪಡೆಯ ಅಧಿಕಾರಿ ಅರ್ನಾಲ್ಡ್ ರೆಗೊ, ಎಚ್‌ಸಿಜಿ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್, ಆರ್ತ್ರೋಪೆಡಿಕ್ ಆಂಕೊಲಾಜಿ ಮುಖ್ಯಸ್ಥ ಡಾ. ಪ್ರಮೋದ್ ಎಸ್. ಚಿಂದರ್ ಹಾಗೂ ಕ್ಯಾನ್ಸರ್‌ನಿಂದ ಬದುಕುಳಿದ ರೋಗಿಗಳು, ಅವರ ಕುಟುಂಬಸ್ಥರು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಸುಮಾರು 850 ಜನರು ಉತ್ಸಾಹದಿಂದ ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಎಚ್‌ಸಿಜಿ ಪ್ರಾದೇಶಿಕ ಮುಖ್ಯ \ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್, ಅಪರೂಪದ ಕ್ಯಾನ್ಸರ್‌ಗಳಲ್ಲಿ ಒಂದಾದ ಸಾರ್ಕೋಮಾ ಕ್ಯಾನ್ಸರ್‌ ಯಾವುದೇ ಗುಣಲಕ್ಷಣವಿಲ್ಲದೆ ಕಾಣಿಸಿಕೊಂಡು ಬಾಧಿಸುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ. ಈ ಕ್ಯಾನ್ಸರ್‌ನಿಂದ ಬದುಕುಳಿದವರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಕ್ಯಾನ್ಸರ್‌ ವಿರುದ್ಧ ಹೋರಾಡುವವರ ಜೊತೆ ನಾವಿದ್ದೇವೆ ಎಂಬ ಸಂದೇಶದೊಂದಿಗೆ ಈ ವಾಕಥಾನ್‌ ನಡೆಸಲಾಯಿತು.

RELATED ARTICLES

Latest News