Sunday, September 15, 2024
Homeರಾಷ್ಟ್ರೀಯ | Nationalರಾಜಧನ ವಿಚಾರ : ಕೇಂದ್ರದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ

ರಾಜಧನ ವಿಚಾರ : ಕೇಂದ್ರದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ,ಆ.14- ಖನಿಜಯುಕ್ತ ಭೂಮಿಯ ಮೇಲೆ ರಾಜಧನ ವಿಧಿಸಲು ರಾಜ್ಯ ಸರ್ಕಾರಗಳಿಗೆ ಹಕ್ಕು ಇದೆ ಎಂದು ನೀಡಿದ್ದ ತೀರ್ಪನ್ನು ಪುರ್ನಪರಿಶೀಲನೆ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಕಳದೆ ಜುಲೈ 25 ರ ತೀರ್ಪಿನ ಕುರಿತು ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ತಿರಸ್ಕರಿಸಿದ್ದು, ಏಪ್ರಿಲ್‌ 1, 2005 ರಿಂದ ರಾಯಲ್ಟಿ ಮರುಪಾವತಿ ಪಡೆಯಲು ಅವಕಾಶ ನೀಡಿದೆ.

ಈ ಹಿಂದೆ ಜುಲೈ 25ರ ತೀರ್ಪಿನ ನಿರೀಕ್ಷಿತ ಪರಿಣಾಮದ ವಾದವನ್ನು ತಿರಸ್ಕರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿದೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್‌‍, ಅಭಯ್‌ ಎಸ್‌‍ ಓಕಾ, ಬಿವಿ ನಾಗರತ್ನ, ಜೆಬಿ ಪರ್ದಿವಾಲಾ, ಮನೋಜ್‌ ಮಿಶ್ರಾ, ಉಜ್ಜಲ್‌ ಭುಯಾನ್‌, ಸತೀಶ್‌ ಚಂದ್ರ ಶರ್ಮಾ ಮತ್ತು ಆಗಸ್ಟಿನ್‌ ಜಾರ್ಜ್‌ ಮಸಿಹ್‌ ಅವರನ್ನೊಳಗೊಂಡ ಪೀಠವು ಹಿಂದಿನ ಬಾಕಿ ಪಾವತಿಗೆ ಷರತ್ತುಗಳಿವೆ.

ಜೊತೆಗೆ ಮುಂದಿನ 12 ವರ್ಷಗಳಲ್ಲಿ ಕೇಂದ್ರ ಮತ್ತು ಗಣಿ ಕಂಪನಿಗಳು ಖನಿಜ ಸಮೃದ್ಧ ರಾಜ್ಯಗಳಿಗೆ ಬಾಕಿ ಪಾವತಿ ಮಾಡಬಹುದಾಗಿದೆ ಎಂದು ಅದು ಹೇಳಿದೆ. ಆದಾಗ್ಯೂ, ಬಾಕಿ ಪಾವತಿಗೆ ಯಾವುದೇ ರೀತಿಯ ದಂಡವನ್ನು ವಿಧಿಸದಂತೆ ಪೀಠವು ರಾಜ್ಯಗಳಿಗೆ ನಿರ್ದೇಶನ ನೀಡಿದೆ.

1989 ರಿಂದ ಗಣಿ ಮತ್ತು ಖನಿಜಗಳ ಮೇಲೆ ವಿಧಿಸಲಾದ ರಾಯಲ್ಟಿ ಮರುಪಾವತಿಗಾಗಿ ರಾಜ್ಯಗಳ ಬೇಡಿಕೆಯನ್ನು ಕೇಂದ್ರವು ವಿರೋಧಿಸಿತ್ತು. ಇದು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ. ಆರಂಭಿಕ ಅಂದಾಜಿನ ಪ್ರಕಾರ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 70,000 ಕೋಟಿಗಳಷ್ಟು ಹೊರೆಯಾಗುತ್ತದೆ ಎಂದು ಹೇಳಿತ್ತು.

ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ನೀಡುವ ಜುಲೈ 25 ರ ತೀರ್ಪನ್ನು ಬಹುಮತದಿಂದ ನಿರ್ಧರಿಸಿದ ಪೀಠದ ಎಂಟು ನ್ಯಾಯಾಧೀಶರು ಈ ತೀರ್ಪಿಗೆ ಸಹಿ ಹಾಕುತ್ತಾರೆ ಎಂದು ಸಿಜೆಐ ಚಂದ್ರಚೂಡ್‌ ಹೇಳಿದರು.ಜುಲೈ 25ರ ತೀರ್ಪಿನಲ್ಲಿ ನ್ಯಾಯಮೂರ್ತಿ ನಾಗರತ್ನ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಬುಧವಾರದ ತೀರ್ಪಿಗೆ ಸಹಿ ಹಾಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜುಲೈ 25 ರಂದು 8:1 ರ ಬಹುಮತದ ತೀರ್ಪಿನಲ್ಲಿ, ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಶಾಸಕಾಂಗ ಅಧಿಕಾರವನ್ನು ರಾಜ್ಯಗಳ ವ್ಯಾಪ್ತಿಗೆ ನೀಡಿ ಮಹತ್ವದ ತೀರ್ಪು ನೀಡಿತ್ತು. ಇದರಿಂದಾಗಿ 1989 ರ ತೀರ್ಪನ್ನು ರದ್ದುಗೊಂಡಿತ್ತು. ಇದು ಖನಿಜಗಳು ಮತ್ತು ಖನಿಜಗಳನ್ನು ಹೊಂದಿರುವ ಭೂಮಿಯ ಮೇಲೆ ರಾಯಧನವನ್ನು ವಿಧಿಸುವ ಅಧಿಕಾರವನ್ನು ಕೇಂದ್ರಕ್ಕೆ ಮಾತ್ರ ಹೊಂದಿದೆ ಎಂಬುದಾಗಿತ್ತು.

1989 ರ ತೀರ್ಪಿನ ನಂತರ ಕೆಲವು ಖನಿಜ ಶ್ರೀಮಂತ ರಾಜ್ಯಗಳು ಕೇಂದ್ರದಿಂದ ವಿಧಿಸಲಾದ ರಾಯಲ್ಟಿ ಮತ್ತು ಗಣಿ ಕಂಪನಿಗಳಿಂದ ತೆರಿಗೆಗಳನ್ನು ಮರುಪಾವತಿಸಲು ಕೋರಿದ್ದವು. ಮರುಪಾವತಿ ವಿಚಾರವನ್ನು ಜುಲೈ 31ರಂದು ವಿಚಾರಣೆ ನಡೆಸಿ ಆದೇಶವನ್ನು ಕಾಯ್ದಿರಿಸಲಾಗಿತ್ತು ರಾಜಧನ ಸಂಗ್ರಹಿಸಲು ರಾಜ್ಯ ಸರ್ಕಾರಗಳಿಗೆ ಅರ್ಹತೆ ಹಾಗೂ ಅಧಿಕಾರ ಎರಡೂ ಇದೆ ಎಂದು ನ್ಯಾಯಾಲಯ ಹೇಳಿತ್ತು.

ಈ ತೀರ್ಪಿನಿಂದ ಒಡಿಶಾ, ಜಾರ್ಖಂಡ್‌, ಬಂಗಾಳ, ಛತ್ತೀಸ್‌‍ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ಖನಿಜ ಸಂಪತ್ತನ್ನು ಹೊಂದಿರುವ ರಾಜ್ಯಗಳಿಗೆ ಅನುಕೂಲವಾಗಲಿದೆ. ಇಲ್ಲಿನ ಸರ್ಕಾರಗಳು ತಮ ರಾಜ್ಯದೊಳಗೆ ಕಾರ್ಯ ನಿರ್ವಹಣೆ ಮಾಡುತ್ತಿರುವ ಗಣಿ ಕಂಪೆನಿಗಳಿಂದ ಹೆಚ್ಚುವರಿ ರಾಜಸ್ವ ಸಂಗ್ರಹಿಸಲು ಸಾಧ್ಯವಾಗಲಿದೆ.

ರಾಜಸ್ವ ಮತ್ತು ಬಾಡಿಗೆಯ ಸಾಲ ಎರಡೂ ತೆರಿಗೆಯ ಉದ್ದೇಶವನ್ನು ಪೂರೈಸುವುದಿಲ್ಲ. ಖನಿಜ ಮೇಲೆ ತೆರಿಗೆ ವಿಽಸುವ ರಾಜ್ಯಗಳ ಅಽ ಕಾರದ ಮೇಲೆ ಮಿತಿಯ ಬಗ್ಗೆ ಗಣಿ ಹಾಗೂ ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆಯಲ್ಲಿ (ಎಂಎಂಡಿಆರ್‌ಎ) ಯಾವುದೇ ನಿಯಮ ಇಲ್ಲ ಎಂದು ತೀರ್ಪು ಹೇಳಿತ್ತು.

ಸಂಸತ್‌ಗೆ ಮಾತ್ರ ಇದೆ ಎಂದಿದ್ದ ಸರ್ಕಾರ :
ಖನಿಜಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ಸಂಸತ್‌ಗೆ ಮಾತ್ರವೇ ಇದೆ, ರಾಜ್ಯಗಳಿಗೆ ಇಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಮಾರ್ಚ್‌ ತಿಂಗಳಲ್ಲಿ ರಾಜ್ಯ ಸರ್ಕಾರಗಳ ವಾದ ಆಲಿಸಿದ್ದ ಸಿಜೆಐ, ರಾಜಸ್ವ ಸಂಗ್ರಹಣೆ ಅಧಿಕಾರವು ಸಂವಿಧಾನದ ಪ್ರಕಾರ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಅಧಿಕಾರ ಹಂಚಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಯೇ ಎಂದು ಕೇಂದ್ರ ಸರ್ಕಾರದ ಪರ ವಕೀಲರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಪ್ರಶ್ನಿಸಿದ್ದರು.

ಅಂತಹ ತೆರಿಗೆ ವಿಧಿಸಿದರೆ ಅದು ಅಮಾನ್ಯವಾಗುತ್ತದೆ ಹಾಗೂ ಅಸಾಂವಿಧಾನಿಕವಾಗುತ್ತದೆ. ಏಕರೂಪತೆಗಾಗಿ ಕೇಂದ್ರ ಸರ್ಕಾರವೇ ತೆರಿಗೆ ಪ್ರಮಾಣ ನಿರ್ಧರಿಸುತ್ತದೆ ಎಂದು ಮೆಹ್ತಾ ತಿಳಿಸಿದ್ದರು.

RELATED ARTICLES

Latest News