Thursday, April 3, 2025
Homeರಾಷ್ಟ್ರೀಯ | Nationalಲಂಡನ್‌ನ ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

ಲಂಡನ್‌ನ ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

ನವದೆಹಲಿ,ಆ.18– ಲಂಡನ್‌ನ ಹೋಟೆಲ್‌ನಲ್ಲಿ ಏರ್‌ ಇಂಡಿಯಾದ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸಲ್ಪಡುವ ಹೋಟೆಲ್‌ನಲ್ಲಿನ ತಂಗಿದ್ದ ಮಹಿಳಾ ಸಿಬ್ಬಂದಿ ಮೇಲೆ ಅಕ್ರಮವಾಗಿ ಒಳನುಗಿದ ಯುವಕ ಹಲ್ಲೆ ನಡೆಸಿದ್ದಾನೆ ಘಟನೆಯಿಂದ ತೀವ್ರ ದುಃಖವಾಗಿದೆ, ಇದು ನಮ್ಮ ಸಿಬ್ಬಂದಿಯೊಬ್ಬರ ಮೇಲೆ ಪರಿಣಾಮ ಬೀರಿದೆ ಎಂದು ಏರ್‌ ಇಂಡಿಯಾ ವಕ್ತಾರರು ಹೇಳಿದರು.

ವಿಮಾನಯಾನ ಸಂಸ್ಥೆಯು ಸ್ಥಳೀಯ ಪೊಲೀಸರೊಂದಿಗೆ ದೂರು ನೀಡಿದೆ ಮೂಲಗಳ ಪ್ರಕಾರ ಮಹಿಳಾ ಕ್ಯಾಬಿನ್‌ ಸಿಬ್ಬಂದಿ ಉಳಿದುಕೊಂಡಿದ್ದ ಹೋಟೆಲ್‌ನ ಕೋಣೆಗೆ ಮನೆಯಿಲ್ಲದ ವ್ಯಕ್ತಿಯೊಬ್ಬ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿವೆ.

ಆಕೆ ಕೂಗುತ್ತಿದ್ದಂತೆಯೇ ಅಕ್ಕಪಕ್ಕದಲ್ಲಿದ್ದ ಇತರರು ಬಂದು ಆಕೆಯನ್ನು ರಕ್ಷಿಸಿದರು ಮತ್ತು ಆತ ಸಿಕ್ಕಿಬಿದ್ದಿದ್ದಾನೆ ಆದರೆಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಮೂಲವೊಂದು ಹೇಳಿದರೆ, ಆದರೆ ಕೆಲವರು ಇದು ದೈಹಿಕ ಹಲ್ಲೆ ಎಂದು ಹೇಳಿದ್ದಾರೆ. ಲಂಡನ್‌ ಹೀಥ್ರೂ ವಿಮಾನ ನಿಲ್ದಾಣದ ಸಮೀಪವಿರುವ ಸ್ಟಾರ್‌ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ .

ವೃತ್ತಿಪರ ಸಮಾಲೋಚನೆ ಸೇರಿದಂತೆ ಸಹೋದ್ಯೋಗಿ ಮತ್ತು ಅವರ ತಂಡಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸುತ್ತಿದೆ ಎಂದು ಏರ್‌ಲೈನ್‌‍ ಹೇಳಿಕೆಯಲ್ಲಿ ತಿಳಿಸಿದೆ.

ಏರ್‌ ಇಂಡಿಯಾ ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕದಲ್ಲಿದೆ ಮತ್ತು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಹೋಟೆಲ್‌ ಆಡಳಿತ ದೊಂದಿಗೆ ಮಾತುಕತೆ ನಡೆಸಿದೆ.

RELATED ARTICLES

Latest News