ಬೆಂಗಳೂರು,ಆ.20- ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರನ್ನುಬಿಜೆಪಿಯವರು ತಮ್ಮ ಏಜೆಂಟ ರಂತೆ ಪರಿವರ್ತಿಸಿಕೊಂಡಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿಯವರ ಜನ್ಮದಿನಾಚರಣೆ ಅಂಗವಾಗಿ ಶೇಷಾದ್ರಿಪುರಂ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಪ್ರತಿಭಟನೆಗೆ ತಿರುಗೇಟು ನೀಡಿದರು.
ರಾಜ್ಯಪಾಲರನ್ನು ಬಿಜೆಪಿಯವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಂವಿಧಾನ ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವ ಮಾರಕವಾಗುತ್ತಿದ್ದಾರೆ. ರಾಜ್ಯಪಾಲರನ್ನು ಪಕ್ಷದ ಏಜೆಂಟರನ್ನಾಗಿ ಮಾಡಿಕೊಂಡಿರುವುದಕ್ಕೆ ಇದೆಲ್ಲಾ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ತಕ್ಷಣವೇ ಅಭಿಯೋಜನೆಗೆ ಅನುಮೋದನೆ ನೀಡುವ ರಾಜ್ಯಪಾಲರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಪ್ರಕರಣದಲ್ಲಿ ಅದೇ ವೇಗದ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗಳು ಎದುರಾಗುತ್ತಿವೆ.
ನಾನು ರಾಜ್ಯಪಾಲರಿಗಾಗಿ, ಲೋಕಾಯುಕ್ತಕ್ಕಾಗಿ ವಕ್ತಾರನಲ್ಲ. ಕಾಂಗ್ರೆಸ್ ಪಕ್ಷದ ವಕ್ತಾರ. ಪ್ರಕರಣದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ನಂತರ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.
ಮಾಜಿ ಪ್ರಧಾನಿ ರಾಜೀವ್‍ಗಾಂಧಿಯವರು ದೇಶ ಕಂಡ ದೂರದರ್ಶಿ ನಾಯಕ. ಯುವಸಮುದಾಯದಲ್ಲಿ ನಾಯಕತ್ವವನ್ನು ಸೃಷ್ಟಿಸಿದವರು. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ಸಂದರ್ಭದಲ್ಲಿ ಪುತ್ಥಳಿಯನ್ನು ಪುನರುಜ್ಜೀವನಗೊಳಿಸಲು ನನ್ನ ವಿವೇಚನಾ ಅಧಿಕಾರವನ್ನು ಬಳಸಿಕೊಂಡು ಮೊದಲ ಕಡತಕ್ಕೆ ಸಹಿ ಹಾಕಿದ್ದೆ. ಜೊತೆಗೆ ಓಕಳಿಪುರಂನ ಸಿಗ್ನಲ್ ಫ್ರೀ ಕಾರಿಡಾರ್‍ಗೆ ರಾಜೀವ್‍ಗಾಂಧಿಯವರ ಹೆಸರನ್ನು ನಾಮಕರಣ ಮಾಡುತ್ತಿದ್ದೇವೆ ಎಂದರು.
ಪ್ರತಿವರ್ಷ ಬಿಬಿಎಂಪಿಯಿಂದ ರಾಜೀವ್‍ಗಾಂಧಿ ಜನ್ಮ ದಿನಾಚರಣೆಗಾಗಿ ಕಾರ್ಯಕ್ರಮ ಆಯೋಜಿಸಿ ಆದೇಶ ಹೊರಡಿಸುತ್ತಿದ್ದೇನೆ ಎಂದು ಹೇಳಿದರು. ರಾಜೀವ್‍ಗಾಂಧಿಯವರು ಹೊಸ ಪೀಳಿಗೆಗೆ ಮತದಾನದ ಹಕ್ಕು ನೀಡಿದರು. ಇಂದು ದೇಶದ ಪ್ರತಿಯೊಬ್ಬರ ಕೈಲಿ ಒಂದಕ್ಕಿಂತ ಹೆಚ್ಚು ಮೊಬೈಲ್‍ಗಳಿದ್ದರೆ ಆ ಕ್ರಾಂತಿಗೆ ರಾಜೀವ್ ಗಾಂಧಿ ಕಾರಣ. ಸಂವಿಧಾನಕ್ಕೆ ತಿದ್ದುಪಡಿ ತಂದು ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದ್ದು ರಾಜೀವ್‍ಗಾಂ„ಯವರು ಎಂದು ಹೇಳಿದರು.
ರಾಜೀವ್‍ಗಾಂಧಿ ಸೇರಿದಂತೆ ಅವರ ಕುಟುಂಬ ಈ ದೇಶಕ್ಕಾಗಿ ಮಾಡಿರುವ ತ್ಯಾಗ ಸ್ಮರಣೀಯ ಎಂದರು. ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.