Wednesday, September 11, 2024
Homeಇದೀಗ ಬಂದ ಸುದ್ದಿಬೆಂಗಳೂರಲ್ಲಿ ಚಾಕು ಇರಿದು ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಭೀಕರ ಕೊಲೆ

ಬೆಂಗಳೂರಲ್ಲಿ ಚಾಕು ಇರಿದು ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಭೀಕರ ಕೊಲೆ

ಬೆಂಗಳೂರು,ಆ.14- ಖಾಲಿ ಜಾಗದಲ್ಲಿ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಗೌರಿ (30) ಕೊಲೆಯಾದ ಮಹಿಳೆ. ಬನಶಂಕರಿ 6ನೇ ಹಂತದ ಜಟಗರಹಳ್ಳಿಯಲ್ಲಿ ಈಕೆ ಗಂಡನ ಜೊತೆ ವಾಸವಾಗಿದ್ದರು. ಪಿರಿಯಾಪಟ್ಟಣದಲ್ಲಿದ್ದ ಗೌರಿ ಒಂದು ವಾರದ ಹಿಂದೆಯಷ್ಟೇ ಇಲ್ಲಿಗೆ ಬಂದಿದ್ದರು. ಈ ನಡುವೆ ರಾತ್ರಿ ಜಟಗರಹಳ್ಳಿಯ ಖಾಲಿ ಜಾಗದಲ್ಲಿ ಈ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಸುದ್ದಿ ತಿಳಿದು ಕೆಂಗೇರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈಕೆಯ ಗಂಡನೇ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

RELATED ARTICLES

Latest News