Sunday, November 24, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(17-08-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(17-08-2024)

ನಿತ್ಯ ನೀತಿ : ಪ್ರತಿಯೊಂದು ಕಠಿಣ ಕೆಲಸವೂ ಸಮಯ ಕಳೆದಂತೆ ಸುಲಭದ ಕೆಲಸವಾಗಿ ಬದಲಾಗುತ್ತವೆ. ತಾಳ್ಮೆ ಇರಲಿ.

ಪಂಚಾಂಗ : ಶನಿವಾರ, 17-08-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಪೂರ್ವಾಷಾಢ /

ಯೋಗ: ಪ್ರೀತಿ / ಕರಣ: ಕೌಲವ
ಸೂರ್ಯೋದಯ – ಬೆ.06.06
ಸೂರ್ಯಾಸ್ತ – 06.40
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಕೆಲಸ ಇರುವುದು. ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ.
ವೃಷಭ: ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಅನಾಯಾಸವಾಗಿ ಮುಗಿಯಲಿವೆ.
ಮಿಥುನ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡ ಬೇಡಿ. ಖರ್ಚು ಸ್ವಲ್ಪ ಹೆಚ್ಚಾಗಬಹುದು.

ಕಟಕ: ಸಹೋದರರು, ಬಂಧುಗಳು ನೀಡುವ ಸಲಹೆಗಳಿಂದ ಸಮಸ್ಯೆಗಳು ದೂರವಾಗಲಿವೆ.
ಸಿಂಹ: ಅತ್ತೆ ಕಡೆಯಿಂದ ಮಾನಸಿಕ ಒತ್ತಡ, ಕಿರುಕುಳ ಎದುರಿಸಬೇಕಾಗಬಹುದು.
ಕನ್ಯಾ: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.

ತುಲಾ: ಬದುಕಿನಲ್ಲಿ ತಿರುವು ಪಡೆಯುವಿರಿ. ವ್ಯಾಪಾರದಲ್ಲಿ ಲಾಭ.
ವೃಶ್ಚಿಕ: ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗಲಿದೆ.
ಧನುಸ್ಸು: ಹೊಸ ಹೊಸ ಅವಕಾಶಗಳು ಒದಗಿ ಬರಲಿವೆ. ಹಿಂದೆ ಎದುರಿಸಿದ ತೊಂದರೆಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಮಕರ: ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿ ಗಳಿಂದ ಸಹಾಯ-ಸಹಕಾರ ಸಿಗಲಿದೆ.
ಕುಂಭ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.
ಮೀನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಹಿರಿಯರ ಸಲಹೆ ಪಡೆಯಿರಿ.

RELATED ARTICLES

Latest News