Monday, September 16, 2024
Homeಬೆಂಗಳೂರುಬೆಂಗಳೂರಿಗೆ ಬಂದ ಡೈಮಂಡ್ ಗಣಪ

ಬೆಂಗಳೂರಿಗೆ ಬಂದ ಡೈಮಂಡ್ ಗಣಪ

ಬೆಂಗಳೂರು, ಆ.14– ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಮಿಲ್ಕ್ ಕಾಲೋನಿಯ ಸ್ವಸ್ತಿಕ್‌ ಯುವಕರ ಸಂಘದಿಂದ ಅದ್ಧೂರಿ ಗಣೇಶೋತ್ಸವ ಕಾರ್ಯಕ್ರಮ ಹಮಿಕೊಂಡಿದ್ದು, ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ.

ದೇಶದಲ್ಲೇ ದುಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹೆಸರಾಗಿರುವ ಸಂಘ ಈ ಬಾರಿಯೂ ಸಹ ಅಮೆರಿಕನ್ ಡೈಮಂಡ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಿದೆ.

ಸುಮಾರು 14 ಲಕ್ಷ ಮೌಲ್ಯದ ಗಣೇಶ ಮೂರ್ತಿ ಇದಾಗಿದ್ದು, 180 ಕೆಜಿ ಅಮೆರಿಕನ್‌ ಡೈಮಂಡ್‌ ಬಳಸಿ 7.5 ಅಡಿ ಎತ್ತರದ ಮೂರ್ತಿಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನುರಿತ ಕಲಾವಿದರು ಶ್ರಮಪಟ್ಟು ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ.

ಲಾರಿ ಮುಖಾಂತರ ನಗರಕ್ಕೆ ಇಂದು ಬೆಳಗ್ಗೆ 6 ಗಂಟೆಗೆ ಪ್ರವೇಶಿಸಿದ್ದ ಸ್ವಸ್ತಿಕ್‌ ಯುವಕರ ಸಂಘದ ಮುಖಂಡರು, ಸದಸ್ಯರು, ಪದಾಧಿಕಾರಿಗಳು ಹಾಗೂ ಮಿಲ್ಕ್ ಕಾಲೋನಿಯ ಭಕ್ತರು ಅದ್ಧೂರಿಯಾಗಿ ಮೂರ್ತಿಯನ್ನು ಬರಮಾಡಿಕೊಂಡರು.

RELATED ARTICLES

Latest News