ನಿತ್ಯ ನೀತಿ : ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲಮಂತ್ರ. ಶಿಕ್ಷಣ ಎಂದಿಗೂ ಎಡವಲು ಬಿಡುವುದಿಲ್ಲ. ಸಂಸ್ಕಾರ ಕೆಡಲು ಬಿಡುವುದಿಲ್ಲ.
ಪಂಚಾಂಗ : ಭಾನುವಾರ , 18-08-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಉತ್ತರಾಷಾಢ / ಯೋಗ: ಆಯುಷ್ಮಾನ್ / ಕರಣ: ಗರಜೆ
ಸೂರ್ಯೋದಯ – ಬೆ.06.06
ಸೂರ್ಯಾಸ್ತ – 06.39
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಮನೆಗೆ ಹೊಸ ಅತಿಥಿಯೊಬ್ಬರ ಸೇರ್ಪಡೆಯಾಗುವುದರಿಂದ ಸಂತೋಷವಾಗುತ್ತದೆ.
ವೃಷಭ: ಮಿತ್ರರಿಂದ ಮನಸ್ಸಿಗೆ ನೋವಾಗುವಂತಹ ಮಾತುಗಳನ್ನು ಕೇಳಬೇಕಾಗಬಹುದು.
ಮಿಥುನ: ಮನೆಯಲ್ಲಿ ಮಂಗಳಕರ ಕಾರ್ಯ ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.
ಕಟಕ: ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ.
ಸಿಂಹ: ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿ ಯಿಂದ ಸಹಾಯ ಸಿಗಲಿದೆ.
ಕನ್ಯಾ: ನಿಮ್ಮ ನಡವಳಿಕೆ ಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ತುಲಾ: ಹಳೆ ಮಿತ್ರರನ್ನು ಭೇಟಿ ಮಾಡುವಿರಿ. ಅತಿಯಾದ ಆತ್ಮವಿಶ್ವಾಸ ಬೇಡ.
ವೃಶ್ಚಿಕ: ದುರಭ್ಯಾಸದಿಂದ ದೂರ ಉಳಿಯುವ ನಿಮ್ಮ ನಿರ್ಧಾರ ಪ್ರಯೋಜನಕಾರಿಯಾಗಲಿದೆ.
ಧನುಸ್ಸು: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಸ್ನೇಹಿತರ ಬೆಂಬಲ ಸಿಗಲಿದೆ.
ಮಕರ: ಸಂದರ್ಭಕ್ಕನುಸಾರವಾಗಿ ವರ್ತಿಸುವುದರಿಂದ ಒಳಿತಾಗಲಿದೆ.
ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ತೊಡಗಬೇಕೆಂಬ ಆಲೋಚನೆಗಳು ಬರಲಿವೆ.
ಮೀನ: ಹಿತಶತ್ರುಗಳ ಒಳಸಂಚು ನಿಮ್ಮ ಗಮನಕ್ಕೆ ಬರಲಿದ್ದು, ಧೈರ್ಯದಿಂದ ಎದುರಿಸಿ.